More

    ರಾಜ್ಯೋತ್ಸವ ಬೆನ್ನಿಗೇ ಕನ್ನಡ ಸಾಹಿತ್ಯ ಪರಿಷತ್​ನಿಂದ ಸಿಹಿಸುದ್ದಿ; ಬಾಡಿಗೆಗೆ ಲಭ್ಯ ನವೀಕೃತ ಶ್ರೀಕೃಷ್ಣರಾಜ ಪರಿಷನ್ಮಂದಿರ

    ಬೆಂಗಳೂರು: ಕನ್ನಡ ರಾಜ್ಯೋತ್ಸವದ ಬೆನ್ನಿಗೇ ಕನ್ನಡಾಭಿಮಾನಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ ಸಂತಸದ ವಿಷಯವೊಂದನ್ನು ನೀಡಿದೆ. ಅದೇನೆಂದರೆ, ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದ ನವೀಕೃತ ಕಟ್ಟಡವು ನವೆಂಬರ್ ತಿಂಗಳಿಂದ ʻಬಾಡಿಗೆ ಆಧಾರದಲ್ಲಿʼ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಿದೆ. ಈ ಮಾಹಿತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹಂಚಿಕೊಂಡಿದ್ದಾರೆ.

    ಕನ್ನಡ ಸಾಹಿತ್ಯ ಪರಿಷತ್ತಿನ ನವೀಕೃತ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರವು ಪಾರಂಪರಿಕ ಕಟ್ಟಡವಾಗಿದೆ. ಶ್ರೀಕೃಷ್ಣರಾಜ ಮಂದಿರವನ್ನು ಆಧುನಿಕ ಸ್ಪರ್ಶದೊಂದಿಗೆ ನೂತನವಾಗಿ ಅಭಿವೃದ್ಧಿಪಡಿಸಲಾಗಿದ್ದು, ಕಟ್ಟಡದಲ್ಲಿನ ಸಂಪೂರ್ಣ ಹವಾ ನಿಯಂತ್ರಣದ ವ್ಯವಸ್ಥೆ, ಸುಸಜ್ಜಿತವಾದ ಪ್ರಸಾದನ ಕೊಠಡಿ, ಸುರಕ್ಷಿತವಾದ ಗಣ್ಯರ ಕೊಠಡಿ, ಆಧುನಿಕ ವ್ಯವಸ್ಥೆಗಳನ್ನೊಳಗೊಂಡ ನೂತನ ವೇದಿಕೆ, ಅತ್ಯಾಧುನಿಕ ಧ್ವನಿ ವ್ಯವಸ್ಥೆ, ಬೃಹತ್ ಎಲ್​ಇಡಿ ವಾಲ್ ಸ್ಕ್ರೀನ್​, ಆಧುನಿಕ ತಂತ್ರಜ್ಞಾನಗಳುಳ್ಳ ಬೆಳಕಿನ ವ್ಯವಸ್ಥೆ, ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಸುತ್ತಮುತ್ತಲಿನ ಪರಿಸರ, ಸುಸಜ್ಜಿತ ಶೌಚಾಲಯ ವ್ಯವಸ್ಥೆ ಹಾಗೂ 128 ಸ್ಥಿರ ಸುಖಾಸೀನಗಳು, 6 ಸೋಫಾ, 30 ಕುರ್ಚಿ ಸೇರಿ ಒಟ್ಟಾರೆ 164 ಆಸನಗಳ ವ್ಯವಸ್ಥೆಯನ್ನು ನವೀಕೃತ ಸಭಾಂಗಣವು ಹೊಂದಿದೆ.

    ನೀರಿನ ಬಾಟಲಿ ಇಡಲು ಪ್ರತ್ಯೇಕ ಸ್ಥಳಾವಕಾಶ, ಬರವಣಿಗೆಯ ಒತ್ತು ಅಳವಡಿಸಿದ ಆಸನಗಳು ಸೇರಿದಂತೆ ವಿವಿಧ ಸೌಲಭ್ಯ ಮತ್ತು ಅನುಕೂಲತೆಗಳನ್ನು ಒಳಗೊಂಡಂತೆ ಸಭಾಂಗಣವನ್ನು ನವೀಕರಣಗೊಳಿಸಲಾಗಿದೆ ಎಂದು ಕಸಾಪ ತಿಳಿಸಿದೆ.

    ಆಧುನಿಕ ವ್ಯವಸ್ಥೆಗಳನ್ನು ಹೊಂದಿರುವ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದ ದರವನ್ನು ಸಾಮಾನ್ಯ ಜನರಿಗೂ ಕೈಗೆಟುಕುವಂತೆ ನಿಗದಿಪಡಿಸಲಾಗಿದೆ. ಇದರ ಪ್ರಯೋಜನವನ್ನು ಕನ್ನಡಿಗರು ಪಡೆದು ಕೊಳ್ಳಬೇಕು ಎಂದು ಡಾ.ಮಹೇಶ ಜೋಶಿ ತಿಳಿಸಿದ್ದಾರೆ.

    ಕನ್ನಡದ ಕಾರ್ಯಕ್ರಮಗಳು, ವಿಚಾರ ಸಂಕಿರಣ, ಉಪನ್ಯಾಸ, ಕವಿಗೋಷ್ಠಿ, ಗಣ್ಯರಿಗೆ ಶ್ರದ್ಧಾಂಜಲಿ, ಸುಗಮ ಸಂಗೀತ, ವಾರ್ಷಿಕೋತ್ಸವ, ಸನ್ಮಾನ, ಅಭಿನಂದನೆ, ಖಾಸಗಿ ಕಾರ್ಯಕ್ರಮಗಳು, ಶಾಲಾ ಹಾಗೂ ಕಾಲೇಜು ಕಾರ್ಯಕ್ರಮ, ನಾಟಕ ಹಾಗೂ ಇತ್ಯಾದಿ ಕಾರ್ಯಕ್ರಮಗಳಿಗೆ ಅನುಕೂಲವಾಗುಂತೆ ನವೀಕೃತ ಸಭಾಭವನ ಸಿದ್ಧಪಡಿಸಲಾಗಿದೆ. ಸುತ್ತಮುತ್ತಲಿನ ಪರಿಸರದಲ್ಲಿ ಇರುವ ಇತರೇ ಸಭಾಭವನಗಳಿಗಿಂತ ಸುಸಜ್ಜಿತವಾಗಿದ್ದು, ದರವನ್ನು ಸಹ ಕೈಗೆಟುಕುವಂತೆ ಇಟ್ಟಿರುವುದು ಕನ್ನಡದ ಕೈಂಕರ್ಯದ ಪ್ರತೀಕ ಎಂದು ಜೋಶಿ ತಿಳಿಸಿದ್ದಾರೆ.

    ರಾಜ್ಯೋತ್ಸವ ಬೆನ್ನಿಗೇ ಕನ್ನಡ ಸಾಹಿತ್ಯ ಪರಿಷತ್​ನಿಂದ ಸಿಹಿಸುದ್ದಿ; ಬಾಡಿಗೆಗೆ ಲಭ್ಯ ನವೀಕೃತ ಶ್ರೀಕೃಷ್ಣರಾಜ ಪರಿಷನ್ಮಂದಿರ

    ‘ದೊಡ್ಡ’ದಾದ ಜಾತಿ-ಮೀಸಲಾತಿ ವಿವಾದ, ಐತಿಹಾಸಿಕ ದೇವಸ್ಥಾನದ ಟೆಂಡರೇ ರದ್ದು!

    ಹುಳಿ ಬರುವ ಮೊದಲೇ ಗುರಿ ತಲುಪುವ ಇಡ್ಲಿ-ದೋಸೆ ಹಿಟ್ಟು; ಹೊಸ ರೀತಿಯ ಸರಬರಾಜು..

    ಪತಿಯ ಅಂತ್ಯಕ್ರಿಯೆ ಸಂದರ್ಭ ಪತ್ನಿಗೆ ಹೃದಯಾಘಾತ; ಒಂದೇ ದಿನ ದಂಪತಿಯ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts