More

    ‘ತಲೈವಿ’ ಚಿತ್ರದ ಇನ್ನೊಂದು ಹಂತದ ಚಿತ್ರೀಕರಣದ ಮುಗಿಸಿದ ಕಂಗನಾ

    ಚೆನ್ನೈ: ‘ತಲೈವಿ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿನ ಕೆಲವು ಚಿತ್ರಗಳನ್ನು ಕಂಗನಾ ರಣಾವತ್​ ಇತ್ತೀಚೆಗಷ್ಟೇ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈಗ ಅವರು ಆ ಚಿತ್ರದ ಎರಡನೆಯ ಹಂತದ ಚಿತ್ರೀಕರಣವನ್ನು ಸದ್ದಿಲ್ಲದೆ ಮುಗಿಸಿದ್ದಾರೆ.

    ಇದನ್ನೂ ಓದಿ: ಖ್ಯಾತ ಹಿರಿಯ ಸಂಗೀತ ನಿರ್ದೇಶಕ ರಾಜನ್​ ವಿಧಿವಶ

    ‘ತಲೈವಿ’ ಚಿತ್ರವು ಜನಪ್ರಿಯ ನಟಿ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನವನ್ನಾಧರಿಸಿದ ಚಿತ್ರ. ಈ ಚಿತ್ರದ ಚಿತ್ರೀಕರಣ ಕೆಲವು ತಿಂಗಳ ಮುಂಚೆಯೇ ಮುಗಿಯಬೇಕಿತ್ತು. ಅಷ್ಟೇ ಅಲ್ಲ, ಚಿತ್ರವು ಜೂನ್​ 26ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಸಹ ಹೇಳಿಕೊಂಡಿತ್ತು.

    ಆದರೆ, ಲಾಕ್​ಡೌನ್​ನಿಂದ ಚಿತ್ರತಂಡದ ಯೋಜನೆಗಳೆಲ್ಲಾ ತಲೆ ಕೆಳಗಾಗಿ, ಇತ್ತೀಚೆಗಷ್ಟೇ ಚಿತ್ರದ ಇನ್ನೊಂದು ಹಂತದ ಚಿತ್ರೀಕರಣ ಚೆನ್ನೈನಲ್ಲಿ ಪ್ರಾರಂಭವಾಗಿತ್ತು. ಲಾಕ್​ಡೌನ್​ ಸಮಯವನ್ನು ಮನಾಲಿಯಲ್ಲಿ ಕಳೆದಿದ್ದ ಕಂಗನಾ, ಶೂಟಿಂಗ್​ಗೆಂದು ಚೆನ್ನೈಗೆ ಬಂದಿದ್ದರು.

    ಇದನ್ನೂ ಓದಿ: ‘ಕೆಜಿಎಫ್​ 2’ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿ

    ಇದೀಗ ಆ ಹಂತದ ಚಿತ್ರೀಕರಣ ಮುಗಿದು, ಚಿತ್ರೀಕರಣದ ಕೆಲವು ಬ್ಲಾಕ್​ ಅಂಡ್​ ವೈಟ್​ ಫೋಟೋಗಳನ್ನು ಕಂಗನಾ ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ಜಯಾ ಮಾ ಅವರ ಆಶೀರ್ವಾದದಿಂದ ನಾವು ‘ತಲೈವಿ’ ಚಿತ್ರದ ಎರಡನೆಯ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದೇವೆ. ಕರೊನಾ ನಂತರ ಸಾಕಷ್ಟು ಬದಲಾವಣೆಗಳು ಆಗಿವೆ. ಆದರೆ, ಆಕ್ಷನ್​ ಮತ್ತು ಕಟ್​ ನಡುವೆ ಯಾವುದೇ ಬದಲಾವಣೆ ಆಗಿಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ.

    ‘ಬೆಲ್​ ಬಾಟಮ್​’ ಮುಗೀತು; ‘ಪೃಥ್ವಿರಾಜ್​’ ಆದ ಅಕ್ಷಯ್​ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts