More

    ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ದಿಶಾ

    ಇಂಡಿಯಾ ಬುಕ್ ಆಫ್‌ರೆಕಾರ್ಡ್ಸ್ ಪ್ರಮಾಣಪತ್ರ ಹಿಡಿದ ದಿಶಾ ಮೋಹನ್.

    ಕಂಪ್ಲಿ: ಸ್ಥಳೀಯ ನಿವಾಸಿಗಳಾದ ರಾಜ್ಯ ಹೈಕೋರ್ಟ್ ಸರ್ಕಾರಿ ವಕೀಲ ಮೋಹನ್‌ಕುಮಾರ್ ದಾನಪ್ಪ ಹಾಗೂ ಸೌಮ್ಯಶ್ರೀ ಮೋಹನ್‌ಕುಮಾರ್ ಇವರ ಪುತ್ರಿ ದಿಶಾ ಮೋಹನ್(5)ಭಾರತೀಯ ಸಾಂಪ್ರದಾಯಿಕ ಅಲಂಕಾರಿಕ ಉಡುಗೆ ಡ್ರೈವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ (ಇಂಡಿಯಾ ವರ್ಲ್ಡ್ ರೆಕಾರ್ಡ್)ಗೆದಾಖಲಾಗಿದ್ದಾರೆ.

    ಇದನ್ನೂ ಓದಿರಿ:

    ಜು.11ರಂದು ಜರುಗಿದ ಡ್ರೈವ್ ಕಾರ್ಯಕ್ರಮದಲ್ಲಿ ದೇಶದ ನಾನಾ ಕಡೆಗಳಿಂದ ಹತ್ತು ವರ್ಷದೊಳಗಿನ 12,006 ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು. ಇವರಲ್ಲಿ ದಿಶಾ ಮೋಹನ್ ಒಬ್ಬರಾಗಿದ್ದರು. ದಿಶಾ ಮೋಹನ್ ಬೆಂಗಳೂರಿನ ಜೆ.ಡಿ.ಬಿ. ಶಾಲೆಯಲ್ಲಿ ಎಲ್‌ಕೆಜಿ ಅಭ್ಯಾಸಿಸುತ್ತಿದ್ದಾರೆ.

    ವಿಶ್ವದ ಅತಿದೊಡ್ಡ ಫ್ಯಾನ್ಸಿ ಡ್ರೆಸ್ ಡ್ರೈವ್‌ನಲ್ಲಿ ದೀಶಾ ತೊಟ್ಟ ಉಡುಗೆ, ಮುಖದಲ್ಲಿನ ಅಚಲ ಬದ್ಧತೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸ್ಫೂರ್ತಿ ಮತ್ತು ಪ್ರೇರಣೆಗಳನ್ನು ಗಮನಿಸಿ, ತೀರ್ಪುಗಾರ ಸರ್ವೋಚ್ಛ ನ್ಯಾಯಾಲಯದ ವಕೀಲ ಡಾ.ಜಿ.ವಿ.ಎನ್.ಆರ್.ಎಸ್.ಎಸ್.ಎಸ್.ವರಪ್ರಸಾದ್ ಆಯ್ಕೆಗೊಳಿಸಿದರೆ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥಾಪಕ ಸಂಪಾದಕ ಡಾ.ಕೆ.ವಿವೇಕಾನಂದಬಾಬು ಪ್ರಮಾಣಪತ್ರ ನೀಡಿದ್ದಾರೆ.

    ದಿಶಾಳ ಸಾಧನೆ ಹೆಮ್ಮೆ ತಂದಿದೆ ಎಂದು ತಂದೆ ಮೋಹನ್‌ಕುಮಾರ್ ದಾನಪ್ಪ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts