More

    ‘ರಸ್ತೆಗಿಳೀತೀರಾ? ನಿಮ್ಮ ಕೆನ್ನೆಗೆ ನೀವೇ ಹೊಡೆದುಕೊಳ್ಳಿ’ ಕಲಬುರಗಿಯಲ್ಲಿ ಡಿಫರೆಂಟ್​ ಶಿಕ್ಷೆ

    ಕಲಬುರಗಿ: ಕರ್ನಾಟಕದಲ್ಲಿ ಲಾಕ್​ಡೌನ್​ ಜಾರಿಯಲ್ಲಿದೆ. ಅನಗತ್ಯವಾಗಿ ಯಾರೂ ರಸ್ತೆಗಿಳಿಯುವಂತಿಲ್ಲ ಎನ್ನುವಂತ ಕಠಿಣ ನಿಯಮ ಪಾಲನೆಯಾಗುತ್ತಿದೆ. ಆದರೂ ಅಲ್ಲಲ್ಲಿ ಕೆಲವರು ಅನಗತ್ಯವಾಗಿ ರಸ್ತೆಗಿಳಿಯುತ್ತಿದ್ದು, ಅವರಿಗೆ ಪೊಲೀಸರು ತಕ್ಕ ಶಿಕ್ಷೆ ನೀಡುತ್ತಿದ್ದಾರೆ. ಕಲಬುರಗಿಯಲ್ಲೂ ರಸ್ತೆಗಿಳಿಯುವವರಿಗೆ ಬುದ್ಧಿ ಕಲಿಸಲು ಪೊಲೀಸರು ರಸ್ತೆಗಿಳಿದಿದ್ದು, ತಮ್ಮ ಕೆನ್ನೆಗೆ ತಾವೇ ಹೊಡೆದುಕೊಳ್ಳುವ ಡಿಫರೆಂಟ್​ ಶಿಕ್ಷೆ ಕೊಡಲಾಗುತ್ತಿದೆ.

    ಕಲಬುರಗಿ ರೌಡಿ ನಿಗ್ರಹ ದಳದ ಪಿಎಸ್​ಐ ವಾಹೀದ್​ ಕೋತ್ವಾಲ್ ಈ ರೀತಿ ಡಿಫೆರೆಂಟ್​ ಶಿಕ್ಷೆ ನೀಡುತ್ತಿದ್ದಾರೆ. ನಗರದ ಜಗತ್ ವೃತ್ತದಲ್ಲಿ ಅನಗತ್ಯವಾಗಿ ರಸ್ತೆಗಿಳಿದ ಯುವಕರಿಗೆ ಅವರ ಕೆನ್ನೆಗೆ ಅವರೇ ಹೊಡೆದುಕೊಳ್ಳುವ ಶಿಕ್ಷೆ ನೀಡಲಾಗಿದೆ. ಲಾಕ್ ಡೌನ್ ಮುಗಿಯುವವರೆಗೂ ನಾವು ಸುಮ್ಮನೆ ಹೊರಬರಲ್ಲ ಅಂತ ಹೇಳುತ್ತಾ ಕಪಾಳಕ್ಕೆ ಹೊಡೆದುಕೊಳ್ಳಬೇಕು. ಸುಮಾರು ಐದು ನಿಮಿಷಗಳ ಕಾಲ ಅವರಿಗೆ ಅವರೇ ಹೊಡೆದುಕೊಳ್ಳಬೇಕು.

    ಈ ರೀತಿ ಶಿಕ್ಷೆ ಅನುಭವಿಸಿದ ಯುವಕರು, ಸಾಕಪ್ಪಾ ಈ ಪೊಲೀಸರ ಸಹವಾಸ ಎಂದುಕೊಂಡು ಮನೆಗೆ ತೆರಳಿದ್ದಾರೆ. ಇನ್ನು ಮುಂದೆ ರಸ್ತೆಗಿಳಿಯುವ ಮುನ್ನ ಸಾವಿರ ಬಾರಿ ಯೋಚಿಸಬೇಕು ಎನ್ನುವಂತೆ ಬುದ್ಧಿ ಕಲಿಸಿ ಕಳಿಸಿದ್ದಾರೆ ಪೊಲೀಸರು.

    ಆಂಬುಲೆನ್ಸ್​ ಸಿಕ್ತಲ್ವಾ? ಡೋಂಟ್​ ವರಿ, ಇಲ್ಲಿದೆ ಆಟೋ ಆಂಬುಲೆನ್ಸ್​! ಹಣ ಪಡೆಯದೆ ಆಸ್ಪತ್ರೆಗೆ ಕರೆದೊಯ್ಯುತ್ತಾನೆ…

    ಗಂಡ ಸೆಕ್ಸ್​ ಮಾಡಲ್ಲ ಎಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಹೆಂಡತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts