More

    28ರಂದು ಆರನೇ ತಾಲೂಕು ಶರಣ ಸಾಹಿತ್ಯ ಸಮ್ಮೇಳನ: ಶ್ರೀ ಸಿದ್ದೇಶ್ವರ ಸ್ವಾಮೀಜಿ

    ಶಿರಾಳಕೊಪ್ಪ: ಪಟ್ಟಣದ ಹೊರವಲಯದ ನೇರಲಗಿ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಫೆ.28ರಂದು ತಾಲೂಕು ಆರನೇ ಶರಣ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸರ್ವಾಧ್ಯಕ್ಷರಾಗಿ 120 ಬಾರಿ ರಕ್ತದಾನ ಮಾಡಿ ಗಿನ್ನಿಸ್ ದಾಖಲೆ ನಿರ್ಮಿಸಿರುವ ಮಧುರಾ ಅಶೋಕ್ ಕುಮಾರ್ ಆಯ್ಕೆಯಾಗಿದ್ದು ಸಮಿತಿಯ ಪದಾಽಕಾರಿಗಳು ಆಹ್ವಾನ ನೀಡಿ ಗೌರವಿಸಿರುವುದಾಗಿ ವಿರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
    ಪಟ್ಟಣದ ವಿರಕ್ತ ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಖಿಲಭಾರತ ವೀರಶೈವ ಸಮಾಜ ಶಿಕಾರಿಪುರ, ವೀರಶೈವ ಸಮಾಜ ಶಿರಾಳಕೊಪ್ಪ, ಕೆದಳಿ ವೇದಿಕೆ, ಅಕ್ಕಮಹಾದೇವಿ ಪ್ರತಿಷ್ಠಾನ ಶಿರಾಳಕೊಪ್ಪ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು.
    ಆನಂದಪುರದ ಶ್ರೀ ಮುರುÀಘರಾಜೇಂದ್ರ ಸ್ವಾಮೀಜಿ ಸಮ್ಮೇಳನದ ಸಾನ್ನಿಧ್ಯ ವಹಿಸಲಿದ್ದು, ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಶಿಕಾರಿಪುರ ತಾಲುಕ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಭಾಷ ಚಂದ್ರಸ್ಥಾನಿಕ, ವೀರಶೈವ ಸಮಾಜದ ಅಧ್ಯಕ್ಷ ಪ್ರಭುಸ್ವಾಮಿ, ಡಾ. ಮುರುಘರಾಜ್, ಅಶೋಕ ಕುಮಾರ್, ಚಂದ್ರಮೌಳೇಶ್ವರ ಸಮಿತಿಯ ಉಪಾಧ್ಯಕ್ಷ ರುದ್ರಮುನಿ, ಅಕ್ಕಮಹಾದೇವಿ ಪ್ರತಿಷ್ಠಾನದ ಅಧ್ಯಕ್ಷೆ ರೂಪಾ ಹಾಲೇಶ್ ಮತ್ತು ಸಮಿತಿಯ ಸದಸ್ಯರು, ಚಂದ್ರಶೇಖರ ಸುರಹೊನ್ನೆ ಸೇರಿ ಹಲವರಿದ್ದರು.

    ಸಮ್ಮೇಳನದ ಸರ್ವಾಧ್ಯಕ್ಷರ ಪರಿಚಯ
    ಶಿರಾಳಕೊಪ್ಪದ ಸ್ವಾತಂತ್ರ÷್ಯ ಹೋರಾಟಗಾರ ಮುಂಗಲಗಿ ಶಿವಣ್ಣ ಅವರ ಸೊಸೆ ಮಧುರಾ ಅಶೋಕ್‌ಕುಮಾರ್. ೧೨೦ ಬಾರಿ ರಕ್ತದಾನ ಮಾಡಿ ಗಿನ್ನಿಸ್ ದಾಖಲೆ ನಿರ್ಮಿಸಿರುವ ಮಧುರಾ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟಿçÃಯ ಮಹಿಳಾ ಘಟಕದ ಅಧ್ಯಕ್ಷರಾಗಿದ್ದಾರೆ. ಬೆಂಗಳೂರು ಕಿಂಗ್ಸ್ ಲಯನ್ಸ್ ವಲಯಾಧ್ಯಕ್ಷೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ಶಾಖೆಯ ಉಪಾಧ್ಯಕ್ಷೆಯಾಗಿದ್ದು ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ, ಭಗವಾನ್ ಬುದ್ಧ, ಬಸವ ಹಾಗೂ ಡಾ.ಬಿ.ಆರ್.ಅಂಬೇಡ್ಕÀರ್ ಪ್ರಶಸ್ತಿ, ವರ್ಲ್ಡ್ ಐಕಾನ್ ಪ್ರಶಸ್ತಿ ಮುಂಬೈ, ದೇಹಲಿಯ ನಾರಿ ಶಕ್ತಿ ಪ್ರಶಸ್ತಿ ಸೇರಿ ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳಿAದ ಹಲವು ಪ್ರಶಸ್ತಿಗಳು ಲಭಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts