More

    ಗೋ ಸಂಪತ್ತು ವೃದ್ಧಿಗೆ ಸರ್ಕಾರ ಯೋಜನೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

    ಕೋಟ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಗೋವು ಸಂಪತ್ತು ವೃದ್ಧಿಗೆ ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಬಹುಮುಖ್ಯವಾಗಿ ಗೋ ಶಾಲೆ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದು ಸಮಾಜಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಕೋಟದ ಎಪಿಎಂಸಿ ಸಂಕೀರ್ಣದಲ್ಲಿ ಪಶುಪಾಲನಾ ಇಲಾಖೆ ಬ್ರಹ್ಮಾವರ ತಾಲೂಕು, ಕೋಟ ಗ್ರಾಮ ಪಂಚಾಯಿತಿ ಹಾಗೂ ಹಾಲು ಉತ್ಪಾದಕ ಸಹಕಾರಿ ಸಂಘ ಕೋಟ ಮತ್ತು ಮಣೂರು ಆಶ್ರಯದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಎನ್.ಎ.ಡಿ.ಸಿ.ಪಿ ಕಾರ್ಯಕ್ರಮದಡಿ 4ರಿಂದ 8ತಿಂಗಳ ಪ್ರಾಯದ ಹಸುಗಳಿಗೆ ಕಂದುರೋಗ ನಿವಾರಣಾ ಉಚಿತ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಜಾನುವಾರುಗಳಿಗೆ ಕಾಲ ಕಾಲಕ್ಕೆ ಲಸಿಕೆಗಳನ್ನು ಹಾಕಿಸುವ ಮೂಲಕ ರೋಗ ಮುಕ್ತಗೊಳಿಸಲು ಸಾಧ್ಯವಿದೆ. ಇದರಿಂದ ಹಸುಗಳಿಂದ ತಯಾರಾಗುವ ಉತ್ಪನ್ನಗಳಿಗೆ ವಿದೇಶದಲ್ಲಿ ಮನ್ನಣೆ ಸಿಗುತ್ತದೆ. ಪ್ರಧಾನಿ ಆಶಯದಂತೆ ದೇಶದಲ್ಲಿ ಜಾನುವಾರುಗಳನ್ನು ಸೋಂಕು ಮುಕ್ತಗೊಳಿಸಲು ಶ್ರಮಿಸಬೇಕಾಗಿದೆ ಎಂದರು.

    ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜಿತ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಜಯಂತಿ ಪೂಜಾರಿ, ಸದಸ್ಯರಾದ ವನಿತಾ ಶ್ರೀಧರ ಆಚಾರ್ಯ, ಚಂದ್ರಶೇಖರ್ ಆಚಾರ್ಯ, ಕೋಟ ಸಹಕಾರಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಮಣೂರು ಸಹಕಾರಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಕೋಟತಟ್ಟು ಪಡುಕರೆ ಸಹಕಾರಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಕೆ.ಶಿವಮೂರ್ತಿ ಉಪಾಧ್ಯ, ಪಶುಪಾಲನಾ ಇಲಾಖೆಯ ತಾಂತ್ರಿಕ ಸಂಯೋಜಕ ಡಾ.ಸಂದೀಪ್ ಕುಮಾರ್, ಡಾ.ಪ್ರದೀಪ್ ಕೊಂಡೋಜಿ ಸಾಯ್ಬರಕಟ್ಟೆ, ಕಳತ್ತೂರು ಸಂತೆಕಟ್ಟೆ ಡಾ.ಮಂಜುನಾಥ ಅಡಿಗ, ಸಾಸ್ತಾನದ ಡಾ.ವಿಜಯ ಕುಮಾರ್, ಕೋಟ ಸಹಕಾರಿ ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿ ರಾಜೇಶ್, ಉಪಾಧ್ಯಕ್ಷ ನರಸಿಂಹ ಪೂಜಾರಿ, ನಿರ್ದೇಶಕರಾದ ಪ್ರಕಾಶ್ ಶೆಟ್ಟಿ ದ್ಯಾವಸ, ಜಿ.ಕೃಷ್ಣ ದೇವಾಡಗ, ಶ್ರೀಕಾಂತ್ ಮಯ್ಯ, ಮಣೂರು ಸಂಘದ ಹರ್ಷ ಪೂಜಾರಿ ಉಪಸ್ಥಿತರಿದ್ದರು.
    ಬ್ರಹ್ಮಾವರದ ಮುಖ್ಯ ಪಶುಪಾಲನಾ ಇಲಾಖಾ ವೈದ್ಯಾಧಿಕಾರಿ ಡಾ. ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೋಟತಟ್ಟು ಗ್ರಾಪಂ ಸದಸ್ಯ ಸತೀಶ್ ಕುಂದರ್ ವಂದಿಸಿದರು.

    ಗೋಮಾಳಗಳ ಸಮೀಕ್ಷೆ
    ಪ್ರತಿ ಜಿಲ್ಲೆ, ಹಾಗೂ ತಾಲೂಕು ಕೇಂದ್ರಗಳಲ್ಲಿ ಗೋ ಶಾಲೆಗಳನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಸಂಕಲ್ಪಿಸಿದೆ. ರಾಜ್ಯದ ಗೋಮಾಳಗಳ ಸಮೀಕ್ಷೆ, ಸರ್ವೇ ಮಾಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಗೋಶಾಲೆ ನಿರ್ಮಾಣಕ್ಕೆ ಕಾರ್ಯಪ್ರವೃತ್ತರಾಗಿದ್ದೇವೆ. ಸ್ಥಳೀಯ ಪಶು ಆಸ್ಪತ್ರೆಗಳ, ಸಹಕಾರಿ ಸಂಘಗಳ ಮೂಲಕ ರಾಜ್ಯ ಸರ್ಕಾರ ರೋಗಮುಕ್ತ ಹೈನುಗಾರಿಕೆಗೆ ಸಂಕಲ್ಪಿಸಿದೆ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts