ಪತಿಯ ಅಂತ್ಯಕ್ರಿಯೆ ಸಂದರ್ಭ ಪತ್ನಿಗೆ ಹೃದಯಾಘಾತ; ಒಂದೇ ದಿನ ದಂಪತಿಯ ಸಾವು..

ಹುಬ್ಬಳ್ಳಿ: ಪ್ರೀತಿಪಾತ್ರರ ಅಗಲಿಕೆಯನ್ನು ತಾಳಲಾಗದೆ ಇನ್ನೊಬ್ಬರೂ ಸಾವಿಗೀಡಾದ ಪ್ರಕರಣಗಳು ಹಲವಾರು ನಡೆದಿವೆ. ಅಂಥ ದುರಂತ ಸಾವುಗಳ ಪಟ್ಟಿಗೆ ಇಂದು ಇನ್ನೊಂದು ಪ್ರಕರಣ ಸೇರಿದೆ. ಈ ಪ್ರಕರಣದಲ್ಲಿ ಒಂದೇ ದಿನ ಪತಿ-ಪತ್ನಿ ಇಬ್ಬರೂ ಸಾವಿಗೀಡಾಗಿದ್ದಾರೆ. ಹುಬ್ಬಳ್ಳಿ ತಾಲೂಕಿನ ಶಿರಗುಪ್ಪ ಗ್ರಾಮದಲ್ಲಿ ಈ ಜೋಡಿ ಸಾವು ಸಂಭವಿಸಿದೆ. ಪ್ರಗತಿಪರ ರೈತ ಶಿವಪುತ್ರಪ್ಪ ನೆಲಗುಡ್ಡ (90) ಹಾಗೂ ಅವರ ಪತ್ನಿ ಬಸಮ್ಮ (86) ಒಬ್ಬರ ಹಿಂದೊಬ್ಬರಂತೆ ಮೃತಪಟ್ಟವರು. ಅನಾರೋಗ್ಯದಿಂದ ಬಳಲುತ್ತಿದ್ದ ಶಿವಪುತ್ರಪ್ಪ ಇಂದು ಬೆಳಗ್ಗೆ ಮೃತಪಟ್ಟಿದ್ದರು. ನಂತರ ಅವರ ಅಂತ್ಯಕ್ರಿಯೆ ನಡೆಯುವ … Continue reading ಪತಿಯ ಅಂತ್ಯಕ್ರಿಯೆ ಸಂದರ್ಭ ಪತ್ನಿಗೆ ಹೃದಯಾಘಾತ; ಒಂದೇ ದಿನ ದಂಪತಿಯ ಸಾವು..