More

    ಮದುವೆ ಬಳಿಕ ‘ಆಚಾರ್ಯ’ ಶೂಟಿಂಗ್​ಗೆ ಕಾಜಲ್​ ಎಂಟ್ರಿ; ಚಿರಂಜೀವಿ ವೆಲ್​ಕಮ್​ ಹೇಗಿತ್ತು ನೋಡಿ

    ಹೈದರಾಬಾದ್: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಆಚಾರ್ಯ ಸಿನಿಮಾ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್ ಅಗರ್​ವಾಲ್​ ನಟಿಸಲಿರುವುದು ಈ ಹಿಂದೆಯೇ ಘೋಷಣೆ ಆಗಿತ್ತು. ಆದರೆ, ಶೂಟಿಂಗ್​ಗೆ ಇಂದು ಬರಲಿದ್ದಾರೆ ನಾಳೆ ಬರಲಿದ್ದಾರೆ ಎನ್ನಲಾಗಿತ್ತು. ಈ ನಡುವೆ ಮದುವೆಯನ್ನೂ ಮಾಡಿಕೊಂಡಿದ್ದರಿಂದ ಈಗ ಆಚಾರ್ಯ ಬಳಗಕ್ಕೆ ಕಾಜಲ್ ಹಾಜರಿ ಹಾಕಿದ್ದಾರೆ. ಹಾಗಾಗಿ ಅವರನ್ನು ಅಷ್ಟೇ ವಿಶೇಷವಾಗಿ ನಾಯಕ ಚಿರಂಜೀವಿ ವೆಲ್​ಕಮ್ ಮಾಡಿದ್ದಾರೆ. ಪತಿ ಗೌತಮ್ ಕಿಚ್ಲು ಜತೆಗೆ ಸೆಟ್​ಗೆ ಬಂದಿದ್ದ ಕಾಜಲ್​ಗೆ ಕೇಕ್​ ಕತ್ತರಿಸಿ ಹೂವಿನ ಬೊಕ್ಕೆ ನೀಡಿ ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲ ಇದೇ ವೇಳೆ ದಂಪತಿ ಪರಸ್ಪರ ಮಾಲೆಯನ್ನು ಅದಲು ಬದಲು ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿವೆ. ಅಂದಹಾಗೆ, ಆಚಾರ್ಯ ಚಿತ್ರವನ್ನು ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts