More

    ಕರೊನಾ ಪಂಥಾಹ್ವಾನ ಎದುರಿಸಲು ಕಮಲ್‌ ಪಂತ್:‌ ಡಿಜಿಪಿ ಆಗಿ ಬಡ್ತಿ ಸಿಕ್ಕರೂ ಕಮಿಷನರ್‌ ಆಗಿಯೇ ಮುಂದುವರಿಕೆ…

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನೇದಿನೆ ತೀವ್ರಗತಿಯಲ್ಲಿ ವ್ಯಾಪಿಸುವ ಮೂಲಕ ಹೊಸಹೊಸ ಪಂಥಾಹ್ವಾನ ನೀಡುತ್ತಿರುವ ಕೋವಿಡ್-‌19 ವೈರಸ್‌ನ ಸವಾಲನ್ನು ಎದುರಿಸಲು ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರೇ ಸರಿ ಎಂದು ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ತಳೆದಿದೆ. ಅರ್ಥಾತ್‌, ಕಮಲ್‌ ಪಂತ್‌ ಅವರಿಗೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ(ಡಿಜಿಪಿ) ಆಗಿ ಬಡ್ತಿ ನೀಡಿದ್ದರೂ ಅವರನ್ನು ನಗರ ಪೊಲೀಸ್‌ ಕಮಿಷನರ್‌ ಹುದ್ದೆಯಲ್ಲಿಯೇ ಮುಂದುವರಿಸಿದೆ. ಎಡಿಜಿಪಿ ದರ್ಜೆಯ ಕಮಿಷನರ್​ ಹುದ್ದೆಯನ್ನು ಡಿಜಿಪಿ ದರ್ಜೆಗೆ ಏರಿಸಿ ಕಮಲ್​ ಪಂತ್ ಅವ​ರನ್ನು ಆಯುಕ್ತರಾಗಿಯೇ ಮುಂದುವರಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಏಪ್ರಿಲ್​ 30ಕ್ಕೆ ಡಿಜಿಪಿ ಪದಮ್​ ಕುಮಾರ್​ ಗರ್ಗ್​ ನಿವೃತ್ತಿ ಆಗಲಿದ್ದಾರೆ. ಇವರಿಂದ ತೆರವಾದ ಡಿಜಿಪಿ ಹುದ್ದೆಗೆ ಎಡಿಜಿಪಿ ಕಮಲ್​ ಪಂತ್‌ಗೆ ಬಡ್ತಿ ನೀಡಲಾಗಿದೆ.

    ಕರೊನಾ ಸೋಂಕು ತಡೆಗಟ್ಟುವಲ್ಲಿ ಸರ್ಕಾರ ಕರ್ಫ್ಯೂ ಆದೇಶ ಜಾರಿ ಮಾಡಿದೆ. ದೇಶದಲ್ಲಿಯೇ ಅತಿ ಹೆಚ್ಚು ಕರೊನಾ ಸೋಂಕು ವೇಗವಾಗಿ ಹರಡುತ್ತಿರುವ ಕುಖ್ಯಾತಿಗೆ ಬೆಂಗಳೂರು ನಗರ ಒಳಗಾಗಿದೆ. ಇದರಿಂದ ಹೊರಬರಲು ಸರ್ಕಾರ ಹರಸಾಹಸ ಪಡುತ್ತಿದೆ. ಕರ್ಫ್ಯೂ, ಸೆಕ್ಷನ್​ 144 ನಿಷೇಧಾಜ್ಞೆ ಹೊರಡಿಸಿದೆ. ಕಟ್ಟುನಿಟ್ಟಾಗಿ ಜಾರಿಗೆ ತರುವುದು ಮತ್ತು ಜನರಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಹಾಗೂ ಪೊಲೀಸರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ. ಆದರಿಂದ ಪೊಲೀಸ್​ ಆಯುಕ್ತರ ಹುದ್ದೆಯಲ್ಲಿ ಕಮಲ್​ ಪಂತ್​ ಅವರನ್ನು ಮುಂದುವರಿಸಲಾಗಿದೆ.

    ಇದನ್ನೂ ಓದಿ: ಜಗತ್ತಿನಲ್ಲಿನ ಕೋವಿಡ್‌ ಸಾವುಗಳ ಪೈಕಿ ಕಾಲುಭಾಗದಷ್ಟು ಇಲ್ಲೇ ಆಗಿವೆ!: ಸಮೀಕ್ಷೆಯೊಂದರಿಂದ ಬಹಿರಂಗ

    ಪಂತ್‌ ಡಿಜೆ-ಕೆಜಿ ಹಳ್ಳಿ ಗಲಭೆ ಪ್ರಕರಣ, ಮಾದಕ ದ್ರವ್ಯ ದಂಧೆ, ಮಾಜಿ ಸಚಿವರ ಸೆಕ್ಸ್​ ಸಿಡಿ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಯಾವುದೇ ಗೊಂದಲ, ವಿವಾದ ಎಬ್ಬಿಸದೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಹಿಂದೆಯೂ 2005 ಜೂನ್​ 8 ರಿಂದ 2006ರ ಜೂನ್​ 21ರ ವರೆಗೆ ನಿವೃತ್ತ ಡಿಜಿಪಿ ಅಜಯ್​ ಕುಮಾರ್​ ಸಿಂಗ್​ ಬೆಂಗಳೂರು ನಗರ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಎರಡೂವರೆ ತಿಂಗಳು ಕಾಲ ಪೊಲೀಸ್​ ಆಯುಕ್ತರ ಹುದ್ದೆಯನ್ನು ಡಿಜಿಪಿ ಮೇಲ್ದರ್ಜೆಗೆ ಉನ್ನತೀಕರಿಸಿ ಅಜಯ್​ ಕುಮಾರ್​ ಅವರನ್ನು ಮುಂದುವರಿಸಿದ್ದರು. ಇದೀಗ 15 ವರ್ಷಗಳ ಬಳಿಕ ಕಮಲ್​ ಪಂತ್​ ಅವರಿಗೂ ಅವಕಾಶ ಕಲ್ಪಿಸಿದೆ. ಮುಂದಿನ ಆದೇಶದವರೆಗೂ ಇವರೇ ಮುಂದುವರಿಯಲಿದ್ದಾರೆ.

    ಎಡಿಜಿಪಿ ಹುದ್ದೆಗೆ ಹಿತೇಂದ್ರಗೆ ಬಡ್ತಿ: ಐಜಿಪಿ ಆರ್​. ಹಿತೇಂದ್ರ ಅವರಿಗೆ ಎಡಿಜಿಪಿ ಹುದ್ದೆಗೆ ಬಡ್ತಿ ನೀಡಿ ಅಪರಾಧ ಮತ್ತು ತಾಂತ್ರಿಕ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

    ಈಕೆಯ ಪ್ರಪ್ರಥಮ ರಕ್ತದಾನವೇ ಅವಿಸ್ಮರಣೀಯ; ಕರೊನಾ ಆತಂಕದಲ್ಲೂ ಇವಳಿಂದ ಉಳಿಯಿತು ಒಂದಲ್ಲ ಎರಡು ಜೀವ!

    ಕೋವಿಡ್‌ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಕ್ರಿಕೆಟ್‌ ದೇವರು; ಆಮ್ಲಜನಕ ಪೂರೈಕೆ ಸಲುವಾಗಿ 1 ಕೋಟಿ ರೂ. ದೇಣಿಗೆ ಕೊಟ್ಟ ತೆಂಡುಲ್ಕರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts