More

    ಬಿಗ್ ಬಾಸ್ ಹಣಕ್ಕಾಗಿ ಮಾಡುತ್ತಿಲ್ಲ: ಸುದೀಪ್

    ಬೆಂಗಳೂರು: ‘ಬಿಗ್ ಬಾಸ್ ಓಟಿಟಿ ಸೀಸನ್ 1’ಕ್ಕೆ ದಿನಗಣನೆ ಪ್ರಾರಂಭವಾಗಿದೆ. ಇದೇ ಆಗಸ್ಟ್ 6ರಿಂದ ‘ಬಿಗ್ ಬಾಸ್’, ವೂಟ್​ನಲ್ಲಿ ನೇರಪ್ರಸಾರ ಆರಂಭವಾಗಲಿದೆ. 16 ಜನ ಸ್ಪರ್ಧಿಗಳನ್ನು 24 ತಾಸು ಸತತ 42 ದಿನಗಳ ಕಾಲ ನೋಡಬಹುದಾಗಿದೆ. ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ನಟ-ನಿರೂಪಕ ಕಿಚ್ಚ ಸುದೀಪ್ ಮತ್ತು ವಯಾಕಾಮ್ 18 ಕನ್ನಡ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಮತ್ತಷ್ಟು ಮಾಹಿತಿ ಹಂಚಿಕೊಂಡರು.

    ಎಂಟು ‘ಬಿಗ್ ಬಾಸ್’ ಸೀಸನ್​ಗಳನ್ನು ನಡೆಸಿಕೊಟ್ಟು, ಈಗ ಮೊದಲ ಓಟಿಟಿ ಸೀಸನ್ ನಡೆಸಿಕೊಡುತ್ತಿರುವ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್, ‘‘ಬಿಗ್ ಬಾಸ್’ ಕಾರ್ಯಕ್ರಮ ವೂಟ್​ನಲ್ಲಿ ಬರಲಿ, ಟಿವಿಯಲ್ಲಿ ಬರಲಿ ಅದರಿಂದ ನನಗೇನೂ ಅನ್ನಿಸುವುದಿಲ್ಲ. ಆದರೆ, ನಾನಂತೂ ಅದೇ ವೇದಿಕೆ ಮೇಲೆ ನಿಂತು ಕಾರ್ಯಕ್ರಮ ನಡೆಸಿಕೊಡಲಿದ್ದೇನೆ’ ಎಂದರು. ಹಾಗೆಯೇ, ‘ನನಗೆ ಜ್ವರ ಇರಲಿ, ಏನೇ ಸಮಸ್ಯೆ ಇರಲಿ, ‘ಬಿಗ್ ಬಾಸ್’ ಶೋಗೆ ಸಮಸ್ಯೆ ಮಾಡಿಲ್ಲ. ಒಮ್ಮೆ ಹೇರ್​ಲೈನ್ ಫ್ರಾಕ್ಚರ್ ಆಗಿತ್ತು, ಆಗಲೂ ಬ್ಯಾಂಡೇಜ್ ಮೇಲೆ ಶೂ ಹಾಕಿಕೊಂಡು ಶೋ ನಡೆಸಿಕೊಟ್ಟಿದ್ದೆ. ಮತ್ತೊಮ್ಮೆ ಬೆನ್ನಿನ ಸಮಸ್ಯೆಯಾಗಿ ಕೋಟ್ ಒಳಗೆ ಐಸ್​ಬ್ಯಾಗ್ ಇಟ್ಟುಕೊಂಡು ನಡೆಸಿಕೊಟ್ಟಿದ್ದೆ. ಆದರೆ, ಕಳೆದ ಸೀಸನ್​ನಲ್ಲಿ ನನಗೆ ಕರೋನಾ ಜ್ವರ ವಿಪರೀತವಿತ್ತು. ಹೀಗಾಗಿ ನಡೆಸಿಕೊಡಲು ಆಗಿರಲಿಲ್ಲ. ಇಡೀ ವಾರ ನಾನು ‘ಬಿಗ್ ಬಾಸ್’ ಬಗ್ಗೆ ಯೋಚನೆ ಮಾಡುತ್ತಿರುತ್ತೇನೆ. ಮಳೆ ನೀರಲ್ಲಿ ನೆನೆಯುವ ಸೀನ್ ಇದ್ದರೆ ಬಿಸಿನೀರಲ್ಲಿ ಶೂಟ್ ಮಾಡೋಕೆ ಸಾಧ್ಯನಾ ಅಂತ ಚಿತ್ರತಂಡವನ್ನು ಕೇಳುತ್ತೇನೆ. ಹೊರದೇಶಗಳಲ್ಲಿ ಚಿತ್ರೀಕರಣ ಮಾಡುವಾಗ ಸರಿಯಾದ ಸಮಯಕ್ಕೆ ‘ಬಿಗ್ ಬಾಸ್’ ಕಾರ್ಯಕ್ರಮಕ್ಕೆ ಬರಬೇಕು ಅಂತ ಎರಡು, ಮೂರು ಫ್ಲೈಟ್ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ಇಲ್ಲಿ ಬಂದು ವಾರದ ಎಲ್ಲ ಎಪಿಸೋಡ್​ಗಳನ್ನು ನೋಡಿಯೇ ನಾನು ಕಾರ್ಯಕ್ರಮ ನಡೆಸಿಕೊಡುತ್ತೇನೆ. ನಾನು ಹಣಕ್ಕಾಗಿ ಅಥವಾ ಯಾರದೋ ಒತ್ತಡಕ್ಕೆ ಮಣಿದು ಏನನ್ನೂ ಮಾಡುವುದಿಲ್ಲ. ‘ಬಿಗ್ ಬಾಸ್’ ಮೇಲೆ ಪ್ರೀತಿ ಇದೆ, ಹೀಗಾಗಿ ಕಾರ್ಯಕ್ರಮ ಮಾಡಿಕೊಡುತ್ತಿದ್ದೇನೆ’ ಎಂದರು.

    ‘ವೂಟ್​ನ ಈ ಹೊಸ ಪ್ರಯತ್ನ ಜನರನ್ನು ತಲುಪುತ್ತೆ ಹಾಗೂ ರಂಜಿಸುತ್ತೆ ಎಂಬ ಭಾವನೆಯಿದೆ. ಮೊದಲು 24 ತಾಸುಗಳಲ್ಲಿ ‘ಬಿಗ್ ಬಾಸ್’ ಮನೆಯಲ್ಲಿ ನಡೆಯುವ ಘಟನೆಗಳನ್ನು ಒಂದೂವರೆ, ಎರಡು ತಾಸು ಎಡಿಟ್ ಮಾಡುತ್ತಿದ್ದೆವು. ಆದರೆ, ಒಮ್ಮೊಮ್ಮೆ ಅಲ್ಲಿ ನಡೆಯುತ್ತಿದ್ದ ಘಟನೆಗಳನ್ನು ನಾವು ನಮ್ಮನ್ನೇ ಮರೆತು ನೋಡುತ್ತಾ ಕುಳಿತುಬಿಡುತ್ತಿದ್ದೆವು. ಆ ರೀತಿಯ ಅನುಭವ ಕೇವಲ ನಾಲ್ಕೈದು ಜನರಿಗೆ ಮಾತ್ರ ಸಿಕ್ಕಿತ್ತು. ಆದರೆ, ಅದೇ ಅನುಭವವನ್ನ ಜನರಿಗೂ ನೀಡಿದರೆ ಹೇಗೆ? ಎಂದು ಆಲೋಚಿಸಿ ಈಗ ಲೈವ್ ಸ್ಟ್ರೀಮ್ ಮಾಡಲಿದ್ದೇವೆ. ಓಟಿಟಿಯ ಎಲ್ಲ 16 ಮಂದಿ ಟಿವಿ, ಸಿನಿಮಾ, ರೇಡಿಯೋ, ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳೇ ಆಗಿರುತ್ತಾರೆ. ಅದರಲ್ಲೂ ಹೆಚ್ಚಾಗಿ ಯುವಪೀಳಿಗೆಯನ್ನು ರೀಚ್ ಆಗುವ, ಸೋಷಿಯಲ್ ಮೀಡಿಯಾ ಬಗ್ಗೆ ಅರಿವಿರುವವರೇ ಇರಲಿದ್ದಾರೆ’ ಎಂದು ‘ಬಿಗ್ ಬಾಸ್ ಓಟಿಟಿ’ ಬಗ್ಗೆ ಮಾಹಿತಿ ನೀಡಿದರು ವಯಕಾಮ್ 18 ಕನ್ನಡ ಕ್ಲಸ್ಟರ್ ಹೆಡ್ ಆದ ಪರಮೇಶ್ವರ್ ಗುಂಡ್ಕಲ್. ಈ ಸಂದರ್ಭದಲ್ಲಿ ವಯಾಕಾಮ್ 18 ಅಂತಾರಾಷ್ಟ್ರೀಯ ಬ್ಯುಸಿನೆಸ್ ಹೆಡ್ ಫೆರ್ಜಾದ್ ಪಾಲಿಯಾ ಮತ್ತು ಎಂಡೆಮಾಲ್ ಶೈನ್ ಇಂಡಿಯಾದ ಮುಖ್ಯಸ್ಥ ರಿಷಿ ನೇಗಿ ಉಪಸ್ಥಿತರಿದ್ದರು.

    ವಿಮಾನಕ್ಕೆ ಡಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲೇ ಬಚಾವಾದ ಕಾರು!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts