More

    ಗಂಡು ಮಗುವಿಗೆ ಜನ್ಮ ನೀಡಿದ ಮಯೂರಿ! ಹುಟ್ಟಿದ ತಕ್ಷಣ ಇನ್​ಸ್ಟಾಗ್ರಾಂಗೆ ಬಂದ ಮಗರಾಯ

    ಬೆಂಗಳೂರು: ಕೃಷ್ಣ ಲೀಲಾ ಸಿನಿಮಾ ಖ್ಯಾತಿಯ ನಟಿ ಮಯೂರಿ ಸೋಮವಾರದಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷವೆಂದರೆ ಮಗು ಹುಟ್ಟಿದ ತಕ್ಷಣವೇ ಅದಕ್ಕೆಂದು ಹೊಸ ಇನ್​ಸ್ಟಾಗ್ರಾಂ ಖಾತೆಯನ್ನು ಮಾಡಿರುವ ಮಯೂರಿ ಅದನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಕುಟುಂಬಕ್ಕೆ ಮಗರಾಯ ಬಂದಿರುವುದಾಗಿ ಮಯೂರಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಸಂತೋಷವನ್ನು ತೋರ್ಪಡಿಸಲು ಯಾವುದೇ ಪದಗಳಿಲ್ಲ. ಇನ್ನೊಂದು ಹೊಸ ಜೀವನ ಇದೀಗ ಆರಂಭವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಮಯೂರಿ ಅವರ ಪತಿ ಅರುಣ್​ ರಾಜು ಕೂಡ ಮಗನ ಆಗಮನದ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.

    ಇದೀಗ ತಾನೇ ಭೂಮಿಗೆ ಬಂದಿರುವ ಈ ಸ್ಟಾರ್​ಕಿಡ್​ಗೆ ಹೊಸದೊಂದು ಇನ್​ಸ್ಟಾಗ್ರಾಂ ಖಾತೆಯನ್ನು ತೆರೆಯಲಾಗಿದೆ. starboii_1111 ಹೆಸರಿನಲ್ಲಿ ಖಾತೆ ತೆರೆಯಲಾಗಿದ್ದು, ಅದನ್ನು ತಾಯಿ ಮಯೂರಿ ಮತ್ತು ತಂದೆ ಅರುಣ್​ ನಿರ್ವಹಿಸುತ್ತಿರುವುದಾಗಿಯೂ ತಿಳಿಸಲಾಗಿದೆ. ಆ ಪ್ರೊಫೈಲ್​ನಲ್ಲಿ ಮಯೂರಿ ಮತ್ತು ಅರುಣ್​ ಕೈನಲ್ಲಿ ಮಗುವಿನ ಕೈ ಇರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಪಶ್ಚಿಮ ಘಟ್ಟದಲ್ಲೇಕೆ ಮಳೆ ಹೆಚ್ಚು? ಕಾಡಿನಿಂದಾಗಿ ಮಳೆಯೋ? ಮಳೆಯಿಂದಾಗಿ ಕಾಡೋ?

    ಸೆಕ್ಸ್​ ಡಾಲ್​ನೊಂದಿಗಿನ ಮದುವೆ ಮುರಿದುಕೊಂಡ ಬಾಡಿಬಿಲ್ಡರ್​! ಈಗ ಇವನಿಗೆ ಜತೆಯಾಗಿರೋದು ಮತ್ತೊಂದು ಸೆಕ್ಸ್​ ಡಾಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts