ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಚಿತ್ರಗಳಿಗೆ ಟ್ರೆಂಡ್ ಸೆಟರ್ ಆದಂತಹ ಉಪೇಂದ್ರ ನಿರ್ದೇಶನದ ಮತ್ತು ಶಿವರಾಜಕುಮಾರ್ ಅಭಿನಯದ ‘ಓಂ’ ಚಿತ್ರವು ಇಂದಿಗೆ 25 ವರ್ಷಗಳನ್ನು ಪೂರೈಸಿದೆ. ಮೇ 19, 1995ರಂದು ಈ ಚಿತ್ರ ಬಿಡುಗಡೆಯಾಗಿ, ಕನ್ನಡ ಚಿತ್ರರಂಗದಲ್ಲಿ ಹಲವು ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ 25 ವರ್ಷಗಳ ನಂತರವೂ ‘ಓಂ’ ಚಿತ್ರದ ಜನಪ್ರಿಯತೆಗೆ ಸ್ವಲ್ಪವೂ ಕುಂದು ಬಂದಿಲ್ಲ.
ಇದನ್ನೂ ಓದಿ: ‘ಓಂ’ 25: ಅಭಿಮಾನಿಗಳಿಗೆ ಶಿವಣ್ಣ-ಉಪೇಂದ್ರ ಸಖತ್ ಗಿಫ್ಟ್
ಚಿತ್ರಕ್ಕೆ ಸಿಲ್ವರ್ ಜ್ಯೂಬಿಲಿ ಆದ ಹಿನ್ನೆಲೆಯಲ್ಲಿ ಶಿವರಾಜಕುಮಾರ್ ಮತ್ತು ಉಪೇಂದ್ರ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೆಲ್ಲಾ ‘ಓಂ’ ಸಖತ್ ಹವಾ ಎಬ್ಬಿಸಿದ್ದು, ಅಭಿಮಾನಿಗಳೆಲ್ಲಾ ಚಿತ್ರದ ಪೋಸ್ಟರ್‌ಗಳನ್ನು, ವಿಡಿಯೋಗಳನ್ನು ಮತ್ತು ಸ್ಟಿಲ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಬರೀ ಅಭಿಮಾನಿಗಳಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಹಲವು ಸ್ಟಾರ್ ನಟರು ಮತ್ತು ತಂತ್ರಜ್ಞರು ಸಹ ‘ಓಂ’ ಧ್ಯಾನ ಮಾಡುತ್ತಿದ್ದಾರೆ. ‘ದುನಿಯಾ’ ವಿಜಯ್, ‘ಜೋಗಿ ಪ್ರೇಮ್’, ‘ನೆನಪಿರಲಿ’ ಪ್ರೇಮ್, ರಿಷಭ್ ಶೆಟ್ಟಿ, ತರುಣ್ ಸುಧೀರ್, ಯುವ ರಾಜಕುಮಾರ್, ಸಂತೋಷ್ ಆನಂದರಾಮ್, ಶಾನ್ವಿ ಶ್ರೀವಾತ್ಸವ, ರಘು ದೀಕ್ಷಿತ್, ಅಜನೀಶ್ ಲೋಕನಾಥ್, ಎ.ಪಿ. ಅರ್ಜುನ್, ಕ್ರಿಕೆಟಿಗರಾದ ವಿಜಯ್ ಭಾರದ್ವಾಜ್, ದೊಡ್ಡ ಗಣೇಶ್ ಸೇರಿದಂತೆ ಹಲವರು ‘ಓಂ’ ಸಿಡಿಪಿಗಳನ್ನು ಹಂಚಿಕೊಳ್ಳುವುದರ ಜತೆಗೆ, ಚಿತ್ರತಂಡಕ್ಕೆ ಶುಭಾಶಯಗಳನ್ನು ಹೇಳಿದ್ದಾರೆ.
ಇದನ್ನೂ ಓದಿ: ನಿರ್ಮಾಪಕರು ಉಳಿಯಲಿ, ಓಟಿಟಿ ಬಗ್ಗೆ ಜಗ್ಗೇಶ್ ಹೇಳಿದ್ದೇನು?
ಇನ್ನು, ‘ಓಂ’ ಚಿತ್ರದ 25ನೇ ವರ್ಷದ ಸಂಭ್ರಮವನ್ನು ಆಚರಿಸುವುದಕ್ಕೆ ಶಿವರಾಜಕುಮಾರ್ ಮತ್ತು ಉಪೇಂದ್ರ ಇಬ್ಬರೂ ಇಂದು ರಾತ್ರಿ ಫೇಸ್‌ಬುಕ್ ಲೈವ್ ಬರುತ್ತಿದ್ದಾರೆ. ಆ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಘಟನೆಗಳು, ಮರೆಯದ ಅನುಭವಗಳನ್ನು ಅವರು ಅಭಿಮಾನಿಗಳ ಜತೆಗೆ ಹಂಚಿಕೊಳ್ಳಲಿದ್ದಾರೆ ಎನ್ನುವುದು ವಿಶೇಷ.
ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಮೈಲಿಗಲ್ಲು ಸಾಧಿಸಿ, ಇಂದಿಗೂ ಥಿಯೇಟರ್ ನಲ್ಲಿ ರೀ- ರಿಲೀಸ್ ಆಗುತ್ತಿರೋ ಕನ್ನಡದ #ಓಂ ಸಿನಿಮಾಕ್ಕೆ 25 ವರ್ಷದ ಸಂಭ್ರಮ… @NimmaShivanna @Nimmaupendra#25YrsForTrendsetterOm pic.twitter.com/TILp67fnkV
— Rishab Shetty (@shetty_rishab) May 18, 2020
ಅವಳಿ ಸಹೋದರಿಯರ ಕಣ್ಣಾಮುಚ್ಚಾಲೆ