More

    ಕಾರ್ಗಿಲ್ ವಿಜಯ ಭಾರತದ ಯಶೋಗಾಥೆ: ಸತ್ಯಜಿತ್ ಸುರತ್ಕಲ್‌

    ಮಂಗಳೂರು: ಕಾರ್ಗಿಲ್ ಯುದ್ಧ ಬಲವಾದ ರಾಜಕೀಯ, ಮಿಲಿಟರಿ ಹಾಗೂ ರಾಜತಾಂತ್ರಿಕ ಕ್ರಮಗಳ ಒಂದು ಯಶೋಗಾಥೆ. ಕಾರ್ಗಿಲ್ ವಿಜಯದ ಸಂಭ್ರಮಾಚರಣೆ ದೇಶಕ್ಕೆ ಹೆಮ್ಮೆಯ, ಗೌರವದ ಸಂಕೇತ ಎಂದು ಸುರತ್ಕಲ್‌ನ ರಾಷ್ಟ್ರಭಕ್ತ ನಾಗರಿಕ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.

    ಸುರತ್ಕಲ್‌ನ ರಾಷ್ಟ್ರಭಕ್ತ ನಾಗರಿಕ ವೇದಿಕೆ,ಕರ್ನಾಟಕ ಸೇವಾ ವೃಂದ ವೇದಿಕೆಯಿಂದ ಮಂಗಳೂರು ಕದ್ರಿಯ ಯುದ್ಧ ಸ್ಮಾರಕದ ತನಕ ಅಮರ ಜವಾನ ಜ್ಯೋತಿ ಮೆರವಣಿ ಕಾರ್ಯಕ್ರಮದ ಸಮಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಇಂದು ಸದೃಢ ಸೇನಾಬಲ, ಧ್ಯೆರ್ಯಶಾಲಿ ಕಿರಿಯರ ನಾಯಕತ್ವ ಹಾಗೂ ಯುದ್ಧತಂತ್ರ ಮಟ್ಟದಲ್ಲಿ ಜವಾನರ ಕಾರ್ಯದಕ್ಷತೆ, ಮುನ್ನುಗ್ಗಿ ನಡೆಯುವ ಮನೋಸ್ಥೈರ್ಯ ಸ್ಮರಿಸುವ ದಿನ ಎಂದರು.

    ಭೂಸೇನೆಯ ಮಾಜಿ ಯೋಧ ಸುರತ್ಕಲ್‌ನ ನಾರಾಯಣ ಲೀಲಾಧರ್ ಕಡಂಬೋಡಿ ಮತ್ತು ಮಾಜಿ ಯೋಧ ಉಳ್ಳಾಲ ಕುಂಪಲದ ನಾರಾಯಣ ಪ್ರವೀಣ ಶೆಟ್ಟಿ ಅವರನ್ನು ಗೌರವಿಸಲಾಯಿತು.

    ವೇದಿಕೆ ಉಪಾಧ್ಯಕ್ಷ ಶ್ರೀಕಾಂತ್ ಶೆಟ್ಟಿ ಬಾಳ, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ದೇವಾಡಿಗ, ಸಂಘಟಕರಾದ ಸಂದೀಪ್ ಅಂಬ್ಲಮೊಗರು, ಗುರುಚಂದ್ರ ಹೆಗ್ಡೆ ಗಂಗಾರಿ, ಮಾಜಿ ಸೈನಿಕರಾದ ಲೆ.ಕ ಜಯಚಂದ್ರನ್, ಬ್ರಿಗೇಡಿಯರ್ ಐಎನ್ ರೈ, ಕ್ಯಾ.ದೀಪಕ್ ಅಡ್ಯಂತಾಯ, ವಕೀಲ ಕೆ.ಸಿ ನಾರಾಯಣ್, ವೆಂಕಟೇಶ್ ಕುಂಪಲ, ಕರ್ನಲ್ ಪಿಕೆ ಶೆಟ್ಟಿ, ಸುಧೀರ್ ಪೈ ಮೊದಲಾದವರಿದ್ದರು.

    ಸೈನಿಕರದ್ದು ಕಠಿಣ ಜೀವನ. ಸ್ನೇಹ ಸಂಬಂಧ ಉತ್ತಮವಿಲ್ಲದ ಪಾಕಿಸ್ತಾನ, ಚೀನಾ, ಬಾಂಗ್ಲಾದೇಶದೊಂದಿಗೆ ಹಂಚಿಕೊಂಡಿರುವ ಗಡಿ ಕಾಯುವುದು ಸವಾಲಿನ ಕೆಲಸ. ಆದರೂ, ನಮ್ಮದು ಬಲಿಷ್ಠ ಸೇನೆ. ಶಾಂತಿಯಿಂದಲೂ ಯುದ್ಧ ಗೆಲ್ಲಬಹುದು ಎಂದು ನಿರೂಪಿಸಿದ ದೇಶ ನಮ್ಮದು.
    – ಸತ್ಯಜಿತ್ ಸುರತ್ಕಲ್, ಅಧ್ಯಕ್ಷ ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts