More

    ಅಂಡರ್‌ವರ್ಲ್ಡ್ ಡಾನ್ ಕುಮಾರ; ಸಾಮಾನ್ಯ ಹುಡುಗನ ಭೂಗತ ಲೋಕ ಜರ್ನಿಯ ಸಿನಿಮಾ

    ಬೆಂಗಳೂರು:ಅಂಡರ್‌ವರ್ಲ್ಡ್, ರೌಡಿಸಂ, ಮಾಫಿಯಾ ಕುರಿತ ಹಲವು ಸಿನಿಮಾಗಳು ಬಂದಿವೆ. ಆ ಸಾಲಿಗೆ ಹೊಸ ಸೇರ್ಪಡೆ ‘ಡಾನ್ ಕುಮಾರ’. ಚಿತ್ರಕ್ಕೆ ‘ರಿಯಲ್ ಸ್ಟೋರಿ, ರಿಯಲ್ ಡಾನ್’ ಎಂಬ ಟ್ಯಾಗ್‌ಲೈನ್ ಇದ್ದು, ನಾಗೇಶ್ ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಮಗನ ಸಲುವಾಗಿ ಅವರ ತಂದೆ ನರಸೇಗೌಡರು ಈ ಚಿತ್ರ ನಿರ್ಮಿಸಿದ್ದಾರೆ.

    ಇತ್ತೀಚೆಗಷ್ಟೆ ಪ್ರಚಾರದ ಮೊದಲ ಹಂತವಾಗಿ ಚಿತ್ರದ ಟ್ರೇಲರ್ ರಿಲಿಸ್ ಮಾಡಲಾಯಿತು. ಒಬ್ಬ ಸಾಮಾನ್ಯ ಹುಡುಗ ಹೇಗೆ ಬೆಂಗಳೂರನ್ನು ಆಳುತ್ತಾನೆ ಎಂಬ ಕಥಾಹಂದರವಿರುವ ಚಿತ್ರದ ಬಗ್ಗೆ ನಿರ್ದೇಶಕ ನಾಗೇಶ್, ‘ಇದು ಸಾಮಾನ್ಯ ಕಥೆಯಲ್ಲ. ನಿರೂಪಣೆ ವಿಶೇಷವಾಗಿರುವ ಸ್ಟೋರಿ. 15 ಸಾಹಸ ದೃಶ್ಯಗಳಿವೆ. ಎಲ್ಲ ೈಟ್‌ಗಳನ್ನೂ ನೈಜವಾಗಿ ಸಾಮಾನ್ಯ ಮನುಷ್ಯ ಜಗಳವಾಡಿದರೆ ಹೇಗಿರುತ್ತೋ ಅದೇ ರೀತಿಯಲ್ಲಿ ಚಿತ್ರಿಸಿದ್ದೇವೆ. ಭೂಗತ ಲೋಕದ ಜತೆ ಲವ್, ರೊಮ್ಯಾನ್ಸ್, ತಂದೆ-ತಾಯಿಯ ಸೆಂಟಿಮೆಂಟ್ ಕೂಡ ಚಿತ್ರದಲ್ಲಿದೆ. 1990 ಹಾಗೂ 2000ರ ದಶಕಗಳಲ್ಲಿ ನಡೆದ ಕೆಲ ಘಟನೆಗಳನ್ನು ಆಧರಿಸಿದ ಸ್ಟೋರಿ’ ಎಂದು ಮಾಹಿತಿ ನೀಡುತ್ತಾರೆ.

    ನಾಯಕ ‘ಡಾನ್ ಕುಮಾರ’ನಾಗಿ ಚಂದ್ರಶೇಖರ್ ನಟಿಸಿದ್ದು, ಅವರಿಗೆ ಸಹನಾ ಮತ್ತು ಪ್ರಕೃತಿ ಇಬ್ಬರು ನಾಯಕಿಯರು. ಚಿತ್ರದ ವಿಶೇಷ ಹಾಡಿಗೆ ನಮೃತಾ ಮಲ್ಲ ಹೆಜ್ಜೆ ಹಾಕಿದ್ದಾರೆ. ಉಳಿದಂತೆ ಮಿಮಿಕ್ರಿ ಗೋಪಿ ಸೇರಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಬೆಂಗಳೂರು, ಮೈಸೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಹಾಗೂ ಸಿಂಗಾಪುರದಲ್ಲಿ ಶೂಟಿಂಗ್ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts