More

    ನಿಲ್ಲದ ಕಬಡ್ಡಿ ಗೊಂದಲ, ಮತ್ತೆ ತಿಕ್ಕಾಟಕ್ಕೆ ಕಾರಣವೇನು?

    ಬೆಂಗಳೂರು: ಭಾರತದ ಅಪ್ಪಟ ಗ್ರಾಮೀಣ ಕ್ರೀಡೆ ಕಬಡ್ಡಿ. ಪ್ರತಿಷ್ಠಿತ ಒಲಿಂಪಿಕ್ ಕ್ರೀಡಾಕೂಟಕ್ಕೆ ಕಬಡ್ಡಿ ಸೇರ್ಪಡೆಗೊಳ್ಳಬೇಕು ಎಂದು ಹಲವಾರು ವರ್ಷಗಳಿಂದಲೂ ಕೂಗು ಕೇಳಿ ಬರುತ್ತಿದೆ. ವಿಶ್ವಮಟ್ಟದಲ್ಲಿ ಕಬಡ್ಡಿ ಪರಿಚಯವಾಗಲು ಭಾರತೀಯರೇ ಕಾರಣ ಎಂದರೂ ತಪ್ಪಾಗಲ್ಲ. ಎಷ್ಟೋ ವಿದೇಶಿ ತಂಡಗಳಿಗೆ ಭಾರತ ಮೂಲದವರೇ ಕೋಚ್ ಆಗಿರುವುದು ಹೆಮ್ಮೆಯ ಸಂಗತಿ. ಆದರೆ, ಇಂಥ ಕಬಡ್ಡಿ ಆಡಳಿತ ಮಾತ್ರ ಸುಧಾರಣೆ ಕಾಣುವ ಲಕ್ಷಣವಿಲ್ಲ. ರಾಜ್ಯ ಹಾಗೂ ರಾಷ್ಟ್ರೀಯ ೆಡರೇಷನ್‌ಗಳು ಇಬ್ಭಾಗವಾಗಿರುವುದು ಕಬಡ್ಡಿಗೆ ಮಾರಕವಾಗಿ ಪರಿಣಮಿಸಿದೆ. ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಗೆ ನಿಗದಿತ ವೇಳೆಯಲ್ಲಿ ಚುನಾವಣೆ ನಡೆಸದ ಕಾರಣ ಆಡಳಿತಾಧಿಕಾರಿ ನೇಮಿಸಲಾಗಿದೆ. ಇದೀಗ ಎರಡು ಬಣಗಳ ತಿಕ್ಕಾಟಕ್ಕೆ ಮತ್ತೊಂದು ವೇದಿಕೆ ಸೃಷ್ಟಿಸಿದಂತಾಗಿದೆ.

    ಇದನ್ನೂ ಓದಿ: ಬಿಸಿಸಿಐ ಹಣ ದುರ್ಬಳಕೆ ಮಾಡಿದ ವಿಂಡೀಸ್!

    ಕೊಠಡಿ ವಶಕ್ಕೆ ಪಡೆದ ಸರ್ಕಾರ
    ಕರ್ನಾಟಕ ಅಮೆಚೂರ್ ಕಬಡ್ಡಿ ಸಂಸ್ಥೆಗೆ ಮೇ 19 ರಂದು ಆಡಳಿತಾಧಿಕಾರಿ ನೇಮಕ ಮಾಡಿರುವ ರಾಜ್ಯ ಸರ್ಕಾರ, ಕಂಠೀರವ ಸ್ಟೇಡಿಯಂನಲ್ಲಿರುವ ಸಂಸ್ಥೆಯ ಕೊಠಡಿಯನ್ನು ವಶಕ್ಕೆ ಪಡೆದುಕೊಂಡಿದೆ. ನಿಗದಿತ ಸಮಯಕ್ಕೆ ಚುನಾವಣೆ ಸೇರಿದಂತೆ ಕಳೆದೆರಡು ವರ್ಷಗಳಿಂದ ವಾರ್ಷಿಕ ಮಹಾಸಭೆ (ಎಜಿಎಂ) ನಡೆಸಿಲ್ಲ. ಸಹಕಾರ ಸಂಘಗಳ ನಿಬಂಧಕರಿಗೆ ಲೆಕ್ಕಪತ್ರ ಸೇರಿದಂತೆ ವಿವಿಧ ದಾಖಲೆ ನೀಡದ ಹಿನ್ನೆಲೆಯಲ್ಲಿ 3 ಬಾರಿ ಶೋಕಾಸ್ ನೋಟಿಸ್ ನೀಡಲಾಗಿತ್ತು. ಮೂರು ಬಾರಿಯೂ ಯಾವುದೇ ದಾಖಲೆ ನೀಡದ ಹಿನ್ನೆಲೆಯಲ್ಲಿ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಿಸಿದೆ. ಇದನ್ನೂ ಹೋರಾಟಕ್ಕೆ ಸಂದ ಜಯ ಎಂದು ಒಂದು ಬಣ ಸಂಭ್ರಮಿಸಿದೆ.

    ಇದನ್ನೂ ಓದಿ: ರೂಫ್ ಟಾಪ್​‌ನಲ್ಲಿ ಚುಂಬನ, ಕ್ರೀಡಾಪಟು ಬಂಧನ!

    ಕೋರ್ಟ್‌ಗೆ ಮೊರೆ ಹೋಗಲು ಆಡಳಿತ ಮಂಡಳಿ ನಿರ್ಧಾರ
    ಲಾಕ್‌ಡೌನ್ ಸಮಯ ಕಚೇರಿಯಲ್ಲಿ ಯಾರೂ ಇಲ್ಲದ ವೇಳೆ ಕಚೇರಿಗೆ ನೋಟಿಸ್ ಅಂಟಿಸುವುದು ಎಷ್ಟು ಸಮಂಜಸ. ಹಣಬಲ, ರಾಜಕೀಯ ಒತ್ತಡದಿಂದಾಗಿ ಆಡಳಿತಾಧಿಕಾರಿಗಳ ನೇಮಕವಾಗಿದ್ದು, ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಆಡಳಿತ ಮಂಡಳಿ ನಿರ್ಧರಿಸಿದೆ. ಆಡಳಿತದಲ್ಲಿ ಯಾವುದೇ ಲೋಪಗಳು ಇಲ್ಲ, ಪಾರದರ್ಶಕವಾಗಿ ಆಡಳಿತ ನಡೆಸಿದರೂ ಆಡಳಿತಾಧಿಕಾರಿಗಳ ನೇಮಕದ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂದು ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts