More

    ಗಿಲ್ಕಿ ಚಿತ್ರದ ವಿಮರ್ಶೆ: ಶಬ್ದದೊಳಗೆ ಕಳೆದು ಹೋದ ಭಾವನೆಗಳು…

    ಚಿತ್ರ: ಗಿಲ್ಕಿ
    ನಿರ್ಮಾಣ: ನರಸಿಂಹ ಕುಲಕರ್ಣಿ
    ನಿರ್ದೇಶನ: ವೈಕೆ
    ತಾರಾಗಣ: ತಾರಕ್​ ಪೊನ್ನಪ್ಪ, ಚೈತ್ರಾ ಆಚಾರ್​, ಗೌತಮ್​ ರಾಜು ಮುಂತಾದವರು

    | ಚೇತನ್​ ನಾಡಿಗೇರ್​


    ಗಿಲ್ಕಿ, ನ್ಯಾನ್ಸಿ ಮತ್ತು ಷೇಕ್​ಸ್ಪಿಯರ್​ ಎಂಬ ಮೂರು ವಿಭಿನ್ನ ಪಾತ್ರಗಳ ಸುತ್ತ ನಡೆಯುವ ಕಥೆಯೇ “ಗಿಲ್ಕಿ’. ಆ ಮೂವರದ್ದೂ ವಿಭಿನ್ನ ಪ್ರಪಂಚ. ಅವರೆಲ್ಲರೂ ಒಂದು ಹಂತದಲ್ಲಿ ಒಟ್ಟಿಗೆ ಸೇರುತ್ತಾರೆ. ತಮ್ಮ ಕಷ್ಟಗಳನ್ನು ಮರೆತು ಖುಷಿಯಾಗಿರುತ್ತಾರೆ. ಆ ಖುಷಿ ಹೆಚ್ಚು ದಿನ ಇರುವುದಿಲ್ಲ. ಒಬ್ಬರ ಕಷ್ಟಗಳನ್ನು ಇನ್ನೊಬ್ಬರು ಅರಿತುಕೊಂಡು ಇನ್ನಷ್ಟು ಹತ್ತಿರವಾಗಬೇಕು ಎನ್ನುವಷ್ಟರಲ್ಲಿ, ಕ್ರಮೇಣ ಬೇರೆ ಕಷ್ಟಗಳಿಗೆ ಸಿಲುಕಿ ದೂರಾಗುತ್ತಾರೆ.


    “ಗಿಲ್ಕಿ’ ಕಥೆ ಏನು ಎಂದರೆ ಇಷ್ಟನ್ನು ಬಹಳ ಸುಲಭವಾಗಿ ಹೇಳಿಬಿಡಬಹುದು. ಆದರೆ, ಚಿತ್ರ ನಿಜಕ್ಕೂ ಅಷ್ಟು ಸುಲಭವಾಗಿಲ್ಲ. ಚಿತ್ರ ಎಲ್ಲಿಂದಲೋ ಶುರುವಾಗಿ, ಇನ್ನೆಲ್ಲೋ ಹೋಗಿ ಮುಟ್ಟುತ್ತದೆ. ಹಾಗೆ ನೋಡಿದರೆ, “ಗಿಲ್ಕಿ’ಯಲ್ಲಿ ಸಂಕೀರ್ಣವಾದುದೇನೂ ಇಲ್ಲ. ಅದನ್ನು ಬಹಳ ಸರಳವಾಗಿಯೂ ನಿರೂಪಿಸಬಹುದಿತ್ತು. ಆದರೆ, ನಿರ್ದೇಶಕರು ಬೇರೆ ತರಹ ಯೋಚಿಸಿದ್ದಾರೆ. ಹಲವು ರೂಪಕಗಳನ್ನು ತರುತ್ತಾರೆ. ಚಿತ್ರವನ್ನು ಸಂಕೀರ್ಣಗೊಳಿಸಿದ್ದಾರೆ. ಹಾಗಾಗಿಯೇ, ಒಂದು ವಿಭಿನ್ನ ಪ್ರಯೋಗ ಆಗಬಹುದಾಗಿದ್ದ ಚಿತ್ರವನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗುತ್ತದೆ. ಆದರೂ ಚಿತ್ರ ಅಲ್ಲಲ್ಲಿ ಪ್ರೇಕ್ಷಕರನ್ನು ಕಾಡುತ್ತದೆ ಮತ್ತು ಭಾವುಕರನ್ನಾಗಿಸುತ್ತದೆ.


    ಚಿತ್ರ ನೋಡುವುದಕ್ಕೆ ಒಂದು ಮುಖ್ಯ ಕಾರಣವೆಂದರೆ, ಅದು ಚೈತ್ರಾ ಆಚಾರ್​ ಅವರ ಅಭಿನಯ. ಕನ್ನಡ ಚಿತ್ರಗಳಲ್ಲಿ ಇಂಥದ್ದೊಂದು ಪಾತ್ರ ಇದುವರೆಗೂ ಬಂದಿಲ್ಲ. ಅಷ್ಟೇ ಅಲ್ಲ, ಈ ತರಹದ ಪಾತ್ರವನ್ನು ನಿರ್ವಹಿಸುವುದು ಸಹ ಸುಲಭವಲ್ಲ. ಇಂಥದ್ದೊಂದು ಅವಕಾಶವನ್ನು ಚೈತ್ರಾ ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಪಾತ್ರವನ್ನೇ ಜೀವಿಸಿದ್ದಾರೆ. ಬುದ್ಧಿಮಾಂದ್ಯನಾಗಿ ತಾರಕ್​ ಕೆಲವೊಮ್ಮೆ ಅತಿರೇಕ ಎಂದೆನಿಸಿದರೂ, ಈ ತರಹದ ಪಾತ್ರ ಒಪ್ಪುವುದಕ್ಕೆ ಧೈರ್ಯ ಬೇಕು. ಆ ನಿಟ್ಟಿನಲ್ಲಿ ಅವರು ಗೆದ್ದಿದ್ದಾರೆ. ಇನ್ನು, ಷೇಕ್​ಸ್ಪಿಯರ್​ ಪಾತ್ರವು, “ದುನಿಯಾ’ ಚಿತ್ರದಲ್ಲಿನ ರಂಗಾಯಣ ರು ಅವರ ಪಾತ್ರ ನೆನಪಿಸುವಂತಿದೆ. ಮಾತು, ವರ್ತನೆ, ಯಾತನೆ ಎಲ್ಲದರಲ್ಲೂ ಸತ್ಯಣ್ಣನೇ ಇಣುಕಿದಂತಿದೆ.

    ವಾಸ್ತವ, ಭ್ರಮೆಯ ನಡುವಿನ ವೇಷ: ವಿಜಯವಾಣಿ ಸಿನಿಮಾ ವಿಮರ್ಶೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts