More

  ಬಂದಂತೆ ಸ್ವೀಕರಿಸಿ, ಬರೆದು ಹೊಂದಿಸಿ: ವಿಜಯವಾಣಿ ಸಿನಿಮಾ ವಿಮರ್ಶೆ

  ಚಿತ್ರ: ಹೊಂದಿಸಿ ಬರೆಯಿರಿ
  ನಿರ್ದೇಶನ: ರಾಮೇನಹಳ್ಳಿ ಜಗನ್ನಾಥ್ 
  ನಿರ್ಮಾಣ: ಸಂಡೇ ಸಿನಿಮಾಸ್ ಬ್ಯಾನರ್ 
  ತಾರಾಗಣ: ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀ ಮಹಾದೇವ್, ಐಶಾನಿ ಶೆಟ್ಟಿ, ಭಾವನಾ ರಾವ್, ಅರ್ಚನಾ ಜೋಯಿಸ್, ಸಂಯುಕ್ತಾ ಹೊರನಾಡು ಮುಂತಾದವರು.

  | ಚೇತನ್ ನಾಡಿಗೇರ್ ಬೆಂಗಳೂರು

  ಏನನೋ ಬಯಸುತಿವೆ ಈ ಜೀವಗಳು
  ಏನನು ಹುಡುಕುತಿವೆ ಈ ಭಾವಗಳು
  ನಿನ್ನೆ ನಾಳೆಗಳ ನೆರಳಲಿ ಮರೆತಿವೆ ಇರುವಾ ಬದುಕನು
  ಬಂದಂತೆ ಸ್ವೀಕರಿಸಿ, ಬರೆದು ಹೊಂದಿಸಿ..

  ಈ ನಾಲ್ಕು ಸಾಲುಗಳ ಮೂಲಕವೇ ‘ಹೊಂದಿಸಿ ಬರೆಯಿರಿ’ ಚಿತ್ರದ ತಾತ್ಪರ್ಯವನ್ನು ಬಹಳ ಸರಳವಾಗಿ ಮತ್ತು ಸುಂದರವಾಗಿ ಹೇಳಿಬಿಟ್ಟಿದ್ದಾರೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್. ಇಷ್ಟು ಹೇಳಿದರೆ, ಚಿತ್ರದ ಆಶಯವೇನು ಎಂಬುದನ್ನು ಹೇಳಿಬಿಡಬಹುದು. ಆಶಯವೇನು ಎಂದು ಹೇಳಬಹುದಾದರೂ ಕಥೆಯನ್ನಲ್ಲ. ಹಾಗೆ ನೋಡಿದರೆ, ಇಲ್ಲಿ ಒಂದು ಕಥೆ ಅಂತಿಲ್ಲ. ಇದು ಐವರು ಸ್ನೇಹಿತರ ಕಥೆ. ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ. ಹಲವು ಭಾವನೆಗಳು ಇರುವ ಕಥೆ.

  ಚಿತ್ರ ಶುರುವಾಗುವುದು ಐವರು ಸ್ನೇಹಿತರು ತಮ್ಮ ಹೆಂಡತಿಯರ ಜತೆಗೆ ಒಂದು ಕಡೆ ಸೇರುವಲ್ಲಿಂದ. ಯಾವುದೋ ಕಾರ್ಯಕ್ರಮಕ್ಕೆ ಎಲ್ಲರೂ ಹೊರಡುತ್ತಾರೆ. ಆದರೆ, ಅವರ ನಡುವೆ ಎಲ್ಲವೂ ಸರಿ ಇಲ್ಲ. ಒಂದು ದಂಪತಿಯ ದಾಂಪತ್ಯ ಡೈವೋರ್ಸ್ ಹಂತಕ್ಕೆ ಬಂದಿದೆ. ಇನ್ನೊಂದು ಮದುವೆಯಾಗಿ ಕೆಲವು ವರ್ಷಗಳಾದರೂ ಇನ್ನೂ ಪ್ರಾರಂಭವೇ ಆಗಿಲ್ಲ. ಹೀಗೆ ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ. ಅವರೆಲ್ಲರೂ ಫ್ಲಾಶ್​ಬ್ಯಾಕ್​ಗೆ ಹೋಗಿ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುವುದರಿಂದ ವರ್ತಮಾನಕ್ಕೆ ಬಂದು ಜೀವನವನ್ನು ಅರ್ಥ ಮಾಡಿಕೊಳ್ಳುವಲ್ಲಿಗೆ ಚಿತ್ರ ಮುಗಿಯುತ್ತದೆ. ಮೊದಲೇ ಹೇಳಿದಂತೆ ಇಡೀ ಸಿನಿಮಾ ನಿಂತಿರೋದು ಭಾವನೆಗಳ ಮೇಲೆ. ಎಲ್ಲರ ಜೀವನದಲ್ಲಿ ನಡೆಯಬಹುದಾದ ವಿಷಯಗಳನ್ನೇ ಇಟ್ಟುಕೊಂಡು, ಅತಿ ಸರಳವಾಗಿ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ ಜಗನ್ನಾಥ್.

  ಇಲ್ಲಿ ವೇಗವನ್ನು ನಿರೀಕ್ಷಿಸುವಂತಿಲ್ಲ. ಹಾಗೆಯೇ ಫೈಟು, ಡ್ಯಾನ್ಸು, ಅಟ್ಟಹಾಸ ಯಾವುದೂ ಇಲ್ಲ. ಮೊದಲಾರ್ಧ ಕಾಲೇಜು ವಿದ್ಯಾರ್ಥಿಗಳ ಜೀವನದ ಸುತ್ತ ಸುತ್ತು ಸುತ್ತುವುದರಿಂದ ಒಂದಿಷ್ಟು ತರಲೆ ತಮಾಷೆ ಇದೆ. ಅದು ಇಷ್ಟವಾದರೆ, ಗೆದ್ದಂತೆ. ದ್ವಿತೀಯಾರ್ಧ ಗಂಭೀರವಾಗುತ್ತಾ ಹೋಗುತ್ತದೆ. ಒಟ್ಟಾರೆ ಚಿತ್ರ ಬೋರ್ ಹೊಡೆಸದಿದ್ದರೂ, ನಿಧಾನವಾಗಿದೆ. ಕೆಲವು ಸನ್ನಿವೇಶಗಳು, ಹಾಡುಗಳು ಮನಮುಟ್ಟುವಂತಿವೆ. ಪ್ರವೀಣ್ ತೇಜ್, ಭಾವನಾ, ನವೀನ್ ಶಂಕರ್, ಐಶಾನಿ, ಶ್ರೀ ಮಹದೇವ್, ಸಂಯುಕ್ತಾ ಹೊರನಾಡು ಸೇರಿದಂತೆ ಎಲ್ಲರೂ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಜೋ ಕೋಸ್ಟಾ ಸಂಗೀತ ಸಂಯೋಜನೆ ಇಂಪಾಗಿದೆ.

  ಅತಿಯಾದ ಸ್ಮಾರ್ಟ್​ಫೋನ್ ಬಳಕೆಯಿಂದ ದೃಷ್ಟಿ ಕಳೆದುಕೊಂಡ ಮಹಿಳೆ; ಏನಿದು ಸ್ಮಾರ್ಟ್​ಫೋನ್​ ವಿಷನ್ ಸಿಂಡ್ರೋಮ್?

  ತನ್ನ ನೆಚ್ಚಿನ ನಾಯಕ ಸಿಎಂ ಆಗಲೆಂದು 25 ವರ್ಷದಿಂದ ಗಡ್ಡ ಬಿಟ್ಟ ಅಭಿಮಾನಿ!

  ರಾಜ್ಯೋತ್ಸವ ರಸಪ್ರಶ್ನೆ - 29

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts