More

  ಕೆರೆಗಳು ಪ್ರವಾಸಿ ತಾಣವಾಗಬೇಕು

  ಕಾನಹೊಸಹಳ್ಳಿ: ಗಂಡಬೊಮ್ಮನಹಳ್ಳಿ ಕೆರೆಯು ಈ ಭಾಗದ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ಪ್ರವಾಸಿಗರನ್ನು ಗಮಸೆಳೆಯುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳಾಗಬೇಕಿದೆ, ಈಗಾಗಿ ಅಭಿವೃದ್ಧಿ ದೃಷ್ಟಿಯಿಂದ ಯೋಜನೆ ರೂಪಿಸುವಂತೆ ನೀರಾವರಿ ಅಧಿಕಾರಿಗಳಿಗೆ ಸೂಚಿಸಿದರು.

  ಗುಡೇಕೋಟೆ ಸಮೀಪದ ಗಂಡಬೊಮ್ಮನಹಳ್ಳಿ ಕೆರೆ ಕೋಡಿ ಹರಿದ ಹಿನ್ನೆಲೆಯಲ್ಲಿ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿದರು. ವಿಜಯನಗರ ಜಿಲ್ಲೆ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆ ಈ ಕೆರೆಗೆ ಹಿಂದೆ, ಕಳೆದ 14 ವರ್ಷಗಳ ಹಿಂದ ಈ ಕೆರೆ ಭರ್ತಿಯಾಗಿತ್ತೆಂದು ಸ್ಥಳೀಯರು ಹೇಳುತ್ತಾರೆ. ನಾನು ಶಾಸಕನಾದ ಮೇಲೆ ಮೊದಲ ಬಾರಿಗೆ ಕೆರೆ ಭರ್ತಿಯಾಗಿರುವುದಕ್ಕೆ ಸಂತಸವಾಗುತ್ತದೆ. ಕೆರೆ ಏರಿ ದುರಸ್ತಿ, ಸಾರ್ವಜನಿಕರು ಕುಳಿತು ವೀಕ್ಷಿಸಲು ಅಸನಗಳ ವ್ಯವಸ್ಥೆ ಮತ್ತು ಮೀನುಗಾರಿಕೆಗೆ ಅಗತ್ಯ ಕ್ರಮಕೈಗಳಬೇಕಿದೆ ಎಂದರು.

  ಪ್ರಮುಖರಾದ ಎಸ್.ಪಿ.ಪ್ರಕಾಶ, ಸೂರ್ಯಪಾಪಣ್ಣ, ಹುಡೇಂ ಪಾಪನಾಯಕ, ಗೋವಿಂದಪ್ಪ, ಜಿ.ಬಿ.ಪಾಪಣ್ಣ, ನಡವಲಹಳ್ಳಿ ಕುಮರಸ್ವಾಮಿ, ಗುಡೇಕೋಟೆ ಬಷೀರ್, ಎನ್.ಪಿ,ಮಂಜುನಾಥ, ಕೋದಂಡರಾಮು, ಮೀನುಗಾರರ ಸಂಘದ ಅಧ್ಯಕ್ಷ ಕಾಕಿಬಸಣ್ಣ, ಪಿ.ಮಲ್ಲಿಕಾರ್ಜುನ, ಡಿವೈಎಸ್ಪಿ ಹರೀಶರೆಡ್ಡಿ, ತಾಪಂ ಇಒ ರವಿಕುಮಾರ್, ಜಿಪಂ ಎಇಇ ಮಲ್ಲಿಕಾರ್ಜುನ, ಪಿಡಬ್ಲ್ಯುಡಿ ಎಇ ನಾಗನಗೌಡ ಇದ್ದರು.

  200 ಹೆಕ್ಟೇರ್ ಭತ್ತ ಬೆಳೆ ನೆಲಕ್ಕೆ
  ಕಂಪ್ಲಿ: ತಾಲೂಕಿನಲ್ಲಿ 3-4 ದಿನಗಳಿಂದ ನಿರಂತರ ಸುರಿದ ಮಳೆಗೆ 200 ಹೆಕ್ಟೇರ್ ಭತ್ತದ ಬೆಳೆ ನೆಲಕಚ್ಚಿದೆ. ಬೆಳಗೋಡ್‌ಹಾಳ್, ಇಟಗಿ, ಅರಳಿಹಳ್ಳಿ, ಸಣಾಪುರ, ಗೋನಾಳ್, ಎಮ್ಮಿಗನೂರು ಗ್ರಾಮಗಳ ರೈತರು ಬಿತ್ತಿದ್ದ ಭತ್ತ ನೆಲಕಚ್ಚಿದೆ. ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಳೆಗೀಡಾದ ಬೆಳೆ ವೀಕ್ಷಿಸಿ ಜಂಟಿ ಸಮೀಕ್ಷೆ ನಡೆಸಿದ್ದು, ಸರ್ವೇ ಪ್ರಗತಿಯಲ್ಲಿದೆ. ವರದಿ ಬಂದ ತಕ್ಷಣ ಮೇಲಧಿಕಾರಿಗಳಿಗೆ ತಲುಪಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಗೌಸಿಯಾಬೇಗಂ ತಿಳಿಸಿದ್ದಾರೆ. ಭಾನುವಾರದ ಮಳೆಗೆ 5 ಕಚ್ಚಾ ಮನೆಗಳು ಭಾಗಶಃ ಕುಸಿದಿವೆ. ಮಾವಿನಹಳ್ಳಿ, ನೆಲ್ಲೂಡಿ, ದೇವಸಮುದ್ರ ಗ್ರಾಮಗಳಲ್ಲಿ ತಲಾ ಒಂದು, ಜವುಕು ಗ್ರಾಮದಲ್ಲಿ ಎರಡು ಹಾನಿಗೀಡಾದ ಮನೆಗಳು.

  ದೊರೆತ ಪರಿಹಾರ: ಇಟಗಿ ಗ್ರಾಮ ಹೊರವಲಯದ ಸೇತುವೆ ಬಳಿಯ ನಾರಿಹಳ್ಳ ತೀರದ ಭತ್ತದ ಗದ್ದೆ ಪ್ರವಾಹಕ್ಕೀಡಾಗಿತ್ತು. ತಾಲೂಕು ಆಡಳಿತ ಇದಕ್ಕೆ ಪರಿಹಾರ ನೀಡಿದೆ ಎಂದು ಸಂತ್ರಸ್ತ ರೈತ ಹೂವಾಡಿ ವೆಂಕಟೇಶ್ವರಲು ತಿಳಿಸಿದ್ದಾರೆ. ಸೆ.16ರಂದು ಗದ್ದೆಗೆ ನುಗ್ಗಿದ ನಾರಿಹಳ್ಳದ ನೀರು, ಜಮೀನಿನಲ್ಲಿ ನಿಂತ ಮರಳು, ಸಂಪೂರ್ಣ ಕೊಳೆತ ಭತ್ತ ಸುದ್ದಿಯನ್ನು ವಿಜಯವಾಣಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

  ಹೊಲ-ಗದ್ದೆಗಳಿಗೆ ನುಗ್ಗಿದ ಮಳೆ ನೀರು
  ಕುರುಗೋಡು: ಎರಡು ದಿನಗಳಿಂದ ಸುರಿಯುತ್ತಿರುವ ಮಳೆ, ಹಾನಿ ಉಂಟು ಮಾಡಿದೆ. ಹೊಲ-ಗದ್ದೆಗಳಲ್ಲಿ ಮಳೆ ನೀರು ನಿಂತು ಬೆಳೆಗಳಿಗೆ ಹಾನಿಯಾಗಿದೆ. ಕಾಲುವೆ ಹಾಗೂ ಹಳ್ಳಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣ ಹಳ್ಳದ ದಂಡೆ ಮೇಲಿರುವ ಹೊಲ-ಗದ್ದೆಗಳಲ್ಲಿ ಅಪಾರ ಪ್ರಮಾಣದ ನೀರು ಹರಿದು, ನಷ್ಟ ಸಂಭವಿಸಿದೆ. ಗೆಣಿಕೆಹಾಳು-ಕ್ಯಾದಿಗೆಹಾಳು ರಸ್ತೆ ಸೇತುವೆ, ಬಾದನಹಟ್ಟಿ-ಸಿದ್ದಮ್ಮನಹಳ್ಳಿ ರಸ್ತೆ ಸೇತುವೆ, ಗುತ್ತಿಗೆನೂರು ಹಳ್ಳಗಳ ಸೇತುವೆಗಳ ಮೇಲೆ ನೀರು ಹರಿದಿದೆ. ಸಿಂಧಿಗೇರಿ 1, ಬಾದನಹಟ್ಟಿ 1, ಕಲ್ಲುಕಂಬ 1, ಕುರುಗೋಡಿನಲ್ಲಿ 3 ಮನೆಗಳ ಗೋಡೆ ಹಾಗೂ ಛಾವಣಿ ಕುಸಿದಿವೆ ಎಂದು ತಹಸೀಲ್ದಾರ್ ಕೆ.ರಾಘವೇಂದ್ರ ರಾವ್ ತಿಳಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts