More

    ಕಾರಂಗುಟ್ಟೆ ಹಾಲು ಡೇರಿ ಬಿಜೆಪಿ ತೆಕ್ಕೆಗೆ: ಅಧ್ಯಕ್ಷರಾಗಿ ಸಿ.ರಮೇಶ್​, ಉಪಾಧ್ಯಕ್ಷರಾಗಿ ಚಲಪತಿ

    ಕೋಲಾರ: ಮಾಲೂರು ತಾಲೂಕು ಕಾರಂಗುಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ರಮೇಶ್​ ಮತ್ತು ಉಪಾಧ್ಯಕ್ಷರಾಗಿ ಬಿ.ಚಲಪತಿ ಅವಿರೋಧವಾಗಿ ಆಯ್ಕೆಯಾದರು. ಇದರೊಂದಿಗೆ ಮಾಜಿ ಶಾಸಕ ಬಿಜೆಪಿಯ ಮಂಜುನಾಥಗೌಡರ ಬಣ ಮೇಲುಗೈ ಸಾಧಿಸಿದ್ದು, ಶಾಸಕ ಕೆ.ವೈ,ನಂಜೇಗೌಡರ ಬಣಕ್ಕೆ ಮುಖಭಂಗವಾದಂತಾಗಿದೆ.

    ಇದನ್ನೂ ಓದಿ: ವಿಪ್ರೋದ ಅಜೀಂ ಪ್ರೇಮ್‌ಜಿ ತಪ್ಪು ಇನ್ಫೋಸಿಸ್ ಹುಟ್ಟಿಗೆ ಕಾರಣವಾಯ್ತಾ? ನಾರಾಯಣಮೂರ್ತಿ ಹೇಳಿದ್ದೇನು?
    ಗ್ರಾಪಂ ಮಾಜಿ ಸದಸ್ಯ ಹಾಗೂ ಡೇರಿ ಮಾಜಿ ಕಾರ್ಯದರ್ಶಿ ಕೆ.ಎನ್​.ರಾಮಮೂರ್ತಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ರೈತರು ಕಷ್ಟ-ನಷ್ಟದ ನಡುವೆಯೂ ರಾಸುಗಳನ್ನು ತಮ್ಮ ಮನೆಮಕ್ಕಳಂತೆ ಸಾಕಿ ಹಾಲು ಸರಬರಾಜು ಮಾಡುತ್ತಾರೆ. ಅವರಿಗೆ ಯಾವ ರೀತಿಯಲ್ಲೂ ವಂಚನೆ ಅಥವಾ ತೊಂದರೆಯಾಗದಂತೆ ನೋಡಿಕೊಳ್ಳುವುದು ನೂತನ ಆಡಳಿತದ ಜವಾಬ್ದಾರಿಯಾಗಿರುತ್ತದೆ. ಹಾಲು ಉತ್ಪಾದಕರ ಹಣ ದುರುಪಯೋಗಪಡಿಸಿಕೊಂಡವರು ಯಾರೂ ಸಂತೋಷದ ಜೀವನ ನಡೆಸಲು ಸಾಧ್ಯವೇ ಇಲ್ಲ ಎಂಬ ನಿದರ್ಶನಗಳು ನಮ್ಮ ಕಣ್ಣಮುಂದಿವೆ. ಇದನ್ನು ಅರ್ಥ ಮಾಡಿಕೊಂಡು ಸಂಘವನ್ನು ಪಾರದರ್ಶಕವಾಗಿ ಮುನ್ನಡೆಸಬೇಕು ಎಂದರು.

    ಚುನಾವಣಾಧಿಕಾರಿಯಾಗಿ ಕೋಚಿಮುಲ್​ನಿಂದ ನಿಯೋಜಿತರಾಗಿದ್ದ ಕೋದಂಡರಾಮಯ್ಯ ಕರ್ತವ್ಯ ನಿರ್ವಹಿಸಿದರು.
    ಕಾಂಗ್ರೆಸ್​ ಬೆಂಬಲಿತರ ಗೈರು: ನಿರ್ದೇಶಕರಾದ ಎಂ.ರವೀಂದ್ರ, ಶಿವರಾಜು, ಜಯಣ್ಣ, ಸತೀಶ್​ ಗೈರಾಗಿದ್ದರು. ನಿರ್ದೇಶಕರಾದ ಕೆ.ಎಸ್​.ಶ್ರೀನಿವಾಸ್​, ದೇವರಾಜ, ಮುನಿರಾಜು, ತಾರಾಬಾಯಿ, ಚಂದ್ರಕಲಾ, ಗ್ರಾಮಸ್ಥರಾದ ವಿ.ನಾರಾಯಣಸ್ವಾಮಿ, ನಾರಾಯಣಗೌಡ, ಮಧು, ನಟರಾಜು, ಬೈರಪ್ಪ, ಮಲ್ಲೇಶ್​, ವೆಂಕಟೇಶಗೌಡ, ಚಂದ್ರಪ್ಪ, ಮಂಜುನಾಥ್​ ಇದ್ದರು.

    ‘ಅದು ಸಂಜೀವಿನಿಯಲ್ಲ,ವಿಷ’: ಕರೋನಾಗೆ ಬಳಸಿದ ಹೈಡ್ರಾಕ್ಸಿಕ್ಲೋರೋಕ್ವಿನ್​ನಿಂದ ಹೆಚ್ಚಿದ್ದ ಸಾವುಗಳು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts