More

    ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವುದು ನಾಡಿಗೆ ಗೌರವ

    ತರೀಕೆರೆ: ಸಮಾನತೆ ಸಾರಿದ ಮಹಾಪುರುಷನನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವುದು ನಾಡಿಗೆ ಸಂದ ಗೌರವ ಎಂದು ನಿವೃತ್ತ ಶಿಕ್ಷಕ ಆರ್.ಕುಮಾರಸ್ವಾಮಿ ಹೇಳಿದರು.

    ಅಜ್ಜಂಪುರ ಸಮೀಪದ ಚಿಕ್ಕಾನವಂಗಲ ಸರ್ಕಾರಿ ಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿ, ಬಸವಣ್ಣನವರು ಅನುಭವ ಮಂಟಪ ನಿರ್ಮಿಸುವ ಮೂಲಕ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಶ್ರಮಿಸಿದ್ದರು ಎಂದರು.
    ರಾಷ್ಟ್ರೀಯ ಬಸವದಳದ ಸದಸ್ಯ ಬಿಸಲೆರೆ ಶಂಕರಪ್ಪ ಮಾತನಾಡಿ, ಎಲ್ಲ ಕಾಲಮಾನಕ್ಕೂ ಅನ್ವಯಿಸುವಂಥ ಸಂದೇಶ ಜಗತ್ತಿಗೆ ಸಾರಿದ ಶರಣರು, ಜನರಿಗೆ ಸ್ವರ್ಗ ಭೂ ಲೋಕದಲ್ಲೇ ಇದೆ. ಅದೂ ಕೂಡ ಕಾಯಕದಲ್ಲಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
    ಐಆರ್‌ಟಿ ಸಂಯೋಜಕ ಎನ್.ಬಿ.ಶಶಿಧರ್ ಮಾತನಾಡಿ, ವಚನ ಸಾಹಿತ್ಯದ ಅಂಶಗಳು ಮಕ್ಕಳ ಮನಸ್ಸಿನಲ್ಲಿ ಹಾಸುಹೊಕ್ಕಿರುವುದು ಮಾತ್ರವಲ್ಲ, ಜೀವನದ ಮೇಲೆ ಅತ್ಯಂತ ಪ್ರಭಾವ ಬೀರಿವೆ. ಯುವ ಪೀಳಿಗೆ ವಚನ ಸಾಹಿತ್ಯದ ಸಾರ ಅರಿತು ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
    ಜಾನಪದ ಕಲಾವಿದರಾದ ಸಿ.ಎಂ.ಶಂಕರಪ್ಪ, ಬಸವರಾಜಪ್ಪ ವಚನ ಗೀತೆ ಹಾಡಿದರು. ಮುಖ್ಯಶಿಕ್ಷಕ ವಿರೂಪಾಕ್ಷಪ್ಪ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಹೇಶ್, ಸಿಆರ್‌ಪಿಗಳಾದ ಭಾಗ್ಯಾ, ಪ್ರೇಮಾ, ಪಿಎಸಿಎಸ್ ನಿರ್ದೇಶಕ ಸಿ.ಇ.ಯೋಗೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts