More

    ಪುನೀತ್ ನೆನಪಲ್ಲಿ ಕರುನಾಡ ರತ್ನ; ಭಾನುವಾರ ರಾತ್ರಿ 7.30ಕ್ಕೆ ಕಾರ್ಯಕ್ರಮ ಪ್ರಸಾರ

    ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಕನ್ನಡಿಗರ ಪಾಲಿನ ‘ಕರ್ನಾಟಕ ರತ್ನ’ ಪುನೀತ್ ರಾಜಕುಮಾರ್ ಅವರ ಸಿನಿಪಯಣವನ್ನು ಆಚರಿಸಲು ಜೀ ಕನ್ನಡ ಮುಂದಾಗಿದೆ. ವರುಣ್ ಸ್ಟುಡಿಯೋಸ್ ಮತ್ತು ಜಿಕೆಜಿಎಸ್ ಟ್ರಸ್ಟ್ ಜತೆಗೆ ಸೇರಿಕೊಂಡು ‘ಕರುನಾಡ ರತ್ನ’ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದು, ಈ ಕಾರ್ಯಕ್ರಮ ಭಾನುವಾರ (ಡಿ.19) ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

    ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ವಿ. ರವಿಚಂದ್ರನ್, ಹಂಸಲೇಖ ಮುಂತಾದವರು ಭಾಗವಹಿಸಿದ್ದಾರೆ. ಪುನೀತ್ ಹಾಡಿದ್ದ ‘ಬಾನ ದಾರಿಯಲ್ಲಿ …’ ಹಾಡನ್ನು ಹಾಡುವುದರ ಜತೆಗೆ, ಅವರು ಇಷ್ಟಪಟ್ಟು ಹಾಡುತ್ತಿದ್ದ ಹಿಂದಿಯ ‘ಬಾಬ್ಬಿ’ ಚಿತ್ರದ ‘ಮೇ ಶಾಯರ್ ತೋ ನಹೀ …’ ಹಾಡನ್ನು ಶಿವರಾಜಕುಮಾರ್ ವೇದಿಕೆಯ ಮೇಲೆ ಹಾಡಿದ್ದು ವಿಶೇಷವಾಗಿತ್ತು.

    ಪುನೀತ್​ಗಾಗಿ ರವಿಚಂದ್ರನ್ ರಚಿಸಿದ ಹಾಡಿನ ಜತೆಗೆ, ಪುನೀತ್ ಅವರ ಜೀವನದ ಮೌಲ್ಯಗಳು, ಸಾಧನೆ ಮತ್ತು ಅವರ ಅಮೂಲ್ಯ ನೆನಪುಗಳನ್ನು ‘ಕರುನಾಡ ರತ್ನ’ ಕಾರ್ಯಕ್ರಮ ಅನಾವರಣಗೊಳಿಸಲಿದೆ. ‘ನಾದಬ್ರಹ್ಮ’ ಹಂಸಲೇಖ ಅವರು ಈ ಕಾರ್ಯಕ್ರಮಕ್ಕಾಗಿ ಒಂದು ವಿಶೇಷ ಹಾಡನ್ನು ರೂಪಿಸಿದ್ದು, ಈ ಹಾಡಿಗೆ ‘ಸರಿಗಮಪ’ ಕಾರ್ಯಕ್ರಮದ ಪ್ರತಿಭೆ ಕಂಬದ ರಂಗಯ್ಯ ಧ್ವನಿಯಾಗಿದ್ದಾರೆ.

    ಅಂದು ನಿಧಿ ಸುಬ್ಬಯ್ಯ, ಇಂದು ಆವಂತಿಕಾ ಶೆಟ್ಟಿ; ಇಬ್ಬರದ್ದೂ ಬಹುತೇಕ ಒಂದೇ ಥರ ಬೇಸರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts