More

    ಬಲು ದುಬಾರಿ ಈ ಕಡಕ್​ನಾಥ್​ ಕೋಳಿ ಮಾಂಸ: ಮೊಟ್ಟೆ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

    ಹೈದರಾಬಾದ್​: ವಿಚಿತ್ರ ಲುಕ್​ನಿಂದ ಮಾತ್ರವಲ್ಲದೇ ಕಡಿಮೆ ಕೊಬ್ಬಿನಂಶದೊಂದಿಗೆ ಮಾಂಸದ ಬಗೆಗಳಲ್ಲಿ ಆರೋಗ್ಯಕರ ಎನಿಸಿಕೊಂಡಿರುವ ಕಡಕ್​ನಾಥ್​ ಚಿಕನ್​ ಇದೀಗ ಹೈದರಾಬಾದ್​ನಲ್ಲಿ ತುಂಬಾ ದುಬಾರಿಯಾಗಿದೆ.

    ಕಡಕ್​ನಾಥ್​ ಕೋಳಿ ಮಾಂಸ ಕೆಜಿಗೆ 1000 ರೂಪಾಯಿಯಿಂದ 1200 ರೂ. ವರೆಗೂ ಮಾರಾಟವಾಗುತ್ತದೆ. ಈಗಾಗಲೇ ದುಬಾರಿ ಎನಿಸಿಕೊಂಡಿರುವ ಮಟನ್​ ಸಹ ಕಡಕ್​ನಾಥ್​ ಮುಂದೆ ಅಗ್ಗ ಎನಿಸಿಕೊಂಡಿದೆ. ಒಂದು ಕೆಜಿ ಮಟನ್​ಗೆ ತಗಲುವ ಖರ್ಚಿನಲ್ಲಿ ಅರ್ಧ ಕೆಜಿ ಕಡಕ್​ನಾಥ್​​ ಚಿಕನ್​ ಬರುತ್ತದೆ.

    ಬಲು ದುಬಾರಿ ಈ ಕಡಕ್​ನಾಥ್​ ಕೋಳಿ ಮಾಂಸ: ಮೊಟ್ಟೆ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

    ಇನ್ನು ಈ ಕಡಕ್​ನಾಥ್​ ತಳಿಯ ಮೂಲ ಮಧ್ಯಪ್ರದೇಶ ಮತ್ತು ಛತ್ತೀಸ್​ಗಢ ಮತ್ತು ಗುಜರಾತ್​ ಹಾಗೂ ರಾಜಸ್ಥಾನದ ಕೆಲವು ಭಾಗಗಳು. ಅದರಲ್ಲೂ ಇಂತಹ ಕೋಳಿಗಳು ಹೆಚ್ಚು ಬುಡಕಟ್ಟು ಸಮುದಾಯದಲ್ಲಿ ಕಂಡುಬರುತ್ತವೆ. ಈ ಕೋಳಿಯ ವಿಶೇಷ ಕೊಕ್ಕಿನಿಂದ ಹಿಡಿದು ಕಾಲ ತುದಿಯವರೆಗೂ ಕಪ್ಪು ಬಣ್ಣದಿಂದ ಕೂಡಿದೆ. ಅಲ್ಲದೆ, ಅದರ ಮಾಂಸ ಮತ್ತು ಮೊಟ್ಟೆಯು ಸಹ ಕಪ್ಪು ಬಣ್ಣವೇ.

    ಇದನ್ನೂ ಓದಿರಿ: ಪ್ರತಿ ರಾತ್ರಿ ಮಲಗುವಾಗ ಇದನ್ನು ತಪ್ಪದೇ ಮಾಡಿ… ಸುಳ್ಳು ಖುಷಿ ಕೊಟ್ಟಿತಾ ನೋಡಿಕೊಳ್ಳಿ…

    ಈ ಕೋಳಿಗಳನ್ನು ಮೊಟ್ಟೆ ಮತ್ತು ಮಾಂಸಕ್ಕಾಗಿ ಸಾಕಲಾಗುತ್ತದೆ. ಬೆಳೆದು ಸಾಮಾನ್ಯ ಗಾತ್ರಕ್ಕೆ ಬರಲು 8 ತಿಂಗಳು ತೆಗೆದುಕೊಳ್ಳುತ್ತದೆ. ಆದರೆ, ಬಾಯ್ಲರ್​ ಕೋಳಿಗಳು ಕೇವಲ 45 ದಿನಗಳಲ್ಲಿ ದಪ್ಪದಾಗುತ್ತವೆ. ಅನೇಕ ನಗರಗಳಿಗೆ ಕಡಕ್​ನಾಥ್​ ಮಾಂಸವನ್ನು ಪೂರೈಸುವ ಕಡಕ್​ನಾಥ್​ ಚಿಕನ್​ ಫಾರ್ಮ್ಸ್​ ಹೇಳುವಂತೆ ಪ್ರತಿ ಕೋಳಿಯ ಸಂತಾನೋತ್ಪತ್ತಿಗೆ 500 ರೂ. ವೆಚ್ಚವಾಗುತ್ತದೆ. ಈ ಕೋಳಿ ಪ್ರತಿದಿನ 100 ಗ್ರಾಂ ಆಹಾರ ತಿನ್ನುತ್ತದೆ ಎಂದಿದ್ದಾರೆ.

    ಬಲು ದುಬಾರಿ ಈ ಕಡಕ್​ನಾಥ್​ ಕೋಳಿ ಮಾಂಸ: ಮೊಟ್ಟೆ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

    ಹೀಗಾಗಿ ಕೋಳಿ ಮಾಂಸ ತುಂಬಾ ದುಬಾರಿಯಾಗಿದೆ. ಇನ್ನು ಮೊಟ್ಟೆಯು ಕೂಡ ಕಡಿಮೆಯೇನಲ್ಲ. ಒಂದು ಮೊಟ್ಟೆಗೆ 30 ರೂ. ದರವಿದೆ. ಕಡಕ್​ನಾಥ್​ ಕೋಳಿಯ ಮಾಂಸ ಮತ್ತು ಮೊಟ್ಟೆ ಪೌಷ್ಟಿಕಾಂಶಗಳ ಆಗರವೆಂದೇ ನಂಬಲಾಗಿದೆ. ಅದರಲ್ಲೂ ಅಧಿಕ ರಕ್ತದೊತ್ತಡ ಇರುವ ಹಿರಿಯ ನಾಯಕರಿಗೆ ತುಂಬಾ ಉಪಯುಕ್ತವಂತೆ. ಹೀಗಾಗಿ ಈ ಕೋಳಿಗೆ ಇವು ಡಿಮ್ಯಾಂಡ್​ ಮೇಲೆ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಇದೆ. (ಏಜೆನ್ಸೀಸ್​)

    ಮೋದಿಯವರ ಭಾಷಣ ಬರೆಯುವವರು ಯಾರು? ಅವರಿಗೆ ಎಷ್ಟು ಸಂಬಳ ಕೊಡಲಾಗುತ್ತಿದೆ?

    ಎಎಪಿ ಜಯಭೇರಿ! ಐದರಲ್ಲಿ ನಾಲ್ಕು ಸ್ಥಾನ ಎಎಪಿ ಪಾಲು; ಕಾಂಗ್ರೆಸ್​ಗೆ ಒಂದು ಸ್ಥಾನದಲ್ಲಿ ಗೆಲುವು

    10 ಸೆಕೆಂಡ್​ ಈ ವಿಡಿಯೋ ಬೆಲೆ ₹48 ಕೋಟಿ! ಇದರಲ್ಲಿರೋದು ಮಲಗಿರುವ ಟ್ರಂಪ್- ನೀವೂ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts