More

    ಅಕ್ಕಮಹಾದೇವಿ ತತ್ವಾದರ್ಶಗಳ ಅಳವಡಿಸಿಕೊಳ್ಳಿ

    ಕಂಪ್ಲಿ: ಅಕ್ಕಮಹಾದೇವಿ ಅವರ ಸ್ಥಿತಪ್ರಜ್ಞೆ ಗುಣವನ್ನು ಮಹಿಳೆಯರು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ತಹಸೀಲ್ದಾರ್ ಶಿವರಾಜ ಹೇಳಿದರು.

    ಇಲ್ಲಿನ ತಹಸಿಲ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಚನಗಾರ್ತಿ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿನ ಏರುಪೇರು, ನೋವು ನಲಿವು, ಅಶಾಂತಿ, ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಲು ಅಕ್ಕಮಹಾದೇವಿ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.

    ಇದನ್ನೂ ಓದಿ: ವಚನ ಸಾಹಿತ್ಯದ ಕಣಜ ಅಕ್ಕಮಹಾದೇವಿ

    ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ, ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಲಕ್ಷ್ಮಣ್, ಡಿಟಿ ಬಿ.ರವೀಂದ್ರಕುಮಾರ್, ಆರ್‌ಐ ಜಗದೀಶ್, ಶಿರಸ್ತೇದಾರ್ ಎಸ್.ಡಿ.ರಮೇಶ, ಸಿಬ್ಬಂದಿ ಮಾಲತೇಶ ದೇಶಪಾಂಡೆ, ವನಿತಾಕುಮಾರಿ, ಮೂಗಮ್ಮ, ವಿಜಯಲಕ್ಷ್ಮೀ, ಕುಸುಮಾ, ಶಿಲ್ಪಾ, ಆಶಾ ಇತರರಿದ್ದರು.

    ಅಕ್ಕಶ್ರೀ ಪ್ರಶಸ್ತಿ ಪ್ರದಾನ: ಇಲ್ಲಿನ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಅಕ್ಕಮಹಾದೇವಿ ಜಯಂತ್ಯುತ್ಸವ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಕ್ಕನ ಬಳಗದ ಅಭಿವೃದ್ಧಿಗೆ ಶ್ರಮಿಸಿದ ವಸ್ತ್ರದ ಶಾಂತಾ, ಎ.ಟಿ.ಉಮಾದೇವಿ, ಎಚ್.ಸೂಗಮ್ಮ, ಜೆ.ಎಂ.ಗಂಗಮ್ಮ, ಐಹೊಳ್ಳಿ ಬಸಂತೆಮ್ಮ, ನಂದಿವಾಲ ವಿಶಾಲಾಕ್ಷಿ ಅವರಿಗೆ ಅಕ್ಕಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

    ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ, ಪದಾಧಿಕಾರಿಗಳಾದ ಭತ್ತದ ಸಂಧ್ಯಾ, ಬಿ.ಎಂ.ಪುಷ್ಪಾ, ಕೆ.ಎಂ.ಸೌಮ್ಯಾ, ತಾಂಡೂರು ಸುಜಾತಾ, ವಾಲಿ ಶಕುಂತಲಾ, ಕಲ್ಗುಡಿ ರಾಜೇಶ್ವರಿ, ಕಲ್ಗುಡಿ ಚನ್ನಮ್ಮ, ಕಲ್ಗುಡಿ ನಾಗರತ್ನಾ, ಡಾ.ಶಾರದಾ ಜ.ಹಿರೇಮಠ, ಉಗಾದಿ ವಿನುತಾ, ಮುಕ್ಕುಂದಿ ಮಮತಾ, ಕಲ್ಗುಡಿ ರತ್ನಾ, ಎಸ್.ಎಸ್.ಎಂ.ಸುಭದ್ರಾದೇವಿ, ವಿಜಯಲಕ್ಷ್ಮೀ ಅರಳಲೆಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts