More

    ಒಂದೇ ದಿನಕ್ಕೆ ಸೀಮಿತವಲ್ಲ … ಯೋಗದ ಮಹತ್ವ ಸಾರಿದ ತಾರೆಯರು

    ಬೆಂಗಳೂರು: ಇಂದು ವಿಶ್ವ ಯೋಗ ದಿನ. ಈ ಸಂದರ್ಭದಲ್ಲಿ ಕನ್ನಡದ ಮೂವರು ಜನಪ್ರಿಯ ನಟಿಯರು, ಯೋಗ ಬಗ್ಗೆ ‘ವಿಜಯವಾಣಿ’ಯ ಜತೆಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

     

    ಜೀವನಶೈಲಿ ಆಗಿಬಿಟ್ಟಿದೆ

    ಒಂದೇ ದಿನಕ್ಕೆ ಸೀಮಿತವಲ್ಲ ... ಯೋಗದ ಮಹತ್ವ ಸಾರಿದ ತಾರೆಯರುನಾನು ಹಲವು ವರ್ಷಗಳಿಂದ ಯೋಗ ಅಭ್ಯಾಸ ಮಾಡುತ್ತಿದ್ದೇನೆ. ಯೋಗ ಎನ್ನುವುದು ಜೀವನಶೈಲಿ ಆಗಿಬಿಟ್ಟಿದೆ. ದಿನ ಹೇಗೆ ಸ್ನಾನ ಮಾಡುತ್ತೇವೋ, ಊಟ ಮಾಡುತ್ತೇವೋ, ಯೋಗ ಸಹ ಜೀವನದ ಒಂದು ಭಾಗವಾಗಿಬಿಟ್ಟಿದೆ. ಯೋಗ ಎನ್ನುವುದು ಒಂದು ದಿನದ ವಿಷಯವಲ್ಲ. ವಿಶ್ವ ಯೋಗದಿಂದು ಯೋಗ ಮಾಡಿ ಪೋಸ್ ಕೊಡುವುದಲ್ಲ ಅಥವಾ ಹೊಸ ವರ್ಷದಿಂದ ಯೋಗ ಮಾಡುತ್ತೀನಿ ಎಂದು ಒಂದು ದಿನ ಮಾತ್ರ ಮಾಡುವುದಲ್ಲ. ಅದೊಂದು ಜೀವನಶೈಲಿಯಾಗಬೇಕು. ಯೋಗ ಎನ್ನುವುದು ಜೀವನದ ಒಂದು ಅಂಗವಾಗಬೇಕು. ಹಾಗಾದರೆ, ಆರೋಗ್ಯ ಸಾಕಷ್ಟು ಸುಧಾರಿಸುತ್ತದೆ. ಅದರಲ್ಲೂ ಈ ಕರೊನಾ ಕಾಲದಲ್ಲಿ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಿದರೆ, ಯಾವ ಸಮಸ್ಯೆ ಸಹ ಎದುರಾಗುವುದಿಲ್ಲ. ನಿತ್ಯ ಯೋಗಾಭ್ಯಾಸ ಮಾಡುತ್ತಿದ್ದರಿಂದ, ನನಗೆ ಕರೊನಾ ಪಾಸಿಟಿವ್ ಆದಾಗ, ಕೇವಲ ಮೂರು ದಿನಗಳಲ್ಲಿ ಚೇತರಿಸಿಕೊಂಡೆ. ಇಂಥ ಸಮಯದಲ್ಲಿ ಕಡ್ಡಾಯವಾಗಿ ಯೋಗ ಮಾಡಬೇಕು ಎಂದು ಸರ್ಕಾರ ನೀತಿ ರೂಪಿಸಬೇಕು. ಯೋಗ ಮಾಡುವುದರಿಂದ ಆಕ್ಸಿಜನ್ ಲೆವೆಲ್ ಹೆಚ್ಚಾಗುತ್ತದೆ.
    – ಅನಿತಾ ಭಟ್

    ಇದನ್ನೂ ಓದಿ: ಹೊಸ ಮನೆ ಖರೀದಿಗಾಗಿ ಅಜಯ್​ ದೇವಗನ್​ ಮಾಡಿದ ಸಾಲ ಎಷ್ಟು?

    ಒಂದೇ ದಿನಕ್ಕೆ ಸೀಮಿತವಲ್ಲ ... ಯೋಗದ ಮಹತ್ವ ಸಾರಿದ ತಾರೆಯರುಅದೊಂದು ನಿರಂತರ ಪ್ರಕ್ರಿಯೆ

    ಮುಂಚೆ ನಾನು ಯೋಗ ಜತೆಗೆ ಜಿಮ್‌ಗೆ ಸಹ ಹೋಗುತ್ತಿದ್ದೆ. ಆದರೆ, ಈಗ ಒಂದು ವರ್ಷದಿಂದ ಜಿಮ್ ಇಲ್ಲದಿರುವುದರಿಂದ, ಸತತವಾಗಿ ಯೋಗಾಭ್ಯಾಸ ಮಾಡುತ್ತಿದ್ದೇನೆ. ಆನ್‌ಲೈನ್ ಕೋಚಿಂಗ್ ಮೂಲಕ ಈಗಲೂ ಅಭ್ಯಾಸ ಮುಂದುವರೆದಿದೆ. ಅದೊಂದು ನಿಧಾನವಾದ ಪ್ರಕ್ರಿಯೆ. ಜಿಮ್ ತರಹ ತಕ್ಷಣ ಲಿತಾಂಶ ಸಿಗುವುದಿಲ್ಲ. ಯೋಗದಿಂದ ಲಿತಾಂಶ ಸಿಗುವುದಕ್ಕೆ ಒಂದಿಷ್ಟು ಸಮಯ ಕಾಯಬೇಕಾಗುತ್ತದೆ. ದೈಹಿಕ ಕಸರತ್ತಿಗಿಂತ ಮಾನಸಿಕವಾಗಿ ಸಾಕಷ್ಟು ಅನುಕೂಲವಾಗುತ್ತದೆ. ಏಕೆಂದರೆ, ಇಲ್ಲಿ ಉಸಿರಾಟ ಬಹಳ ಮುಖ್ಯ. ಏನೇ ಮಾಡಿದರೂ ಕೌಂಟ್ ಇಟ್ಟುಕೊಳ್ಳಲೇಬೇಕು. ಎಲ್ಲವೂ ಉಸಿರಾಟದ ಮೇಲೆ ಅವಲಂಬಿತವಾಗಿರುತ್ತದೆ. ಅದರಿಂದ ಮನಸ್ಸು ಕಾಮ್ ಆಗುತ್ತದೆ. ಹಾಗಾಗಿ, ಅದೊಂದು ನಿರಂತರ ಪ್ರಕ್ರಿಯೆಯೇ ಹೊರತು ಒಂದು ದಿನದ ವಿಶೇಷತೆಯಲ್ಲ. ಸೋಷಿಯಲ್ ಮೀಡಿಯಾದಿಂದಾಗಿ ವಿಶ್ವ ಯೋಗ ದಿನಕ್ಕೆ ಹೆಚ್ಚು ಪ್ರಚಾರ ಸಿಗಬಹುದು ಅಥವಾ ಅಂದು ಇವೆಂಟ್‌ಗಳು ಹೆಚ್ಚಾಗಬಹುದು. ಆದರೆ, ನನಗೆ ಅದು ನಿರಂತರ. ಹಾಗಾಗಿ, ವಿಶ್ವ ಯೋಗ ದಿನದಂದು ಸಹ ಅದು ಮುಂದುವರೆಯುತ್ತದೆ.
    – ಕಾವ್ಯಾ ಶೆಟ್ಟಿ

    ಇದನ್ನೂ ಓದಿ: ನನ್ನ ನುಡಿ-ನಗು-ನೆಮ್ಮದಿ ನೀವಾಗಿದ್ರಿ … ರಾಮು ನೆನೆದ ಮಾಲಾಶ್ರೀ

    ಒಂದೇ ದಿನಕ್ಕೆ ಸೀಮಿತವಲ್ಲ ... ಯೋಗದ ಮಹತ್ವ ಸಾರಿದ ತಾರೆಯರುದೇಹಕ್ಕಷ್ಟೇ ಅಲ್ಲ, ಮನಸ್ಸಿಗೂ ಮುಖ್ಯ

    ಕಳೆದ 15 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದೇನೆ. ಒಮ್ಮೆ ಮನೆ ಪಕ್ಕದಲ್ಲಿ ಒಂದು ಯೋಗಾಭ್ಯಾಸ ಶಿಬಿರ ಇತ್ತು. ಅಲ್ಲಿಗೆ ಹೋಗಿ ಅದೊಂದು ಜೀವನಭ್ಯಾಸ ಆಗಿ ಹೋಯಿತು. ಕರೊನಾ ಎರಡನೆಯ ಅಲೆಯ ಸಂದರ್ಭದಲ್ಲಿ ನಾನು ಫ್ರಂಟ್​ಲೈನ್​ ವಾರಿಯರ್ ತರಹ ಕೆಲಸ ಮಾಡಿದೆ. ಅದಕ್ಕೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಶಕ್ತಿ ನೀಡಿದ್ದು ಯೋಗ ಎಂದರೆ ತಪ್ಪಿಲ್ಲ. ಯೋಗದ ಬಗ್ಗೆ ಜನರಲ್ಲೂ ಕ್ರಮೇಣ ಅರಿವು ಮೂಡುತ್ತಿದೆ. ಈಗಂತೂ ರಸ್ತೆರಸ್ತೆಯಲ್ಲೂ ಜಿಮ್ ಮತ್ತು ಯೋಗಾಲಯವಿದೆ. ಅದರಲ್ಲೂ ಈಗ ಎಲ್ಲೆಲ್ಲೂ ಕರೊನಾ ಭಯವಿರುವುದರಿಂದ ಜನ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ನಮಗೇನೂ ಸಮಸ್ಯೆ ಇಲ್ಲ, ನಮಗ್ಯಾಕೆ ಕಸರತ್ತು ಎಂದು ಬಹಳಷ್ಟು ಜನ ಯೋಚಿಸುತ್ತಾರೆ. ಆರೋಗ್ಯವಾಗಿರಬಹುದು, ಆದರೆ ಇಮ್ಯುನಿಟಿ ಬೇಡವಾ? ನಾವು ಫಿಟ್ ಆಗಿದ್ದೇವೆ ಎಂದು ಬಹಳಷ್ಟು ಜನ ಭಾವಿಸಿರುತ್ತಾರೆ. ಅವರಿಗೆ ಖಾಯಿಲೆ ಬರುವುದಿಲ್ಲವಾ? ಕರೊನಾದ ಸಮಸ್ಯೆಗಳು ಅವರಿಗೆ ಅರ್ಥವಾಗುತ್ತಿಲ್ಲವಾ? ಗೊತ್ತಿಲ್ಲ. ನಾನು ಯೋಗ ಮಾಡಿ ಅಷ್ಟು ಫಿಟ್ ಆಗಿದ್ದರೂ, ನನಗೆ ಕೊಲೆಸ್ಟ್ರಾಲ್ ಬಂದಿತ್ತು. ಕೊನೆಗೆ ಕಸರತ್ತು ಮಾಡಿದಾಗ ಸರಿಹೋಯ್ತು. ಸೃಷ್ಟಿಯಲ್ಲಿ ಎಲ್ಲದಕ್ಕೂ ಒಂದು ಬ್ಯಾಲೆನ್ಸ್ ಇದೆ. ನಾವು ಆರೋಗ್ಯದಲ್ಲೂ ಆ ಬ್ಯಾಲೆನ್ಸ್ ಕಂಡುಕೊಳ್ಳಬೇಕು. ಆ ಬ್ಯಾಲೆನ್ಸ್ ಸಿಗಬೇಕೆಂದರೆ ಯೋಗ ಬಹಳ ಮುಖ್ಯ. ಬರೀ ದೇಹಕ್ಕಷ್ಟೇ ಅಲ್ಲ, ಮನಸ್ಸಿಗೂ ಯೋಗ ಬೇಕು.

    – ಸಂಜನಾ ಗಲ್ರಾನಿ

    ಭಾರತ ಟೆಸ್ಟ್ ವಿಶ್ವಕಪ್ ಗೆದ್ದರೆ ಬೆತ್ತಲಾಗುವೆ, ಕೊಹ್ಲಿ ಪಡೆಗೆ ಪೂನಂ ಪಾಂಡೆ ಆಫರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts