More

    ದುರಸ್ತಿ ಮಾಡದಂತೆ ಸಾಮೂಹಿಕ ಶೌಚಗೃಹಕ್ಕೆ ಬೀಗ ಹಾಕಿದ: ಬುಕ್ಕಸಾಗರದ ಮಹಿಳೆಯರಿಗೆ ಬಯಲೇ ಗತಿ

    ಕಂಪ್ಲಿ: ತಾಲೂಕಿನ ಬುಕ್ಕಸಾಗರದಲ್ಲಿ ಸಾಮೂಹಿಕ ಶೌಚಗೃಹ ಸ್ವಂತ ಜಾಗದಲ್ಲಿದೆ ಎಂದು ವ್ಯಕ್ತಿಯೊಬ್ಬ ದುರಸ್ತಿಗೆ ಅವಕಾಶ ನೀಡದೆ ಗೇಟ್‌ಗೆ ಬೀಗ ಹಾಕಿದ್ದು, ಮಹಿಳೆಯರು ಬಯಲು ಬಹಿರ್ದೆಸೆಗೆ ಹೋಗುವಂತಾಗಿದೆ

    ಗ್ರಾಮದ ನಾಲ್ಕನೇ ವಾರ್ಡ್‌ನ ಹರಿಜನ ಕೇರಿಯಲ್ಲಿ ಹಳೆಯ ಶೌಚಗೃಹವಿದ್ದು, ದುರಸ್ತಿಗೊಳಿಸಿ ನೀರಿನ ಸಂಪರ್ಕ ಕಲ್ಪಿಸಲು ಗ್ರಾಮಾಡಳಿತ ಮುಂದಾಗಿದೆ. ಆದರೆ, ಗ್ರಾಮಸ್ಥರೊಬ್ಬರು ಆ ಜಾಗ ನಮಗೆ ಸಂಬಂಧಿಸಿದ್ದು ದುರಸ್ತಿಗೊಳಿಸಬಾರದು ಎಂದು ಶೌಚಗೃಹಕ್ಕೆ ಬೀಗ ಹಾಕಿದ್ದಾರೆ. ಇದರಿಂದ ಸ್ಥಳೀಯ ಮಹಿಳೆಯರು ಶೌಚಕ್ಕೆ ಬಯಲಿಗೆ ಹೋಗಬೇಕಾಗಿದೆ. ಸಾಮೂಹಿಕ ಶೌಚಗೃಹದಲ್ಲಿ ಸ್ವಚ್ಛತೆಯಿಲ್ಲ, ನೀರಿನ ಸೌಲಭ್ಯವಿಲ್ಲ. ದುರಸ್ತಿಗೊಳಿಸಿ ಬಳಕೆಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರಾದ ಸಂಜೀವಮ್ಮ, ಈಶ್ವರಮ್ಮ, ಲಕ್ಷ್ಮೀ, ಶಾಂತಮ್ಮ, ಹನುಮಕ್ಕ, ದೇವಕ್ಕ, ಲಲಿತಮ್ಮ, ಜ್ಯೋತಿ, ವಾಣಿ ಇತರರು ಒತ್ತಾಯಿಸಿದ್ದಾರೆ.

    12 ವರ್ಷಗಳ ಹಿಂದೆ ನಿರ್ಮಿಸಿರುವ ಶೌಚಗೃಹ ದುರಸ್ತಿಗೆ 15ನೇ ಹಣಕಾಸು ಯೋಜನೆಯಡಿ 95 ಸಾವಿರ ರೂ. ಮೀಸಲಿಡಲಾಗಿದೆ. ಈ ಹಣದಲ್ಲಿ ನೀರು, ಬೆಳಕು ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಶೌಚಗೃಹ ಜಾಗ ನಮ್ಮದೆಂದು ತಕರಾರು ಮಾಡಿದವರಿಗೆ ದಾಖಲೆ ನೀಡಲು ಸೂಚಿಸಲಾಗಿದೆ. ಶೀಘ್ರವೇ ದುರಸ್ತಿ ಕಾಮಗಾರಿ ಮುಗಿಸಿ ಬಳಕೆ ನೀಡಲಾಗುವುದು.
    | ಶ್ರೀಶೈಲಗೌಡ ಬುಕ್ಕಸಾಗರ ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts