More

    ಸಂಸತ್ ಭವನದ ಭೂಮಿ ಪೂಜೆ : ಐತಿಹಾಸಿಕ ಭಾಷಣದಲ್ಲಿ ಅನುಭವ ಮಂಟಪ ಸ್ಮರಿಸಿದ್ರು ಪ್ರಧಾನಿ ಮೋದಿ

    ನವದೆಹಲಿ: ನೂತನ ಸಂಸತ್ ಭವನ ನಿರ್ಮಾಣಕ್ಕೆ ಇಂದು ಭೂಮಿ ಪೂಜೆಯನ್ನು ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಐತಿಹಾಸಿಕ ಭಾಷಣದಲ್ಲಿ ಕರ್ನಾಟಕದ ಬಸವಣ್ಣನವರ ಅನುಭವ ಮಂಟದ ಧ್ಯೇಯ, ಉದ್ದೇಶವನ್ನು ಕನ್ನಡದಲ್ಲಿಯೇ ಸ್ಮರಿಸಿಕೊಂಡು ಕನ್ನಡಿಗರ ಗಮನಸೆಳೆದರು.

    ಭಾರತ ಪ್ರಜಾಪ್ರಭುತ್ವದ ತಾಯಿ

    ವಿಶ್ವದ ಮೊದಲ ಸಂಸತ್​ ಬಸವಣ್ಣನವರ ಅನುಭವ ಮಂಟಪ. ಅದೊಂದು ಜನಸಭೆಯಾಗಿತ್ತು. ಅಲ್ಲಿ ನಾಡಿನ ಹಿತ, ಅಭಿವೃದ್ಧಿಗಳ ಕುರಿತ ಚರ್ಚೆಗಳಾಗುತ್ತಿದ್ದವು. ಅದು ಇಡೀ ಜಗತ್ತಿಗೆ ಮಾದರಿಯಾದುದು. ಭಾರತ ಪ್ರಜಾಪ್ರಭುತ್ವದ ತಾಯಿ. ಭಾರತದಲ್ಲಿ ಪ್ರಜಾಪ್ರಭುತ್ವ ಎನ್ನುವುದು ಒಂದು ಸಂಸ್ಕೃತಿ, ಜೀವನ ಮೌಲ್ಯ, ಜೀವನ ಪಥ ಮತ್ತು ದೇಶ ಜೀವಾಳ ಅದು. ಶತಮಾನಗಳ ಅನುಭವದ ಆಧಾರದ ಮೇಲೆ ಅಭಿವೃದ್ಧಿ ಪಡಿಸಿದ ವ್ಯವಸ್ಥೆ ನಮ್ಮ ಈ ಪ್ರಜಾಪ್ರಭುತ್ವ ಎಂದು ಪ್ರಧಾನಿ ವಿವರಿಸಿದರು. 

    ಒಬ್ಬ ಸಂಸದನಾಗಿ 2014ರಲ್ಲಿ ಮೊಟ್ಟ ಮೊದಲ ಬಾರಿ ಸಂಸತ್ ಭವನ ಪ್ರವೇಶಿಸಿದ ಆ ಸಂದರ್ಭ ನನ್ನ ಬದುಕಿನ ಅವಿಸ್ಮರಣೀಯವಾದುದು. ಪ್ರಜಾಪ್ರಭುತ್ವದ ದೇಗುಲವನ್ನು ಪ್ರವೇಶಿಸುವ ಮೊದಲು ನಾನು ತಲೆಬಾಗಿ ನಮಸ್ಕರಿಸಿದ್ದೇನೆ, ಗೌರವ ಸಲ್ಲಿಸದ್ದೇನೆ. ಈ ದಿನ 130 ಕೋಟಿಗೂ ಅಧಿಕ ಭಾರತೀಯರಿಗೆ ಹೆಮ್ಮೆಯ ದಿನವಾಗಿದ್ದು, ನಾವೆಲ್ಲರೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದೇವೆ.

    ಇದನ್ನೂ ಓದಿ: ಗೋಹತ್ಯೆ ನಿಷೇಧ ಅನುಷ್ಠಾನಕ್ಕಿದೆ ಸವಾಲುಗಳ ರಾಶಿ : ರಾಜ್ಯದಲ್ಲಿಲ್ಲ ಸರ್ಕಾರದ ಗೋಶಾಲೆಗಳು

    ಹೊಸ ಸಂಸತ್ ಭವನದ ಆವರಣವು ಹಳೆಯ ಮತ್ತು ಹೊಸ ಕಟ್ಟಡಗಳನ್ನು ಒಳಗೊಂಡಿರಲಿದೆ. ಹಳೆಯ ಸಂಸತ್ ಭವನ ದೇಶದ ಕಾಲಕಾಲದ ಅಗತ್ಯಗಳನ್ನು ಪೂರೈಸುವುದಕ್ಕೆ ಬಳಕೆಯಾಗಲಿದ್ದು, ಹೊಸ ಸಂಸತ್ ಭವನದಲ್ಲಿ ದೇಶವನ್ನು ಭವಿಷ್ಯದತ್ತ ಕೊಂಡೊಯ್ಯುವ ಚಾಲನಾ ಶಕ್ತಿ ಒದಗಿಸಲಿದೆ. ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ.

    ಇದನ್ನೂ ಓದಿ:  ಸಂಸತ್ ಶಿಲಾನ್ಯಾಸಕ್ಕೆ ಶೃಂಗೇರಿ ಮಠದ ಪೌರೋಹಿತ್ಯ! : ಧಾರ್ವಿುಕ ಕಾರ್ಯಕ್ರಮದ ಜವಾಬ್ದಾರಿ ಸಚಿವ ಪ್ರಲ್ಹಾದ್ ಜೋಶಿಗೆ

    ಇಪ್ಪತ್ತೊಂದನೇ ಶತಮಾನ ಭಾರತಕ್ಕೆ ಸೇರಿದ್ದು. ಭಾರತಕ್ಕೆ ಬಂದೊದಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ನಮ್ಮೆಲ್ಲರಿಗೂ ದೇಶ ಮೊದಲು. ಆ ಭಾವದೊಂದಿಗೆ ಕೆಲಸ ಮಾಡೋಣ. ಆತ್ಮನಿರ್ಭರ ಭಾರತವನ್ನು ಕಟ್ಟಿ ಜಗತ್ತಿಗೆ ಮಾದರಿಯಾಗೋಣ.   (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    LIVE| ಹೊಸ ಸಂಸತ್​ ಭವನದ ಭೂಮಿ ಪೂಜೆ ನೆರವೇರಿಸಿದ ಪ್ರಧಾನಿ ಮೋದಿ ಐತಿಹಾಸಿಕ ಭಾಷಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts