More

    ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ :ಕಾಂಗ್ರೆಸ್ -ಜೆಡಿಎಸ್‌ಗೆ ತಲಾ ಎರಡು ಅಧ್ಯಕ್ಷಗಿರಿ ಸಂಭವ

    ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟ ಪ್ರಾದೇಶಿಕ ಆಯುಕ್ತ ಭಾಜಪೇಯಿ  |

    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೊಂಡ ನಾಲ್ಕು ತಿಂಗಳ ಬಳಿಕ ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ ಚುನಾವಣೆಯ ಪ್ರಕ್ರಿಯೆ ನಗರದ ಇಂದಿರಾ ಸ್ಮಾರಕ ಭವನ ಟೌನ್ ಹಾಲ್‌ದಲ್ಲಿ ಭಾರಿ ಬೀಗಿ ಪೊಲೀಸ್ ಬಂದೋಬಸ್ತ್ನಲ್ಲಿ ಜರುಗಿತು.
    ಚುನಾವಣಾಧಿಕಾರಿಗಳಾಗಿರುವ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಭಾಜಪೇಯಿ ಅವರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಚುನಾವಣಾಧೀಕಾರಿಗಳ ಸೂಚನೆಯಂತೆ ಪಾಲಿಕೆ ಆಡಳಿತ ಆಯುಕ್ತ ಪ್ರಕಾಶ ರಜಪೂತ ನಾಮಪತ್ರಗಳನ್ನು ಸ್ವೀಕರಿಸಿದರು. ಬಳಿಕ ಕೌನ್ಸಿಲ್ ಕಾರ್ಯದರ್ಶಿ ಸಾವಿತ್ರಿ ಸಲಗರ, ಆಯುಕ್ತ ಭುನವೇಶ ಪಾಟೀಲ್ ಇನ್ನಿತರ ಅಧಿಕಾರಿಗಳ ಜತೆಗೂಡಿ ಪ್ರಾದೇಶಿಕ ಆಯುಕ್ತರು ನಾಮಪತ್ರಗಳನ್ನು ಪರಿಶೀಲಿಸಿದ ಬಳಿಕ ಕ್ರಮ ಬದ್ಧವಾಗಿರುವ ಸದಸ್ಯರ ಹೆಸರುಗಳನ್ನು ಪ್ರಕಟಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ತಲಾ ಎರಡು ಸ್ಥಾಯಿ ಸಮಿತಿ ಅಧ್ಯಕ್ಷತೆ ಧಕ್ಕುವಂತಿದೆ.
    ಸ್ಥಾಯಿ ಸಮಿತಿಗೆ ಆಯ್ಕೆ ಚುನಾವಣೆ ಪ್ರಕ್ರಿಯೆಯಲ್ಲಿ ಮಹಾನಗರ ಪಾಲಿಕೆ ೫೫ ಸದಸ್ಯರ ಪೈಕಿ ೫೩ ಸದಸ್ಯರು ಹಾಗೂ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್, ಉತ್ತರ ಕ್ಷೇತ್ರ ಶಾಸಕಿ ಕನ್ನಿಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಚಂದ್ರಶೇಖರ ಪಾಟೀಲ್ ಹುಮನಾಬಾದ ಅವರು ಪಾಲ್ಗೊಂಡಿದ್ದರು. ನಾಲ್ಕು ಸ್ಥಾಯಿ ಸಮಿತಿಗೆ ತಲಾ ಎಂಟು  ಜನ ಪಾಲಿಕೆ ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಪರಿಶೀಲನೆ ಬಳಿಕ ಎಲ್ಲವೂ ಅಂಗೀಕೃತಗೊAಡಿದ್ದನ್ನು ಚುನಾವಣಾಧಿಕಾರಿಗಳು ಪ್ರಕಟಿಸಿದರು. ಬಳಿಕ ನಾಲ್ಕು ಸಮಿತಿಗಳಿಂದ ಒಬ್ಬೊಬ್ಬರು ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಂಡಿದ್ದರಿAದ ಎಲ್ಲ ಸ್ಥಾಯಿ ಸಮಿತಿಗಳಿಗೆ ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡರು. ಆಯ್ಕೆಯಾದವರ ವಿವರ ಹೀಗಿದೆ.
    ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ  ಯಲ್ಲಪ್ಪ ನಾಯ್ಕೋಡಿ, ವೀರಣ್ಣ ಹೊನ್ನಳ್ಳಿ , ಸುನೀಲ್ ಬನಶೆಟ್ಟಿ , ಎನ್.ಡಿ.ಇರ್ಮಾನ್,ಮೇಘನಾ ಕಳಸ್ಕರ್, ವಿಶಾಲಕುಮಾರ ನವರಂಗ ಹಾಗೂ ಮಹ್ಮದ್ ಅಯಾಜ್‌ಖಾನ್ ಅವರು ಸದಸ್ಯರಾದರು.
    ನಗರ ಯೋಜನೆ ಸುಧಾರಣೆ ಸ್ಥಾಯಿ ಸಮಿತಿಗೆ ಶೇಖ ಹುಸೇನ್, ರಿಯಾಜ್ ಅಹ್ಮದ್, ತಹಸೀನ್‌ಬೇಗಂ,  ಹೀನಾಬೇಗಂ ಅಬ್ದುಲ್ ರಹಿಮ್, ವಿಜಯಕುಮಾರ ಸೇವಲಾನಿ, ಮಲ್ಲು ಉದನೂರ ಹಾಗೂ ಪಾವರ್ತಿ ರಾಜು ದೇವದುರ್ಗ ಸದಸ್ಯರಾಗಿ ಚುನಾಯಿತರಾದರು.
    ಲೆಕ್ಕಪತ್ರ ಸ್ಥಾಯಿ ಸಮಿತಿಗೆ ರೇಣುಕಾ ರಾಮರಡ್ಡಿ ಗುಮ್ಮಟ, ಪರ್ವಿನ್‌ಬೇಗಂ, ಅರ್ಚನಾ ಬಸವರಾಜ ಪಾಟೀಲ್ ಬಿರಾಳ, ಸಾಜೀದ್ ಕಲ್ಯಾಣಿ, ನಜ್ಮಾಂ ತಹೇರಬೇಗಂ,ಗುರುರಾಜ ಮತ್ತು ತೃಪ್ತಿ ಶಿವಶರಣಪ್ಪ ಅಲ್ಲದ  ಆಯ್ಕೆಯಾದರು.
    ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಗೆ ಅರುಣಾಬಾಯಿ ಅಂಬಾರಾಯ, ಸಚಿನ್ ಹೊನ್ನಾ, ಲತಾ ರವಿಂದ್ರಕುಮಾರ, ಸೈಯಿದಾಮಾಸೀರ್ ನಸ್ರಿನ್, ಶಾಂತಾಬಾಯಿ ಚಂದ್ರಶೇಖರ, ಅನುಪಮಾ ರಮೇಶ ಕಮಕನೂರ, ರಾಜಮ್ಮ ಜಮಾದಾರ ಅವರು ಸದಸ್ಯರಾಗಿ ಅವಿರೋಧವಾಗಿ  ಆಯ್ಕೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts