More

  ಪ್ರತಿಯೊಬ್ಬರಿಗೂ ಸಲ್ಲುವ ಸಂವಿಧಾನ

  ತ್ಯಾಗರ್ತಿ: ಸಂವಿಧಾನ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಅದು ಎಲ್ಲರಿಗೂ ಸಲ್ಲುವಂಥದ್ದು. ಅದರಲ್ಲಿನ ಆಶಯ ಅರ್ಥಮಾಡಿಕೊಂಡು ನಡೆಯಬೇಕು ಎಂದು ಗ್ರಾಪಂ ಸದಸ್ಯ ಎಚ್.ಆರ್.ಪ್ರಶಾಂತ್ ಖಂಡೋಜಿ ಹೇಳಿದರು.
  ಹಿರೇಬಿಲಗುಂಜಿ ಗ್ರಾಪಂ ವ್ಯಾಪ್ತಿಯ ಹೊಸಂತೆಯಲ್ಲಿ ಭಾನುವಾರ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಇಂದು ಕೆಲವರು ರಾಜಕೀಯ ಕಾರಣಕ್ಕಾಗಿ ಸಂವಿಧಾನ ಹಾಗೂ ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುತ್ತಿದ್ದಾರೆ. ಸಂವಿಧಾನದ ಬಗ್ಗೆ ಅರಿತುಕೊಳ್ಳವ ಅವಶ್ಯಕತೆ ಯುವಜನಾಂಗಕ್ಕಿದೆ ಎಂದರು.
  ಸಂವಿಧಾನ ಜಾಗೃತಿ ಜಾಥಾವನ್ನು ಸಂಪಳ್ಳಿಯಲ್ಲಿ ಸ್ವಾಗತಿಸಲಾಯಿತು. ಬೈಕ್, ಟ್ರ‍್ಯಾಕ್ಟರ್ ಸೇರಿ ಮಹಿಳೆಯರು ಪೂರ್ಣಕುಂಭ ಸ್ವಾಗತ, ಮಕ್ಕಳ ವಾದ್ಯದೊಂದಿಗೆ ಮೆರವಣಿಗೆ ನಡೆಸಿದರು. ಗ್ರಾಪಂ ಅಧ್ಯಕ್ಷ ಬಿ.ನಾಗರಾಜ್, ಉಪಾಧ್ಯಕ್ಷೆ ಸುಜಾತಾ ಲೋಕೇಶ್, ಸದಸ್ಯರಾದ ಪಾರ್ವತಮ್ಮ, ವೀಣಾ ಜಗದೀಶ್, ಸೋಮಶೇಖರ್, ಸಮಾಜಕಲ್ಯಾಣ ಇಲಾಖೆ ಅಽಕಾರಿ ಸುರೇಶ ಸಹನೆ, ಪಿಡಿಒ ಜಿ.ಎಚ್.ಶೇಖರಪ್ಪ, ಗ್ರಾಮಸ್ಥರಾದ ಕೃಷ್ಣಮೂರ್ತಿ ಹೊಸಂತೆ, ಎಚ್.ಆರ್.ರಮೇಶ, ಸ್ವಾಮಿನಾಥ, ಸಿಆರ್‌ಪಿ ಪ್ರವೀಣ್, ಗ್ರಾಪಂ ಕಾರ್ಯದರ್ಶಿ ವಿಶಾಲಾಕ್ಷಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts