More

    ಅಮೆರಿಕದ ಸರ್ಕಾರಿ ಶಾಲೆಗಳಲ್ಲಿ ಅಧಿಕೃತವಾಗಿ ಕನ್ನಡ ಭಾಷೆ ಕಲಿಕೆ

    ಅಮೆರಿಕದ ಸರ್ಕಾರಿ ಶಾಲೆಗಳಲ್ಲಿ ಅಧಿಕೃತವಾಗಿ ಕನ್ನಡ ಭಾಷೆ ಕಲಿಕೆಬೆಂಕಿ ಬಸಣ್ಣ ನ್ಯೂಯಾರ್ಕ್

    ಕರ್ನಾಟಕದ ಸರ್ಕಾರಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ದಿನದಿನಕ್ಕೆ ತುಂಬಾ ಕಡಿಮೆಯಾಗುತ್ತಿದೆ ಎಂಬ ನೆಪವೊಡ್ಡಿ, ಅವುಗಳನ್ನು ಮುಚ್ಚುವ ಪ್ರಯತ್ನ ನಡೆಯುತ್ತಿರುವಾಗ, ದೂರದ ಅಮೆರಿಕಾದ ಸರ್ಕಾರಿ ಹೈಸ್ಕೂಲುಗಳಲ್ಲಿ ಕನ್ನಡ ಭಾಷೆಯನ್ನು ಅಧಿಕೃತ ವಿದೇಶಿ ಭಾಷೆಯಾಗಿ ಕಲಿಸುವ ಸುವರ್ಣ ಅವಕಾಶ ಇಂದು ದೊರೆತಿದೆ. ಅಮೆರಿಕದಲ್ಲಿ ಕನ್ನಡ ಪ್ರೇಮಿಗಳ ಸತತ 15 ವರ್ಷಗಳ ಪ್ರಯತ್ನದಿಂದಾಗಿ, ಮೊಟ್ಟಮೊದಲ ಬಾರಿಗೆ, ನಾರ್ತ್ ಕ್ಯಾರೊಲಿನ ರಾಜ್ಯದ ವೇಕ್ ಕೌಂಟಿ ಸರ್ಕಾರಿ ಹೈಸ್ಕೂಲಿನಲ್ಲಿ ಕನ್ನಡವನ್ನು ಒಂದು ವಿದೇಶಿ ಭಾಷೆಯಾಗಿ ಕಲಿಯಲು ಅವಕಾಶ ದೊರೆತಿದೆ.

    ಯಾವಾಗಲೂ ಮೊಟ್ಟಮೊದಲನೆಯ ಕೆಲಸ ತುಂಬಾ ಕಷ್ಟಕರ. ನಂತರ ಇದನ್ನು ವಿಸ್ತರಣೆ ಮಾಡುವುದು ಸುಲಭ. ಅಮೆರಿಕ ಬಹುದೊಡ್ಡ ದೇಶವಾಗಿದ್ದು, ಇಲ್ಲಿಯ ಬಹಳಷ್ಟು ದೊಡ್ಡ ಊರುಗಳಲ್ಲಿರುವ ಹೈಸ್ಕೂಲುಗಳಲ್ಲಿ ಕನ್ನಡ ಭಾಷೆಯನ್ನು ವಿದೇಶಿ ಭಾಷೆಯಾಗಿ ಕಲಿಸಲು ಮುಂಬರುವ ದಿನಗಳಲ್ಲಿ ಕನ್ನಡ ಅಕ್ಯಾಡೆಮಿ ಪ್ರಯತ್ನ ಮಾಡಲಿದೆ.

    ಈ ಯಶಸ್ಸಿನ ಹಿಂದೆ ಅಮೆರಿಕ ಕನ್ನಡ ಅಕ್ಯಾಡೆಮಿಯ ಶಿವ ಗೌಡರ್, ಡಾಕ್ಟರ್ ಅಶೋಕ್ ಕಟ್ಟಿಮನಿ, ಮಧು ರಂಗಪ್ಪಗೌಡ, ಅರುಣ್ ಸಂಪತ್, ಗುರುಪ್ರಸಾದ್ ರಾವ್, ನಾವಿಕ ಅಧ್ಯಕ್ಷರಾದ ವಲ್ಲೀಶ ಶಾಸ್ತ್ರಿ, ಅಕ್ಕ ಸಂಸ್ಥೆಯ ಸುರೇಶ್ ಕೃಷ್ಣಯ್ಯ ಮುಂತಾದವರ ಅವಿರತ ಪ್ರಯತ್ನವಿದೆ. ಇದರ ಜೊತೆಗೆ ಸಲಹೆಗಾರರಾಗಿ ಸೌತ್ ಫ್ಲೋರಿಡಾ ಯುನಿವರ್ಸಿಟಿಯ ಡಾಕ್ಟರ್ ಗಿಲ್ ಬೆನ್ ಹೇರುಟ್, ಪ್ರೊಫೆಸರ್ ಕೃಷ್ಣೇಗೌಡ, ಡಾಕ್ಟರ್ ಉದಯ ಶಂಕರ ಪುರಾಣಿಕ, ಡಾಕ್ಟರ್ ತಳವಾರ್, ಮತ್ತು ಟಿಎಸ್ ನಾಗಾಭರಣ ಅವರ ಕೊಡುಗೆ ಅಪಾರ.

    ಇದನ್ನೂ ಓದಿ: ಗೂಗಲ್​ ಓಪನ್​ ಮಾಡಿದ ತಕ್ಷಣ ಇಂದು ಕಾಣಿಸಿಕೊಳ್ಳುತ್ತಿರುವ ವ್ಯಕ್ತಿ ಯಾರು ಗೊತ್ತಾ?

    ಕನ್ನಡ ಅಕ್ಯಾಡೆಮಿಯ ಇತರೆ ಸ್ವಯಂ ಸೇವಕರಾದ ನವೀನ್ ಮಲ್ಲಿಕಾರ್ಜುನಯ್ಯ, ಸಂಧ್ಯಾ ಸೂರ್ಯಪ್ರಕಾಶ್, ಶಶಿ ಬಸವರಾಜ್, ಗೌತಮ್ ಜಯಣ್ಣ, ಗೋಪಾಲಕೃಷ್ಣ ಸುಬ್ರಮಣಿ, ಮಹಾಂತೇಶ್ವರ ಸಿ.ಎಂ, ಮತ್ತು ಸುನೈನ ಶರ್ಮ ಮುಂತಾದವರು ಅಂತರ್ಜಾಲದಲ್ಲಿ ಕನ್ನಡ ಶಾಲೆಗಳನ್ನು ನಡೆಸಲು ಬೇಕಾದ ವೆಬ್ಸೈಟ್, ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಅಮೇರಿಕದ ತುಂಬೆಲ್ಲಾ ಕನ್ನಡ ಕಲಿ ಶಾಲೆಗಳು ನಡೆಯಲು ಹಗಲಿರುಳು ಶ್ರಮಿಸುತ್ತಿದ್ದಾರೆ.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಸಂಸತ್ ಭವನದ ಭೂಮಿ ಪೂಜೆ : ಐತಿಹಾಸಿಕ ಭಾಷಣದಲ್ಲಿ ಅನುಭವ ಮಂಟಪ ಸ್ಮರಿಸಿದ್ರು ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts