ಕೊನೆಗೂ ’45’ಗೆ ನಾಯಕಿ ಫಿಕ್ಸ್​; ಚಿತ್ರತಂಡಕ್ಕೆ ಸೇರ್ಪಡೆಯಾದ ಕೌಸ್ತುಭ ಮಣಿ

blank

ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ’45’ ಚಿತ್ರಕ್ಕೆ ನಾಯಕಿ ಬೇಕಾಗಿದ್ದಾಳೆ ಎಂದು ನಿರ್ದೇಶಕ ಅರ್ಜುನ್​ ಜನ್ಯ ಸೋಷಿಯಲ್​ ಮೀಡಿಯಾದಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಹಾಗೆ ಹಾಕಿದ್ದೇ ಹಾಕಿದ್ದು, ಈಗ ಚಿತ್ರತಂಡದವರಿಗೆ ಕೊನೆಗೂ ನಾಯಕಿ ಸಿಕ್ಕಾಗಿದೆ.

ಇದನ್ನೂ ಓದಿ: ಬಾಯ್‌ಫ್ರೆಂಡ್ ಜತೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ನಟಿ ಜಾನ್ವಿ ಕಪೂರ್!

’45’ ಚಿತ್ರಕ್ಕೆ ‘ನನ್ನರಸಿ ರಾಧೆ’ ಖ್ಯಾತಿಯ ಕೌಸ್ತುಭ ಮಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದು ಅವರ ಎರಡನೆಯ ಚಿತ್ರವಾಗಿದ್ದು, ಇದಕ್ಕೂ ಮುನ್ನ ತೇಜ್​ ಅಭಿನಯದ ಮತ್ತು ನಿರ್ದೇಶನದ ‘ರಾಮಾಚಾರಿ 2.0′ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ’45’, ಕೌಸ್ತುಭ ಅಭಿನಯದ ಎರಡನೆಯ ಚಿತ್ರವಾಗಿದೆ.

ಚಿತ್ರಕ್ಕೆ ನಾಯಕಿಯೇನೋ ಸಿಕ್ಕಾಗಿದೆ. ಆದರೆ, ಯಾರಿಗೆ ನಾಯಕಿ ಎಂಬ ಕುತೂಹಲ ಮಾತ್ರ ಹೆಚ್ಚಾಗಿದೆ. ಚಿತ್ರದಲ್ಲಿ ಶಿವರಾಜಕುಮಾರ್​, ಉಪೇಂದ್ರ ಮತ್ತು ರಾಜ್​ ಬಿ ಶೆಟ್ಟಿ ಅಭಿನಯಿಸುತ್ತಿದ್ದು, ಈ ಮೂವರಲ್ಲಿ ಕೌಸ್ತುಭ ಯಾರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಮಾತ್ರ ಚಿತ್ರತಂಡ ಉತ್ತರಿಸಿಲ್ಲ.

ಇದನ್ನೂ ಓದಿ: ಮೂರು ಚಿತ್ರಗಳಿಗೆ ಸುದೀಪ್​ ಗ್ರೀನ್​ ಸಿಗ್ನಲ್​; ಸದ್ಯದಲ್ಲೇ ಘೋಷಣೆ

’45’ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಈ ಚಿತ್ರವನ್ನು ‘ನಾತಿಚರಾಮಿ’, ‘ಗಾಳಿಪಟ 2’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ರಮೇಶ್​ ರೆಡ್ಡಿ ನಿರ್ಮಿಸುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

ಇದೇ ವಾರ ನಡೆಯಲಿದೆಯಂತೆ ಪರಿಣೀತಿ ಚೋಪ್ರಾ, ರಾಘವ್​ ಛಡ್ಡಾ ನಿಶ್ಚಿತಾರ್ಥ …

Share This Article

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಪ್ಪು ನೀರು ಕುಡಿಯುವುದರಿಂದ ಏನು ಪ್ರಯೋಜನ; ಇಲ್ಲಿದೆ ನಿಮಗಾಗಿ ಹೆಲ್ತಿ ಮಾಹಿತಿ | Health Tips

ಬೆಳಗ್ಗೆ ಎದ್ದ ನಂತರ ನೀರು ಕುಡಿಯುವ ಅಭ್ಯಾಸವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ…

ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ?; ಈ ತರಕಾರಿಗಳಿಂದ ತೊಂದರೆ ನಿವಾರಣೆ ಗ್ಯಾರಂಟಿ | Health Tips

ಮಲಬದ್ಧತೆ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದೆ. ನಿಮ್ಮ ಕರುಳುಗಳು ಸರಿಯಾಗಿ…

ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಉತ್ತಮ ಮದ್ದು ತೆಂಗಿನ ಎಣ್ಣೆ; ಈ ಬಗ್ಗೆ ತಜ್ಞರು ಹೇಳೋದೇನು | Health Tips

ಗರ್ಭಾವಸ್ಥೆಯಲ್ಲಿ ಹಿಗ್ಗಿಸಲಾದ ಗುರುತುಗಳು ಇರುವುದು ಸಹಜ. ಕೆಲವೊಮ್ಮೆ ಈ ಗುರುತುಗಳು ತಾವಾಗಿಯೇ ಮಾಯವಾಗುತ್ತವೆ ಮತ್ತು ಕೆಲವೊಮ್ಮೆ…