More

    ರಸ್ತೆ ಅಗಲೀಕರಣದಿಂದ ತಗ್ಗುವ ಅಪಘಾತ

    ಪಂಚನಹಳ್ಳಿ: ಕಡೂರು ಕ್ಷೇತ್ರ ವ್ಯಾಪ್ತಿಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿ 35 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಬೆಳ್ಳಿ ಪ್ರಕಾಶ್ ಹೇಳಿದರು.

    ಸೋಮವಾರ ಗರುಗದಹಳ್ಳಿ ಗ್ರಾಮದಲ್ಲಿ ಪ್ರಾಂಸಿ ಯೋಜನೆ ಅಡಿ 2 ಕೋಟಿ ರೂ. ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಪಘಾತಗಳನ್ನು ನಿಯಂತ್ರಿಸಲು ರಸ್ತೆ ತಿರುವುಗಳನ್ನು ಕಡಿತಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಗರುಗದಹಳ್ಳಿ ಏರಿ ಮೇಲಿನ ರಸ್ತೆಯನ್ನು ಅಗಲೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ ಕಡೂರು, ಮರವಂಜಿ ರಸ್ತೆಯ ಕೊತ್ತಿಗೆರೆ ಗೇಟ್​ನಿಂದ ಮರವಂಜಿವರೆಗೆ 14.07 ಕಿಮೀ ರಸ್ತೆ ಅಭಿವೃದ್ಧಿ, ಬಿವೈಎಸ್​ಎಸ್ ಯೋಜನೆಯಡಿ ಯಗಟಿಯಿಂದ ಕುಂದೂರು ಗೇಟ್​ವರೆಗೆ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ, ಮರವಂಜಿಯಿಂದ ಗರುಗದಹಳ್ಳಿ ಗ್ರಾಮದವರೆಗಿನ 14.07 ಕಿಮೀ ರಸ್ತೆ ಅಭಿವೃದ್ಧಿ ಸೇರಿ ಒಟ್ಟು 35.04 ಕಿಮೀ ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಿದ್ದು, ಕಾಮಗಾರಿಗಳು ಶೀಘ್ರ ಮುಗಿಯಲಿವೆ ಎಂದರು.

    ಸಿಎಂಜಿಆರ್​ವೈ ಯೋಜನೆ ಅಡಿಯಲ್ಲಿ ಚೆನ್ನಾಪುರ-ಗಿರಿಬೊಮ್ಮನಹಳ್ಳಿ ರಸ್ತೆಯಲ್ಲಿ ಬರುವ ಕುಂಕನಾಡು ಗ್ರಾಮದ ಪರಿಮಿತಿಯಲ್ಲಿ 65 ಲಕ್ಷ ರೂ. ವೆಚ್ಚದ ಡಾಂಬರೀಕರಣ, ಪಂಚನಹಳ್ಳಿ-ತಿಮ್ಮಲಾಪುರ ರಸ್ತೆಯಲ್ಲಿ 21ರಿಂದ 22.50 ಕಿಮೀವರೆಗೆ 1.20 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ಕಾರ್ಯ ಪೂರ್ಣಗೊಂಡಿದ್ದು, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.

    ಎಸ್​ಡಿಪಿ ಯೋಜನೆಯಲ್ಲಿ ಸಿಂಗಟಗೆರೆ ಪಂಚನಹಳ್ಳಿ ಮುಖ್ಯರಸ್ತೆಯ 11ರಿಂದ 13.09 ವರೆಗಿನ ರಸ್ತೆಯನ್ನು 2.80 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಎಸ್​ಡಿಪಿ ಯೋಜನೆಯಲ್ಲಿ 65 ಲಕ್ಷ ರೂ. ವೆಚ್ಚದಲ್ಲಿ ಸಿಂಗಟಗೆರೆ ಪಂಚನಹಳ್ಳಿ ರಸ್ತೆಯಿಂದ ಕಂಚುಗಲ್ ಗ್ರಾಮದವರೆಗಿನ 1.50 ಕಿಮೀ ರಸ್ತೆ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts