More

    ಸೋತವರೆಂದಿಗೂ ಸಾಯುವುದಿಲ್ಲ.. ನೀವ್ಯಾಕೆ ಹೀಗೆ ಮಾಡಿದಿರಿ ಸುಶಾಂತ್ ?. ಎಂದ ಕರೆನ್ ಶಾಲೆಯ ವಿದ್ಯಾರ್ಥಿ ಬಳಗ

    ಪಟನಾ: ಕರೆನ್ ಶಾಲೆಯ ಫೇಸ್​​ಬುಕ್ ಪುಟದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಸುಶಾಂತ್ ಅವರ ಒಂದೆರಡು ಛಾಯಾಚಿತ್ರಗಳನ್ನು ಭಾನುವಾರ ಹಂಚಿಕೊಳ್ಳಲಾಗಿತ್ತು. ಅವುಗಳಲ್ಲಿ ಸುಶಾಂತ್ ಶಾಲಾ ದಿನಗಳನ್ನು ನೆನಪಿಸುವಂತಹ ಕೆಲವು ಫೋಟೋಗಳಿದ್ದು, ಅವುಗಳಲ್ಲಿ ಅವರು ಸಹಪಾಠಿಗಳ ಜೊತೆಗೆ ಶಾಲಾ ಸಮವಸ್ತ್ರದಲ್ಲಿ ಪೋಸ್ ನೀಡಿರುವ ಚಿತ್ರವೂ ಇವೆ.
    ಸೇಂಟ್ ಕರೆನ್ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಸಮಿತಿ ಸದಸ್ಯರು ಮತ್ತು ಸಿಬ್ಬಂದಿ, ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಪವಿತ್ರ ರಿಷ್ತಾದಲ್ಲಿನ ‘ಮಾನವ್’ ಎಲ್ಲಿ ? ಎಂದು ಕಂಬನಿ ಮಿಡಿಯುತ್ತಿದೆ ಸುಶಾಂತ್ ಅಭಿಮಾನಿ ಬಳಗ

    ”ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ” ಚಿತ್ರದ ಒಂದು ಫೋಟೋ ಶೇರ್ ಆಗಿದ್ದು, ಅಲ್ಲಿ ಸುಶಾಂತ್ ವೇದಿಕೆಯಲ್ಲಿ ಕುಳಿತಿದ್ದಾರೆ. ಫೋಟೋದ ಕೆಳಗೆ, “ನಾವು ಎಂದಿಗೂ ನಿರೀಕ್ಷಿಸದ ಮುಕ್ತಾಯ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಸುಶಾಂತ್ ಸಿಂಗ್ ರಜಪೂತ್.” ಎಂದು ಬರೆಯಲಾಗಿದೆ.
    “‘ಕಾಯ್ ಪೊ ಚೆ’ ಚಲನಚಿತ್ರದ ನಂತರ ತೆಗೆದ ಒಂದು ಫೋಟೋ ಪೋಸ್ಟ್ ಮಾಡಲಾಗಿದ್ದು ಅದರಲ್ಲಿ ‘ ನೀವು ಕರೆನ್ ಶಾಲೆಯ ಹೆಮ್ಮೆ, ನಿಮ್ಮ ಅಮೂಲ್ಯ ಬದುಕನ್ನು ಹೀಗೆ ಮುಗಿಸಿಕೊಳ್ಳುತ್ತೀರಿ ಎಂದು ಊಹಿಸಿರಲಿಲ್ಲ. ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ …” ಎಂದು ಬರೆಯಲಾಗಿದೆ.

    ಇದನ್ನೂ ಓದಿ: ಸುಶಾಂತ್ ಕೇಸ್ ಸಿಬಿಐಗೆ ಒಪ್ಪಿಸಲು ಆಗ್ರಹ

    ಶಾಲೆಯ ಹಲವಾರು ಪ್ರಸ್ತುತ ಮತ್ತು ಹಳೆಯ ವಿದ್ಯಾರ್ಥಿಗಳು ಫೇಸ್‌ಬುಕ್ ಪೋಸ್ಟ್‌ಗೆ ಪ್ರತಿಕ್ರಿಯಿಸಿ ನಟನ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ.
    “ಇದು ನಂಬಲಾಗದು.. ನಾವು ಒಂದು ಅಮೂಲ್ಯ ರತ್ನವನ್ನು ಕಳೆದುಕೊಂಡಿದ್ದೇವೆ ಎಂದು ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
    “ಅವರು ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆವು. ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಪ್ರತಿಕ್ರಿಯಿಸಿದ್ದಾರೆ.
    “ಸೋತವರು ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ’ ಎಂಬ ‘ಚಿಚೋರ್ ‘ ಸಿನೆಮಾದ ಸಂಭಾಷಣೆಯ ತುಣುಕನ್ನು ಉಲ್ಲೇಖಸಿ,’ಯಾಕೆ ಸುಶಾಂತ್ ಹೀಗೆ ಮಾಡಿದಿರಿ? ಇದು ನಂಬಲಾಗದ್ದು” ಎಂದು ಮತ್ತೊಬ್ಬ ಹಳೆಯ ವಿದ್ಯಾರ್ಥಿ ಬರೆದಿದ್ದಾರೆ.

    ಎನ್​ಟಿಎ ವಿವಿಧ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕನ್ನು ವಿಸ್ತರಿಸಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts