More

    ಸಂಸತ್ ಕ್ಯಾಂಟೀನ್​​ಗಳಲ್ಲಿ ಇನ್ಮುಂದೆ ಕಷಾಯ ಪೂರೈಕೆ

    ನವದೆಹಲಿ: ಕರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸಂಸತ್ ಆವರಣದ ಕ್ಯಾಂಟೀನ್​​ಗಳಲ್ಲಿನ್ನು ಕಷಾಯ ಪೂರೈಕೆಯಾಗಲಿದೆ.
    ಭಾರತೀಯ ರೈಲ್ವೆಯ ಅಡುಗೆ ಘಟಕಗಳು ಈ ಕ್ಯಾಂಟೀನ್​​ಗಳನ್ನು ನಿರ್ವಹಿಸುತ್ತಿದ್ದು, ​ಮುಂದಿನ ವಾರದಿಂದ ಕಷಾಯ ಪೂರೈಸಲಿವೆ.

    ತುಳಸಿ , ಡಾಲ್ಚಿನ್ನಿ , ಕರಿಮೆಣಸು, ಒಣ ಶುಂಠಿ ಮತ್ತು ಒಣದ್ರಾಕ್ಷಿ ಸೇರಿದಂತೆ ವಿವಿಧ ಬಗೆಯ ಗಿಡಮೂಲಿಕೆಗಳಿಂದ ತಯಾರಿಸಿದ ಒಂದು ರೀತಿಯ ಗಿಡಮೂಲಿಕೆ ಚಹಾ ಅಥವಾ ಕಷಾಯ (ಕಾಢಾ) ಆಗಿದೆ. COVID ಬಿಕ್ಕಟ್ಟಿನ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಯುಷ್ ಸಚಿವಾಲಯ ದಿನಕ್ಕೆ ಒಂದು ಅಥವಾ ಎರಡು ಬಾರಿ ಕಾಢಾ ಸೇವಿಸಲು ಸಲಹೆ ನೀಡಿರುತ್ತದೆ.

    ಇದನ್ನೂ ಓದಿ: ಅರೆಕ್ಷಣದಲ್ಲಿ ನಡೆದ ದುರಂತ ನರಕವನ್ನೇ ಸೃಷ್ಟಿಸಿತು..

    ಮಾನ್ಸೂನ್ ಅಧಿವೇಶನ ಇನ್ನೂ ಪ್ರಾರಂಭವಾಗದಿದ್ದರೂ, ಆಗಸ್ಟ್ ಕೊನೆಯ ವಾರದಲ್ಲಿ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಸಾಮಾಜಿಕ ಅಂತರದ ಮಾನದಂಡಗಳೊಂದಿಗೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಸಂಸತ್ ಮೂಲಗಳು ತಿಳಿಸಿವೆ.
    ಕೋವಿಡ್​​ನಿಂದಾಗಿ ಹಲವು ಸಂಸತ್ ಸದಸ್ಯರ ಬೇಡಿಕೆಯ ಮೇರೆಗೆ, ಆಗಸ್ಟ್ 10 ರಿಂದ 11 ರೂ.ಗೆ ಒಂದು ಕಪ್‌ಗೆ ಕಷಾಯ ಪೂರೈಸುವ ವ್ಯವಸ್ಥೆ ಮಾಡಲಾಗಿದೆ.
    ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14 ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಜನರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಯುರ್ವೇದ ಪಾನೀಯ ಸೇವಿಸಲು ತಿಳಿಸಿದ್ದರು.

    ಭಾರತದಲ್ಲಿ ಈವರೆಗೆ ಒಟ್ಟು 20,88,612 ಪ್ರಕರಣಗಳು ವರದಿಯಾಗಿವೆ, ಇದರಲ್ಲಿ 6,19,088 ಸಕ್ರಿಯ ಪ್ರಕರಣಗಳಿದ್ದು, 14,27,006 ಜನ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 42,518 ಕ್ಕೇರಿದೆ.

    ಏರ್​ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂ.ಪರಿಹಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts