More

    ಕಳಸಾಪೂರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

    ವಿಜಯವಾಣಿ ಸುದ್ದಿಜಾಲ ಗದಗ
    ಆರ್​ಡಿಪಿಆರ್​ ವಿವಿ ಮತ್ತು ಆರೋಗ್ಯ ಮತ್ತು ೇಮ ಕೇಂದ್ರ ಸಂಯೋಗದಲ್ಲಿ ಕಳಸಾಪುರ ಗ್ರಾಮದ ನರೇಗಾ ಕೂಲಿಕಾಮಿರ್ಕರಿಗೆ ಗುರುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.
    ಸಮುದಾಯ ಆರೋಗ್ಯ ಅಧಿಕಾರಿಗಳು ಆರೋಗ್ಯ ಸಲಹೆ ಮತ್ತು ಆರೋಗ್ಯದ ಬಗೆಗಿನ ವಿಷಯಗಳನ್ನು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಉಪಯುಕ್ತ ಸಲಹೆಗಳನ್ನು ನೀಡಿದರು.
    ಗ್ರಾಮದ ಬಸವಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ ಖಂಡಮ್ಮನವರ ಮಾತನಾಡಿ, ಇಂದಿನ ಯುವಕರು ದುಶ್ಚಟದಿಂದ ದೂರವಾಗಬೇಕು. ಆಹಾರದಲ್ಲೇ ರೋಗ ನಿರೋಧಕ ಶಕ್ತಿ ಇದೆ, ನಮ್ಮ ಗ್ರಾಮ ಹಳ್ಳಿಗಳು ದೇಶದ ಜೀವನಾಡಿಗಳು. ಅವು ಸಮೃದ್ಧಿಯಾಗಲು ಇಂದಿನ ಯುವಕರು ವ್ಯಸನಮುಕ್ತರಾಗಬೇಕು. ಆಗ ಮಾತ್ರ ಆರೋಗ್ಯ ಪೂರ್ಣ ಜೀವನ ಸಾಗಿಸಲು ಸಾಧ್ಯ ಎಂದರಿ. ಸಂಪನ್ಮೂಲ ವ್ಯಕ್ತಿ ಸಿ. ಬಿ. ಪಲ್ಲೇದ, ಸುರೇಶ ಲಮಾಣಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts