More

    ಕರ್ನಾಟಕ ವಿಧಾನಸಭೆ ಚುನಾವಣೆ-2023: ಮೆಟ್ರೋ ಸೇವೆ ಮಧ್ಯರಾತ್ರಿವರೆಗೂ ವಿಸ್ತರಣೆ

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕೇವಲ ಎರಡು ದಿನಗಳು ಬಾಕಿಯಿದ್ದು, ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಇಂದು ಸಾಯಂಕಾಲ ಬಹಿರಂಗ ಪ್ರಚಾರ ಕೊನೆಗೊಳ್ಳಲಿದ್ದು, ಮೇ 10ರಂದು ಸಾರ್ವತ್ರಿಕ ಮತದಾನ ನಡೆಯಲಿದೆ. ಜನರ ಓಡಾಟಕ್ಕೆ ಸಹಾಯವಾಗಲಿ ಎಂದು ಬಿಎಂಆರ್​ಸಿಎಲ್​ ಮೆಟ್ರೊ ರೈಲು ತನ್ನ ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಿದೆ.

    ಇದನ್ನೂ ಓದಿ: ಬಿಜೆಪಿ ಪರ ಲಿಂಗಾಯತ ಮುಖಂಡರಿಂದ ಮತಯಾಚನೆ; ಡಾ. ವಿಜಯ ಸಂಕೇಶ್ವರ, ಪ್ರಲ್ಹಾದ ಜೋಶಿ ಭಾಗಿ

    ಮೇ.11ರ ರಾತ್ರಿ 12 ಗಂಟೆ 05 ನಿಮಿಷಕ್ಕೆ ಟರ್ಮಿನಲ್ ನಿಲ್ದಾಣಗಳಾದ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ ಸಂಸ್ಥೆ, ಕೃಷ್ಣರಾಜಪುರ ಮತ್ತು ವೈಟ್​ಫೀಲ್ಡ್​ (ಕಾಡುಗೋಡಿ)ನಿಂದ ಕೊನೆಯ ರೈಲು ಹೊರಡಲಿದೆ.ಇನ್ನು, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ನಿಂದ ಮೇ 11ರ ರಾತ್ರಿ 12 ಗಂಟೆ 35 ನಿಮಿಷಕ್ಕೆ ಕೊನೆಯ ರೈಲು ಎಲ್ಲಾ ನಾಲ್ಕು ದಿಕ್ಕುಗಳ ಕಡೆಗೆ ಅಂದರೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ, ಸಂಸ್ಥೆಗೆ ಹೊರಡಲಿದೆ.

    ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಕರ ಬೆಂಬಲಕ್ಕೆ ನಿಲ್ಲುವ ಬಿಎಂಆರ್​ಸಿಎಲ್ ಈ ಬಾರಿಯೂ ತನ್ನ ಸೇವೆಯನ್ನು ವಿಸ್ತರಿಸಲು ಮುಂದಾಗಿದೆ. ಈ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಬೇಕೆಂದು ಬಿಎಂಆರ್​ಸಿಎಲ್​ ಪ್ರಕಟಣೆ ಹೊರಡಿಸಿದೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts