More

    ಹಿಂದುಳಿದ ವರ್ಗದವರಿಗೆ ದ್ರೋಹ ಮಾಡಿರುವುದರಲ್ಲಿ ಸಿದ್ದರಾಮಯ್ಯ ಮೊದಲ ಸ್ಥಾನದಲ್ಲಿದ್ದಾರೆ: ಈಶ್ವರಪ್ಪ ವಾಗ್ದಾಳಿ

    ಕಲಬುರಗಿ: ಹಿಂದುಳಿದ ವರ್ಗದವರ ಹೆಸರಲ್ಲಿ ಮತ ಪಡೆದ ಈ ಹಿಂದೆ ಸಿಎಂ ಆಗಿದ್ದಿರಿ. ಆದರೆ, ಹಿಂದುಳಿದ ವರ್ಗದವರಿಗೆ ದ್ರೋಹ ಮಾಡಿರುವುದರಲ್ಲಿ ನೀವು ಮೊದಲ ಸ್ಥಾನದಲ್ಲಿದ್ದೀರಿ ಎನ್ನುವ ಮೂಲಕ ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

    ಕಲಬುರಗಿಯಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಹಿಂದುಳಿದ ವರ್ಗದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿದರು.

    ದೇಶದಲ್ಲಿ ಶೇ. 62 ರಷ್ಟು ಹಿಂದುಳಿದ ವರ್ಗಗಳ ಜನ ಇದ್ದೇವೆ. ಹಿಂದುಳಿದ ವರ್ಗದವರಿಗೆ ವಿಧಾನಸಭಾ ಚುನಾವಣೆಯಲ್ಲಿ ಎಷ್ಟು ಸೀಟ್ ಕೊಡ್ತಿರಾ ಅಂತಾ ಕೇಳ್ತಿದ್ದಾರೆ. ಪ್ರತಿಯೊಂದು ಜಿಲ್ಲೆಯಿಂದ ಹಿಂದುಳಿದ ವರ್ಗದವರಿಗೆ ಒಂದೊಂದು ಟಿಕೆಟ್ ಕೊಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

    ವಾಲ್ಮಿಕಿ ಹಾಗೂ ದಲಿತ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. 70 ವರ್ಷ ಆಡಳಿತ ಮಾಡಿರುವ ಕಾಂಗ್ರೆಸ್ ಈವರೆಗೂ ಹೆಚ್ಚಳ ಮಾಡಿಲ್ಲ. ಇದೀಗ ಸತ್ತು ಹೋದ ಕಾಂಗ್ರೆಸ್ ಪಕ್ಷಕ್ಕೆ ಖರ್ಗೆಯವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ ವ್ಯಂಗ್ಯವಾಡಿದ ಈಶ್ವರಪ್ಪ, ಜನರಿಗೆ ಉದ್ಯೋಗ ಕೊಡಲಿಲ್ಲ ಎಂದು ಸಿದ್ದರಾಮಯ್ಯನವರು ಕೇಳುತ್ತಿದ್ದರು. ಕರೊನಾ ಸಂದರ್ಭದಲ್ಲಿ ಜನ ಉಪವಾಸ ಇರಬಾರದು ಅಂತಾ ಜಾಬ್ ಕಾರ್ಡ್ ಕೊಟ್ಟು ಉದ್ಯೋಗ ಕೊಟ್ಟಿದ್ದಾರೆ. ಅಲ್ಲದೆ, ಎರಡು ವರ್ಷ ಉಚಿತ ರೇಷನ್ ಕೊಟ್ಟಿದ್ದಾರೆ ಎಂದು ಹೇಳಿದರು.

    ಕಾಂಗ್ರೆಸ್​ನವರು ಹಾಗೂ ಸಿದ್ದರಾಮಯ್ಯ ದಿನಾ ಬೆಳಗ್ಗೆ ಎದ್ದರೆ ಮೋದಿ ಅವರನ್ನು ಬೈಯುತ್ತಾರೆ. ಆದರೆ, ಇವರನ್ನು ಗುಂಡಿಯಲ್ಲಿ ಮಣ್ಣು ಹಾಕಿ ಮುಚ್ಚೋದಕ್ಕೆ ಜನ ಕಾಯ್ತಾ ಇದ್ದಾರೆ. 2023ರಲ್ಲಿ ಕಾಂಗ್ರೆಸ್​ನ ಮುಚ್ಚಿ ಹಾಕಿ 150 ಸೀಟ್ ಗೆಲ್ಲುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.

    ಮೋದಿ ಅವರು ತಮ್ಮ ಸಚಿವ ಸಂಪುಟದಲ್ಲಿ 27 ಜನ ಹಿಂದುಳಿದ ವರ್ಗದರಿಗೆ ಸ್ಥಾನ ಕೊಟ್ಟಿದ್ದಾರೆ. ಕಾಂಗ್ರೆಸ್​ನ ಸಿದ್ದರಾಮಯ್ಯ, ಡಿಕೆಶಿ ಅವರು ಎಷ್ಟು ಜನರಿಗೆ ಕೊಟ್ಟಿದ್ದಾರೆ ಹೇಳಲಿ, ಆರ್​ಎಸ್​ಎಸ್ ಮುಗಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳ್ತಾರೆ. ಆರ್​ಎಸ್ಎಸ್ ಅನ್ನೋ ಮೂರು ಪದ‌ದ ಸಹವಾಸಕ್ಕೆ ಬಂದ್ರೆ ಮುಂದಿನ ಚುನಾವಣೆಯಲ್ಲಿ ಹೇಳ ಹೆಸರಿಲ್ಲದ ಹಾಗೆ ಹೋಗ್ತಾರೆ. ಆರ್​ಎಸ್​ಎಸ್​ ಸಂಘಟನೆ ಭಯತ್ಪಾದಕರಿಗೆ ಸಿಂಹ ಸ್ವಪ್ನವಾಗಿದೆ ಎಂದು ಹೇಳಿದರು.

    ನಾವು ರಾಷ್ಟ್ರವಾದಿಗಳು. ನಾವೆಂದು ಜಾತಿವಾದಿಗಳು ಆಗಿಲ್ಲ. ಹಿಂದು, ಮುಸ್ಲಿಂ ಕ್ರಿಶ್ಚಿಯನ್ ಮೂರು ಸಮುದಾಯದವರಿಗೆ ಅತ್ಯುನ್ನತ ಹುದ್ದೆ ಕೊಟ್ಟಿರೋದು ಬಿಜೆಪಿ ಎಂದು ಹೇಳಿದ ಈಶ್ವರಪ್ಪ, ಹಿಂದುಳಿದ ವರ್ಗದವರಿಗೆ ಎಷ್ಟು ಅನುದಾನ ಬಿಡುಗಡೆ ಮಾಡಿದ್ದಿರಿ ಹೇಳಿ, ಅದೇ ಹಿಂದುಳಿದ ವರ್ಗದವರಿಗೆ 119 ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರ ಕೊಟ್ಟಿದೆ ಎಂದು ಸಿದ್ದರಾಮಯ್ಯ ಅವರಿಗೆ ನೇರ ಪ್ರಶ್ನೆ ಹಾಕಿದರು. (ದಿಗ್ವಿಜಯ ನ್ಯೂಸ್​)

    ಚನ್ನರಾಯಪಟ್ಟಣದಲ್ಲೊಂದು ವಿಚಿತ್ರ ಆಚರಣೆ; ಹರಕೆ ಹೊತ್ತವನಿಗೆ ಸಗಣಿ ನೀರು ಎರಚಿ ಮೆರವಣಿಗೆ!

    ಬಸ್​ ನಿಲ್ದಾಣ ನಿರ್ಮಿಸಿ ಕನ್ನಡದ ಕಂಪು ಪಸರಿಸುತ್ತಿರುವ ಸುರೇಶ್​ ಕುಮಾರ್​ರನ್ನು ಶ್ಲಾಫಿಸಿದ ಪ್ರಧಾನಿ ಮೋದಿ

    ಮತ್ತೊಂದು ದಾಖಲೆಯ ಸನಿಹದಲ್ಲಿ ವಿರಾಟ್ ಕೊಹ್ಲಿ; ಯಾವುದು ಆ ದಾಖಲೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts