More

    ವಾಸ್ತವ, ಭ್ರಮೆಯ ನಡುವಿನ ವೇಷ: ವಿಜಯವಾಣಿ ಸಿನಿಮಾ ವಿಮರ್ಶೆ

    • ಚಿತ್ರ: ಬಹುಕೃತ ವೇಷಂ
    • ನಿರ್ದೇಶನ: ಪ್ರಶಾಂತ್ ಎಳ್ಳಂಪಳ್ಳಿ
    • ನಿರ್ಮಾಣ: ಕೆಸಿ ಎಂಟರ್​ಟೈನ್​ಮೆಂಟ್, ಡಿಕೆಆರ್ ಫಿಲಂಸ್
    • ತಾರಾಗಣ: ಶಶಿಕಾಂತ್, ವೈಷ್ಣವಿ ಗೌಡ, ಕರಣ್ ಆರ್ಯನ್

    | ಮಂಜು ಕೊಟಗುಣಸಿ

    ಸಿದ್ಧ ಸೂತ್ರಗಳನ್ನು ಬದಿಗಿರಿಸಿ ನೋಡುಗನನ್ನು ಕಾಡುವ ತಾಕತ್ತು ‘ಬಹುಕೃತ ವೇಷಂ’ ಚಿತ್ರಕ್ಕಿದೆಯೆಂದರೆ ಅದು ಅತಿಶಯೋಕ್ತಿ ಎನಿಸದು. ತಂಡ ಹೊಸದಾದರೂ, ಥ್ರಿಲ್ಲರ್ ಕಥೆಯನ್ನು ನಾಜೂಕಾಗಿ ಹೇಳುವಲ್ಲಿ ಕಡಿಮೆ ಇಲ್ಲ. ಹಾಗಾಗಿ, ಆರಂಭದಿಂದ ಕೊನೆಯವರೆಗೂ ‘ಬಹುಕೃತ ವೇಷಂ’ ಸಿನಿಮಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಒಂದು ಅನಿರೀಕ್ಷಿತ ಗಳಿಗೆಯಲ್ಲಿ ನಾಯಕ ಮತ್ತು ನಾಯಕಿ ಒಂದಾಗುತ್ತಾರೆ. ಸಹಜ ಸ್ನೇಹ ಪ್ರೀತಿ ಕಡೆಗೆ ವಾಲುತ್ತದೆ. ಯಾರ ಬಳಿಯೂ ಹೇಳಿಕೊಳ್ಳದ ನಾಯಕನಲ್ಲಿರುವ ಡಿಲೇರಿಯಂ ಫೋಬಿಯಾ ಬೆಳಕಿಗೆ ಬರುತ್ತದೆ. ಕಣ್ಣಿಗೆ ಕಾಣದ ಶತ್ರು ಜತೆಗಿನ ಆತನ ಯುದ್ಧವೂ ಮುನ್ನೆಲೆಗೆ ಬರುತ್ತದೆ. ಆಗ ಘಟಿಸುವ ಕೆಲ ಏರಿಳಿತಗಳು ನಿಜಕ್ಕೂ ಅಚ್ಚರಿ! ಕಥಾನಾಯಕನ ಸಾಹಸ ಮತ್ತು ದುಸ್ಸಾಹಕ್ಕೂ ನಿರ್ದೇಶಕರು ಜಾಗ ಕಲ್ಪಿಸಿದ್ದಾರೆ. ಅದರ ಜತೆಗೆ ಪ್ರೇಕ್ಷಕರ ತಲೆಗೂ ಹುಳ ಬಿಡುವ ತಂತ್ರಗಾರಿಕೆ ಇಲ್ಲಾಗಿದೆ. ಕಥೆ ಸಾಗಿದಂತೆ ಪ್ರೇಕ್ಷಕ ಸಿನಿಮಾದ ಭಾಗವಾಗುತ್ತಾ ಹೋಗುತ್ತಾನೆ.

    ಹಾಗಾದರೆ, ಕಥೆ ಏನು? ಹೀಗೊಂದು ಪ್ರಶ್ನೆ ಮೂಡಿದರೆ, ಚಿತ್ರ ನೋಡುವುದೇ ಒಳಿತು. ಅತಿಶಯ್ಗೆ (ಶಶಿಕಾಂತ್) ಡಿಲೇರಿಯಂ ಫೋಬಿಯಾ. ತನ್ನ ಹಿಂದೆ ಯಾರೋ ಫಾಲೋ ಮಾಡುತ್ತಿದ್ದಾರೆ, ಹಲ್ಲೆ ಮಾಡುತ್ತಾರೆೆ ಎಂಬ ದುಗುಡ. ಕತ್ತಲು ಅವನಿಗೆ ಅಸಹನೀಯ. ಆ ಕಾಯಿಲೆಯಿಂದ ಆತನಿಗೆ ಎದುರಾಗುವ ಸವಾಲುಗಳು ಮತ್ತು ಅದನ್ನು ಎದುರಿಸುವ ಪರಿಯನ್ನು ಅಷ್ಟೇ ನೈಜವಾಗಿ ಅವರು ಅಭಿವ್ಯಕ್ತಗೊಳಿಸಿದ್ದಾರೆ. ಎರಡು ಶೇಡ್​ಗಳಲ್ಲಿ ಅವರ ಅಭಿನಯ ಪೂರ್ಣಾಂಕ ಗಿಟ್ಟಿಸಿಕೊಳ್ಳುತ್ತದೆ. ಅವರಿಗೆ ಸರಿಸಾಟಿಯಾಗಿ ವೈಷ್ಣವಿ ಗೌಡ ಅವರದ್ದು ಪ್ರಬುದ್ಧ ಅಭಿನಯ. ಖಳನಾಗಿ ಖದರ್ ತೋರಿಸಿರುವ ಕರಣ್ ಆರ್ಯನ್ ಕನ್ನಡಕ್ಕೆ ಸಿಕ್ಕ ಮತ್ತೊಬ್ಬ ಕಂಚಿನ ಕಂಠದ ನಟ. ಇಡೀ ಚಿತ್ರದ ಆತ್ಮ ಎಂದರೆ ಅದು ಕಥೆ ಮತ್ತು ಚಿತ್ರಕಥೆ ಬರೆದ ಅಧ್ಯಾಯ್ ತೇಜ. ಆರಂಭದಿಂದ ಕೊನೆಯವರೆಗೂ ಎದುರಾಗುವ ಗೊಂದಲಗಳಿಗೆ ನಿರ್ದೇಶಕ ಪ್ರಶಾಂತ್ ಉತ್ತರಿಸಿದ್ದಾರೆ. ಚಿತ್ರದ ಓಟಕ್ಕೆ ಹದವಾದ ಹಿನ್ನೆಲೆ ಸಂಗೀತ, ಸಂಭಾಷಣೆ ಜತೆ ನೀಡಿದೆ.

    ಮದ್ವೆಯಾದ ಹತ್ತೇ ತಿಂಗಳಲ್ಲಿ ದುರಂತ; ಪತ್ನಿಯ ಶವ ನೋಡಿ ಪತಿಯೂ ಆತ್ಮಹತ್ಯೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts