More

    ಮೀನುಗಾರರ ಬಾಳಲ್ಲಿ ಭಾಗ್ಯದ ಬಾಗಿಲು ತೆರೆದ ಅಪರೂಪದ ಮೀನು: ಬೆಲೆ ಕೇಳಿದ್ರೆ ಹುಬ್ಬೇರಿಸ್ತೀರಾ!

    ಕಾಕಿನಾಡ: ಸಾಮಾನ್ಯವಾಗಿ ಒಂದು ಕೆಜಿ ಮೀನಿನ ಬೆಲೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಇರುತ್ತದೆ. ಕೆಲವೆಡೆ ಒಂದು ಕೆಜಿಗೆ 300 ರೂ. ಇದ್ದರೆ, ಇನ್ನು ಕೆಲವೆಡೆ 600 ರೂ. ಇರುತ್ತದೆ. ಕೆಲವೊಂದು ಅಪರೂಪದ ತಳಿಯ ಮೀನು ಸಿಕ್ಕರಂತೂ ಹರಾಜಿನಲ್ಲಿ ಲಕ್ಷಾಂತರ ರೂಪಾಯಿಗೆ ಮಾರಾಟವಾಗುತ್ತದೆ. ಇದೀಗ ಅಂಥದ್ದೇ ಮೀನೊಂದು ಆಂಧ್ರ ಪ್ರದೇಶದ ಕಾಕಿನಾಡದಲ್ಲಿ ಪತ್ತೆಯಾಗಿದೆ.

    ಕಾಕಿನಾಡದ ಮೀನುಗಾರರ ಬಲೆಗೆ 20 ಕೆಜಿ ಗಾತ್ರದ ಅಪರೂಪದ ಮೀನು ಸಿಕ್ಕಿದೆ. ಕೇವಲ ಒಂದು ಮೀನು ಬರೋಬ್ಬರಿ 3.10 ಲಕ್ಷ ರೂಪಾಯಿಗೆ ಮಾರಾಟವಾಗಿದ್ದು, ಹಲವರ ಹುಬ್ಬೇರಿಸಿದೆ. ಈ ಮೀನನ್ನು ಕಚಿಡಿ ಮೀನು ಎಂದು ಆಂಧ್ರದಲ್ಲಿ ಕರೆಯುತ್ತಾರೆ. ಹಲವು ಔಷಧಿಯ ಗುಣ ಹೊಂದಿರುವುದರಿಂದ ಈ ಮೀನು ತುಂಬಾ ದುಬಾರಿ ಆಗಿದೆ.

    ಇದನ್ನೂ ಓದಿ: ಜನರ ಬದುಕೇ ಹಾಲಾಹಲ, ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ

    ಆರೋಗ್ಯ ಸಮಸ್ಯೆಗಳು ದೂರ

    ಕಚಿಡಿ ಮೀನನ್ನು ಅನೇಕ ರೋಗಗಳನ್ನು ಗುಣಪಡಿಸುವ ಔಷಧಿಗಳಲ್ಲಿ ಬಳಸಲಾಗುತ್ತದೆ. ಪಿತ್ತಕೋಶ ಮತ್ತು ಶ್ವಾಸಕೋಶ ಸಮಸ್ಯೆಗೆ ಇದು ರಾಮಬಾಣ ಎಂದು ಹೇಳಲಾಗಿದೆ. ಇದಲ್ಲದೆ, ಈ ಮೀನಿನಿಂದ ಹೊರತೆಗೆದ ಕೆಲವು ವಸ್ತುಗಳಿಂದ ಶಸ್ತ್ರಚಿಕಿತ್ಸೆಯ ನಂತರ ಹೊಲಿಗೆಗೆ ಬಳಸುವ ದಾರವನ್ನು ತಯಾರಿಸುತ್ತಾರೆ. ಈ ಮೀನನ್ನು ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಈ ಮೀನಿಗೆ ದೇಶ-ವಿದೇಶಗಳಲ್ಲಿ ಉತ್ತಮ ಬೇಡಿಕೆ ಇದ್ದು, ಖರೀದಿಸಲು ಪೈಪೋಟಿ ನಡೆಸುತ್ತಾರೆ ಎಂದು ವೈದ್ಯರು ಹೇಳಿದ್ದಾರೆ.

    ಅದೃಷ್ಟವೆಂದೇ ಪರಿಗಣನೆ

    ಈ ಹಿಂದೆಯು ಮೀನುಗಾರರು ಈ ಮೀನನ್ನು ಅನೇಕ ಬಾರಿ ಹಿಡಿದಿದ್ದಾರೆ. ಇಂತಹ ಮೀನುಗಳು ಮೀನುಗಾರರಿಗೆ ಭಾರೀ ಆದಾಯವನ್ನು ತಂದುಕೊಡುತ್ತದೆ. ಅನೇಕರು ರಾತ್ರೋರಾತ್ರಿ ಲಕ್ಷಾಧಿಪತಿಗಳಾದ ಅನೇಕ ಉದಾಹರಣೆಗಳು ಇವೆ. ಆದರೆ, ಈ ಜಾತಿಯ ಮೀನು ಅಪರೂಪಕ್ಕೆ ಮಾತ್ರ ಸಿಗುವುದರಿಂದ ಇದನ್ನು ಅದೃಷ್ಟವೆಂದೇ ಪರಿಗಣಿಸಲಾಗಿದೆ. ಆಂಧ್ರದ ಗೋದಾವರಿ ಜಿಲ್ಲೆಯಲ್ಲೇ ಈ ಮೀನು ಹೆಚ್ಚಾಗಿ ಕಂಡುಬರುತ್ತದೆ. ಈ ಹಿಂದೆ ಒಂದು ಮೀನು 4 ಲಕ್ಷ ರೂ.ವರೆಗೂ ಮಾರಾಟವಾಗಿತ್ತು. (ಏಜೆನ್ಸೀಸ್​)

    VIDEO | ಮರದ ಎಲೆಗಳನ್ನು ತಿಂದ ಸಿಂಹ, ದೃಶ್ಯ ನೋಡಿ ಹುಬ್ಬೇರಿಸಿದ ನೆಟ್ಟಿಗರು..!

    ಖ್ಯಾತ ನಟಿ ರೇಖಾ, ತಮ್ಮ ಸೆಕ್ರೆಟರಿ ಜತೆ ಲಿವ್​-ಇನ್​ ರಿಲೇಶನ್​ಶಿಪ್​ನಲ್ಲಿ ಇದ್ದಾರಾ? ವಿವಾದ ಹುಟ್ಟಿಸಿದ ಜೀವನಚರಿತ್ರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts