More

    ಕಂಗನಾ ಮನೆ ಕೆಡವಲು ಮುಂಬೈ ಪಾಲಿಕೆ ವಕೀಲರಿಗೆ ನೀಡಿದ ಬಂಪರ್ ಮೊತ್ತವಿದು!

    ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್​ ಇದೀಗ ಮಹಾರಾಷ್ಟ್ರ ಸರ್ಕಾರದ ಬಗ್ಗೆ ಮತ್ತೆ ಗುಡುಗಿದ್ದಾರೆ. ಅತಿಕ್ರಮ ಆರೋಪದಡಿ ಮುಂಬೈ ಪಾಲಿಕೆ ಕಂಗನಾ ಅವರ ಮನೆಯನ್ನು ಒಡೆದುಹಾಕಿತ್ತು. ಈಗ ಅದೇ ವಿಚಾರದ ಬಗ್ಗೆ ಕಂಗನಾ ಮರು ಮಾತನಾಡಿದ್ದಾರೆ.

    ಇದನ್ನೂ ಓದಿ: ಕರಣ್, ಕಂಗನಾ ಮತ್ತು ಕಸ!

    ಹೌದು, ಮುಂಬೈನ ಬಾಂದ್ರಾದಲ್ಲಿನ ಕಂಗನಾ ಮನೆಯನ್ನು ಅತಿಕ್ರಮ ಆರೋಪದಡಿ ಒಡೆದುಹಾಕಲಿ ಮುಂಬೈ ಪಾಲಿಕೆ ಬರೋಬ್ಬರಿ 82 ಲಕ್ಷ ರೂ ಖರ್ಚು ಮಾಡಿದೆ. ಈ ವಿಚಾರವನ್ನು ತಿಳಿದ ಕಂಗನಾ, ಪಾಲಿಕೆ ಮತ್ತು ಉದ್ಧವ್​ ಠಾಕ್ರೆ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ.

    ‘ನನ್ನ ಮನೆಯನ್ನು ಅತಿಕ್ರಮ ಎಂದು ಸಾಬೀತು ಮಾಡಿ, ಕೆಡವಿ ಹಾಕಲು ಮುಂಬೈ ಪಾಲಿಕೆ ವಕೀಲರಿಗೆ ಬರೋಬ್ಬರಿ 82 ಲಕ್ಷ ಮೊತ್ತ ನೀಡಿದೆ. ಹೆಣ್ಣು ಹುಡುಗಿಯನ್ನು ಎದುರಿಸಲು 82 ಲಕ್ಷ ಸಾರ್ವಜನಿಕರ ಹಣವನ್ನು ಪಪ್ಪು ಗ್ಯಾಂಗ್​ ಹಾಳು ಮಾಡಿದೆ’ ಎಂದಿದ್ದಾರೆ.

    ಇದನ್ನೂ ಓದಿ: ನಾಗಿಣಿ ಅವತಾರ ಎತ್ತಲು ಸಜ್ಜಾದ ಶ್ರದ್ಧಾ ಕಪೂರ್​

    ಅಂದಹಾಗೆ, ಕಂಗನಾರ ಬಾಂದ್ರಾ ಮನೆಯನ್ನು ಕೆಡವಲು ಹಿರಿಯ ವಕೀಲ ಆಸ್ಪಿ ಚಿನೋಯ್​ಗೆ ಫೀಸ್​ ರೂಪದಲ್ಲಿ 82 ಲಕ್ಷ ವ್ಯಯಿಸಿದೆ. ಸೆ. 22ರಂದು 22.50 ಲಕ್ಷ ಮತ್ತು ಅ.7 ರಂದು 60 ಲಕ್ಷ ಸೇರಿ ಒಟ್ಟಾರೆ 82.50 ಲಕ್ಷ ಮೊತ್ತವನ್ನು ಬಿಎಂಸಿ ವಕೀಲರಿಗೆ ನೀಡಿದೆ. (ಏಜೆನ್ಸೀಸ್​)

    ಚಿತ್ರ ಹೇಗಿರುತ್ತದೆ ಎಂದು ಪರಿಚಯಿಸುವುದಕ್ಕೆ 25 ನಿಮಿಷಗಳ ಶೋರೀಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts