More

    ಕನಕದಾಸರೆಂದರೆ ಭಕ್ತಿಯ ಸಾಕ್ಷಿರೂಪ

    ಶಿಕಾರಿಪುರ: ವ್ಯಾಸಕೂಟದಲ್ಲಿರುವ ದಾಸಕೂಟದಲ್ಲಿ ಕನಕದಾಸರಿಗೆ ವಿಶೇಷ ಸ್ಥಾನವಿದೆ. ಕನಕರು ತಮ್ಮ ಪಾಂಡಿತ್ಯ, ನಡೆ-ನುಡಿ ಮತ್ತು ಸಾಮಾಜಿಕ ಕಳಕಳಿಯಿಂದ ಶ್ರೇಷ್ಠರಾಗಿದ್ದರು. ಸರ್ಕಾರಿ ಬಾಲಕಿಯರ ಸ್ವತಂತ್ರ‍್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಬಂಗಾರಪ್ಪ ಹೇಳಿದರು.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಮಂಗಳವಾರ ಕಾಲೇಜಿನಲ್ಲಿ ಆಯೋಜಿಸಿದ್ದ ತ್ಯಾಗರ್ತಿ ಗೌರಮ್ಮ ಸಿದ್ಧಪ್ಪ ದತ್ತಿ ಹಾಗೂ ಸಂಜೀವಮ್ಮ ನಾರಾಯಣಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಕನಕದಾಸರೆಂದರೆ ಭಕ್ತಿಯ ಸಾಕ್ಷಿರೂಪ. ಅವರ ದಾಸಪದದಲ್ಲಿ ಮಾನವೀಯ ಮೌಲ್ಯ, ಬದುಕಿನ ಶ್ರೇಷ್ಠತೆ, ಸಂಸ್ಕೃತಿ, ಪರಂಪರೆ, ಮೌಢ್ಯಗಳ ವಿರುದ್ಧ ದನಿ, ಸಾಮಾಜಿಕ ಚಿಂತನೆ, ಸದ್ವಿಚಾರ, ರಾಗದ್ವೇಷಗಳ ವಿರೋಧವಿದೆ. ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ ಕನಕದಾಸರು, ಬಸವಣ್ಣ ಅವರನ್ನು ಒಂದು ಜಾತಿಗೆ ಸೀತಿತಗೊಳಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ದಾರ್ಶನಿಕರು ಮಾನವೀಯ ಗುಣಗಳನ್ನು ನಾಡಿಗೆ ಸಾರಿದ್ದಾರೆ. ಇದನ್ನು ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ ಬೆಳೆಸಲು ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
    ಜೆಸಿಐ ಸಂಸ್ಥೆ ತರಬೇತುದಾರ ಜಿ.ಎಂ.ದಿನೇಶ್ ಆಚಾರ್ ಮಾತನಾಡಿ, ಶ್ರದ್ಧೆ, ಸತ್ಯ, ಪ್ರಾಮಾಣಿಕತೆ, ಅಹಿಂಸೆ ಸೇರಿ ಹಲವು ಮಾನವೀಯ ಮೌಲ್ಯಗಳು ಬದುಕಿನ ಆಧಾರ ಸ್ತಂಭಗಳಾಗಿವೆ. ಜೀವನದಲ್ಲಿ ಯಶಸ್ಸು ಸಾಽಸಲು ಮಾನವೀಯ ಮೌಲ್ಯಗಳು ಪ್ರಮುಖ ಪಾತ್ರ ವಹಿಸಲಿದೆ ಎಂದರು.
    ಕಸಾಪ ಅಧ್ಯಕ್ಷ ಎಚ್.ಎಸ್.ರಘು ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ. ಕನಕದಾಸರು ಮನುಷ್ಯ ಜಾತಿ ಮೀರಿ ಬದುಕುವುದನ್ನು ಕಲಿಸಿz್ದÁರೆ. ಆದ್ದರಿಂದ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಕನಕದಾಸರ ಕೀರ್ತನೆಗಳನ್ನು ವಿದ್ಯಾರ್ಥಿಗಳು ಓದಬೇಕು ಎಂದರು.
    ಪ್ರಾಚಾರ್ಯ ಕೆ.ಪಿ.ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಸ್.ಹುಚ್ರಾಯಪ್ಪ, ನಂದಾಪ್ರೇಮ್ ಕುಮಾರ್, ಕೆ.ಎಚ್.ಪುಟ್ಟಪ್ಪ, ಜೆಸಿಐ ಚಂದನ, ಶಿಕಾರಿಪುರ ಖಜಾಂಚಿ ಹದಡಿ ಪ್ರವೀಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts