More

    ಅನುಚಿತವಾಗಿ ವರ್ತಿಸಿದ ನೌಕರನ ವಿರುದ್ಧ ಕ್ರಮಕ್ಕೆ ಒತ್ತಾಯ

    ಕಲಘಟಗಿ: ಸಂಚಾರಿ ಕುರಿಗಾಹಿಯೊಂದಿಗೆ ಅರಣ್ಯ ಇಲಾಖೆ ನೌಕರರೊಬ್ಬರು ಅನುಚಿತ ವರ್ತನೆ ತೋರಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸಂಚಾರಿ ಕುರಿಗಾಹಿಗಳು ಉಪ ವಲಯ ಅರಣ್ಯ ಅಧಿಕಾರಿ ರಾಮನಗೌಡ ಗಂಜ್ಯಾಳ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
    ನೊಂದ ಕುರಿಗಾಹಿ ಬೀರಪ್ಪ ಜಡಗಪ್ಪಗೊಳ್ ಮಾತನಾಡಿ, ತಾಲೂಕಿನ ಸೂಳಿಕಟ್ಟಿ ಗ್ರಾಮದ ಅರಣ್ಯ ಅಂಚಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರೊಬ್ಬರು ಮಂಗಳವಾರ ರಾತ್ರಿ ಕುರಿಕಾಯುತ್ತಿದ್ದ ನನ್ನ ಬಳಿ ಬಂದು ಬಂದು ಕಡಿಮೆ ಮೊತ್ತಕ್ಕೆ ಕುರಿ ನೀಡುವಂತೆ ಕೇಳಿದರು. ಕಡಿಮೆ ಹಣಕ್ಕೆ ಕೊಡಲು ಆಗುವುದಿಲ್ಲ ಎಂದು ಹೇಳಿದೆ. ಆಗ ಅ ನೌಕರ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಇನ್ನು ಮುಂದೆ ಅರಣ್ಯದಲ್ಲಿ ನಿಮ್ಮ ಕುರಿಗಳು ಕಂಡುಬಂದರೆ ಅವುಗಳನ್ನ ಹಿಡಿದು ಕೂಡಿ ಹಾಕುತ್ತೇವೆ ಎಂದು ಬೆದರಿಕೆ ಹಾಕಿದರು ಎಂದು ಹೇಳಿದರು.
    ಕುರಿಗಾಹಿಗಳ ಮೇಲೆ ಶೋಷಣೆ ಮಾಡುತ್ತಿರುವ ಅರಣ್ಯ ಇಲಾಖೆ ನೌಕರರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಕುರಿಗಾಹಿಗಳಿಗೆ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
    ಭೀಮಪ್ಪ ತುಳಜಾನವರ, ಈರಪ್ಪ ಗೊಡಚಿ, ಶಂಕರ ಬಾನಸೇ, ಮಹಾಂತೇಶ ಶಿವಣ್ಣವರ, ಸಿದ್ದಪ್ಪ ಚಂದರಗಿ, ತಮ್ಮಣ್ಣ ಸುಣದೊಳಿ, ಯಲ್ಲಪ್ಪ ಸಂಗೊಳ್ಳಿ, ಸಿದ್ದಪ್ಪ ಬಾನಸೇ, ವಿಠ್ಠಲ ಕಣಗಾಂವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts