More

    ಬಿಡುಗಡೆ ಆಯ್ತು ಗಾಳಿಪಟ-2 ಟ್ರೇಲರ್; ಪ್ರೀ-ರಿಲೀಸ್ ಇವೆಂಟ್​ನಲ್ಲಿ ಶಿವಣ್ಣ, ರಮೇಶ್, ಉಪೇಂದ್ರ

    ಬೆಂಗಳೂರು: ಗಣೇಶ್ ಮತ್ತು ಯೋಗರಾಜ್ ಭಟ್ ಜೋಡಿಯ ಕೆಲವು ಚಿತ್ರಗಳು ಇದುವರೆಗೂ ಬಂದಿವೆ. ಆದರೆ, ಯಾವ ಚಿತ್ರದ ಕುರಿತು ಸಹ ಗಣೇಶ್, ಭಟ್ಟರಿಗೆ ಫೋನ್ ಮಾಡಿರಲಿಲ್ಲವಂತೆ. ಆದರೆ, ‘ಗಾಳಿಪಟ 2’ ಚಿತ್ರದ ಡಬ್ಬಿಂಗ್ ಆದ ಮೇಲೆ ಫೋನ್ ಮಾಡಿ ಹೊಗಳಿದರಂತೆ.

    ಹಾಗಂತ ಅವರೇ ಹೇಳಿಕೊಂಡಿದ್ದಾರೆ. ‘ಗಾಳಿಪಟ 2’ ಚಿತ್ರವು ಆ.12ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಇತ್ತೀಚೆಗೆ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ್, ಚಿತ್ರ ನಿಜಕ್ಕೂ ಚೆನ್ನಾಗಿದೆ ಎಂದರು.

    ಈ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಚಿತ್ರತಂಡದವರಲ್ಲದೆ ಶಿವರಾಜಕುಮಾರ್, ಉಪೇಂದ್ರ, ರಮೇಶ್ ಅರವಿಂದ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ. ಹರೀಶ್ ಸೇರಿದಂತೆ ಹಲವರು ಹಾಜರಿದ್ದರು. ಈ ಸಂದರ್ಭದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಶಿವರಾಜಕುಮಾರ್, ‘ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಷನ್ ಮತ್ತೊಮ್ಮೆ ಮೋಡಿ ಮಾಡಲಿದೆ. ದಿಗಂತ್, ಪವನ್ ಹಾಗೂ ನಾಯಕಿಯರು ಚೆನ್ನಾಗಿ ನಟಿಸಿದ್ದಾರೆ. ಅದರಲ್ಲೂ ಪವನ್ ಕ್ಯೂಟ್ ಆಗಿ ಕಾಣಿಸುತ್ತಾರೆ. ಅರ್ಜುನ್ ಜನ್ಯ ಸಂಗೀತ ಸೊಗಸಾಗಿದೆ. ಅವರನ್ನು ನೋಡಿದರೆ ಎ.ಆರ್. ರೆಹಮಾನ್ ನೆನಪಾಗುತ್ತಾರೆ. ಮುಂದೆ ಅರ್ಜುನ್ ಜನ್ಯ ನಿರ್ದೇಶಿಸುತ್ತಿರುವ ‘45’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಈ ಚಿತ್ರ ನಿರ್ವಿುಸುತ್ತಿರುವ ರಮೇಶ್ ರೆಡ್ಡಿ ಅವರೇ ಆ ಚಿತ್ರವನ್ನೂ ನಿರ್ವಿುಸುತ್ತಿದ್ದಾರೆ. ಈ ಚಿತ್ರ ಹಿಟ್ ಆಗಲಿ’ ಎಂದರು. ರಮೇಶ್ ಮತ್ತು ಉಪೇಂದ್ರ ಸಹ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

    ರೋಡಿನಲ್ಲಿ ಸಿಗುವ ಸಂಬಂಧ, ರಕ್ತ ಸಂಬಂಧಕ್ಕಿಂತ ಹೆಚ್ಚು ಎಂದು ನಂಬಿರುವವನು ನಾನು ಎಂದು ಮಾತು ಶುರು ಮಾಡಿದ ಭಟ್, ‘ಆ ಸ್ನೇಹದಿಂದಲೇ 14 ವರ್ಷಗಳ ಹಿಂದೆ ‘ಗಾಳಿಪಟ’ ಚಿತ್ರ ನಿರ್ವಣವಾಯಿತು. ಈಗ ‘ಗಾಳಿಪಟ 2’ ಸಹ ಅದೇ ಸ್ನೇಹದಿಂದ ನಿರ್ವಣವಾಗಿದೆ. ಕರ್ನಾಟಕದ ಎಲ್ಲ ಸ್ನೇಹಿತರು ಚಿತ್ರ ನೋಡಿ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದರು.

    ತಿಗಣೆ ಮದ್ದಿಗೆ ಬಲಿಯಾದ್ಲು 6 ವರ್ಷದ ಬಾಲಕಿ; ನಿಜಕ್ಕೂ ಆಗಿದ್ದೇನು? ತಪ್ಪಿತಸ್ಥರು ಯಾರು?

    ವಿಮಾನಕ್ಕೆ ಡಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲೇ ಬಚಾವಾದ ಕಾರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts