More

    1200+ ಕಲಾವಿದರು, 700+ ತಂತ್ರಜ್ಱರ ಟಾಕೀಸ್​ ಆ್ಯಪ್​… ಕನ್ನಡಿಗರ ಓಟಿಟಿಗೆ ಜನರ ಮೆಚ್ಚುಗೆ..

    1200+ ಕಲಾವಿದರು, 700+ ತಂತ್ರಜ್ಱರ ಟಾಕೀಸ್​ ಆ್ಯಪ್​... ಕನ್ನಡಿಗರ ಓಟಿಟಿಗೆ ಜನರ ಮೆಚ್ಚುಗೆ..

    ಬೆಂಗಳೂರು: ಓಟಿಟಿ (ಓವರ್​ ದಿ ಟಾಪ್​) ಕಾನ್ಸೆಪ್ಟ್​ ಸದ್ಯ ಟಿವಿ, ಥಿಯೇಟರ್​ಗಳನ್ನೂ ಹಿಂದಕ್ಕೆ ಹಾಕುವಂತಿದೆ. ಅಷ್ಟರ ಮಟ್ಟಿಗೆ ಮನರಂಜನಾ ಲೋಕವನ್ನು ಸೆರೆಹಿಡಿಯುತ್ತಿದೆ. ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದ ಹಲವು ಓಟಿಟಿಗಳಿವೆ. ಆದರೆ ಕನ್ನಡದ ಸಿನಿಮಾ, ವೆಬ್​ ಸರಣಿಗಳತ್ತ ಅವು ಹೆಚ್ಚು ಗಮನ ಹರಿಸುತ್ತಿಲ್ಲ ಎಂಬ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕೆಲವರು ಕನ್ನಡದ ಕಂಟೆಂಟ್​ಗಾಗಿಯೇ ಓಟಿಟಿಯ ಮೂಲಕ ವೇದಿಕೆ ನೀಡಿದ್ದಾರೆ. ಅವುಗಳಲ್ಲಿ ಸದ್ಯ ಹೆಚ್ಚು ಜನಮನ್ನಣೆ ಪಡೆಯುತ್ತಿರುವುದು ಟಾಕೀಸ್​ ಆ್ಯಪ್​.

    ಇದನ್ನೂ ಓದಿ: ಅನೂಪ್​ಗೆ ಸುದೀಪ್ ಕಾರ್ ಗಿಫ್ಟ್; ಸದ್ಯದಲ್ಲೇ ಹೊಸ ಚಿತ್ರದ ಘೋಷಣೆ

    ಇತ್ತೀಚೆಗಷ್ಟೇ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ರಿಲೀಸ್ ಮಾಡಿದ್ದ ಟಾಕೀಸ್‌ ಆ್ಯಪ್‌ ಗೆ  ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಚ್ಚ ಕನ್ನಡದ ಅತ್ಯುತ್ತಮ ಗುಣಮಟ್ಟದ ಓಟಿಟಿ ವೇದಿಕೆ ಇದಾಗಿದ್ದು ಕನ್ನಡ ನಿರ್ಮಾಪಕರಿಗೆ ಹೊಸ ಭರವಸೆ ಮೂಡಿಸಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಈ ಆ್ಯಪ್‌ನಲ್ಲಿ ಕಳೆದ  ಮೂರ್ನಾಲ್ಕು ತಿಂಗಳಲ್ಲಿ ನೂರಾರು ಸಿನಿಮಾ, ಹತ್ತಾರು ವೆಬ್‌ ಸಿರೀಸ್‌, ಮಕ್ಕಳ ಕತೆಗಳು ಸೇರಿದಂತೆ ಸಾಕಷ್ಟು ಕಂಟೆಂಟ್‌ಗಳು ಲಭ್ಯವಿದ್ದು, ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಸಿನಿಮಾ, ನಾಟಕ, ಯಕ್ಷಗಾನ, ಮಕ್ಕಳ ಕಥೆ, ಕಾರ್ಟೂನ್‌ಗಳು ಸೇರಿದಂತೆ ಮನರಂಜನೆಗೆ ಹೆಚ್ಚು ಒತ್ತು ಕೊಡುವಲ್ಲಿ ನಮ್ಮ ತಂಡ ಉತ್ಸುಕವಾಗಿದೆ ಎಂದು ಸಂಸ್ಥೆಯ ಚೇರ್ಮನ್‌ ರತ್ನಾಕರ್‌ ಕಾಮತ್‌ ಅವರು ಹೇಳಿದ್ದಾರೆ. 

    ಇದನ್ನೂ ಓದಿ: ಬಿಡುಗಡೆ ಆಯ್ತು ಗಾಳಿಪಟ-2 ಟ್ರೇಲರ್; ಪ್ರೀ-ರಿಲೀಸ್ ಇವೆಂಟ್​ನಲ್ಲಿ ಶಿವಣ್ಣ, ರಮೇಶ್, ಉಪೇಂದ್ರ

    ಸ್ವಯಂಪ್ರಭಾ ಎಂಟರ್‌ಟೈನ್‌ಮೆಂಟ್‌ ಮತ್ತು ಪ್ರೊಡಕ್ಷನ್ಸ್‌ ಹೊರತಂದಿರುವ ಟಾಕೀಸ್‌ ಆ್ಯಪ್‌, ಈಗಾಗಲೇ ಸಾವಿರಾರು ಚಂದಾದಾರರನ್ನು ಹೊಂದಿದೆ.  1200ಕ್ಕೂ ಅಧಿಕ ಕಲಾವಿದರು, 700ಕ್ಕೂ ಹೆಚ್ಚು ತಂತ್ರಜ್ಞರ ಪ್ರಯತ್ನದ ಫಲವಾದ`ಟಾಕೀಸ್‌ ಆಪ್ ಪ್ರತೀ ತಿಂಗಳು  ಎಂಟು ಸಂಚಿಕೆಗಳ ಒಂದು ಹೊಸ ವೆಬ್‌ ಸಿರೀಸ್‌ ಹಾಗೂ ಪ್ರತಿ ವಾರ ಎರಡು ಹೊಸ ಕಂಟೆಂಟ್‌ಗಳನ್ನು  ಹೊರತರುತ್ತಿದೆ. 

    ವಿಜಯ ರಾಘವೇಂದ್ರ, ಪ್ರಮೋದ್‌ ಶೆಟ್ಟಿ, ರಂಜನಿ ರಾಘವನ್‌, ದಿವ್ಯ ಉರುಡುಗ, ಮಂಜು ಪಾವಗಡ, ವೈಷ್ಣವಿ, ಭೂಮಿ ಶೆಟ್ಟಿ, ನಾಗೇಂದ್ರ ಶಾ, ನಿವೇದಿತಾ ಗೌಡ, ಚಂದನ್‌ ಶೆಟ್ಟಿ, ದೀಪಿಕಾ, ಚಂದನಾ ಮುಂತಾದವರು `ಟಾಕೀಸ್‌’ ಸಿನಿಮಾ, ವೆಬ್‌ ಸೀರೀಸ್‌ನ ಭಾಗವಾಗಿದ್ದಾರೆ.  ಈಗಾಗಲೇ ಬಿಡುಗಡೆಯಾಗಿರುವ ಹಕೂನ ಮಟಟ, ವನಜಾ, ಗರಂ ಮಸಾಲಾ, ಕರ್ಮ ರಿಟರ್ನ್‌, ವಿಟಮಿನ್‌ ಎಂ ಅಲ್ಲದೆ ಮುಂದಿನ ದಿನಗಳಲ್ಲಿ ಪೊಲೀಸ್‌ ಫೈಲ್ಸ್,  ಜಾಲಿ ಬ್ಯಾಚುಲರ್ಸ್, ಲವ್‌ ಬರ್ಡ್ಸ್ ಹಾಗೂ ನಿವೃತ್ತ ಎಸ್‌.ಪಿ ಎಸ್‌.ಕೆ.ಉಮೇಶ್‌ ಅವರ ಕಥಾಸಂಕಲನ ಸೇರಿದಂತೆ ಸಾಕಷ್ಟು ವೆಬ್‌ ಸೀರೀಸ್‌, ಕಿರುಚಿತ್ರಗಳು ಲಭ್ಯವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts