More

    ಇಂಡೇದೇವರಹಟ್ಟಿ ಬಾಲಕನ ಕುಟುಂಬಕ್ಕೆ ಹೆಚ್ಚಿನ ಪರಿಹಾರಕ್ಕೆ ಒತ್ತಾಯ

    ಚಿತ್ರದುರ್ಗ: ವಿವಿಸಾಗರದ ಹಿನ್ನೀರು ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿರುವ ಹೊಸದುರ್ಗ ತಾಲೂಕು ಇಂಡೇದೇವರಟ್ಟಿ ಗ್ರಾಮದ ಬಾಲಕನ ನೊಂದ ಕುಟುಂಬಕ್ಕೆ ಹೆಚ್ಚಿನ ಪರಿಹಾರ ವಿತರಿ ಸುವಂತೆ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
    ಪರಿಷತ್‌ನಲ್ಲಿ ಸೋಮವಾರ ವಿಷಯ ಪ್ರಸ್ತಾಪಿಸಿದ ಅವರು,ಈಚೆಗೆ ಸುರಿದ ಭಾರಿ ಮಳೆಗೆ ತಮ್ಮ ಕ್ಷೇತ್ರ ವ್ಯಾಪ್ತಿಯ ವಿವಿ ಸಾಗರದ ಗರಿಷ್ಠ ಮಟ್ಟ 135 ಅಡಿ ತುಂಬಿದ್ದು,ಹೆಚ್ಚಿದ ಹಿನ್ನೀರಿನಿಂದಾಗಿ ಈ ಭಾಗದ ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಜನ ಜೀವನವೂ ಅಸ್ತವ್ಯಸ್ತವಾಗಿದೆ.
    ಇಂಡೇದೇವರಟ್ಟಿ ಕುಗ್ರಾಮ ಯಾದವ/ಗೊಲ್ಲ ಹಾಗೂ ನಾಯಕ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶವಾಗಿದೆ. ಹಿನ್ನೀರು ಹೆಚ್ಚಾಗಿ ಕೆರೆ ಕೋಡಿ ಬಿದ್ದ ಪರಿಣಾಮ ಹಲವು ಸೇತುವೆಗಳು ಮುಳುಗಡೆಯಾಗಿವೆ.
    ಐದು ಜನರ ಕುರಿಗಾಯಿ ಕುಟುಂಬದಲ್ಲಿದ್ದ ಮಲ್ಲೇಶ್(13)ಎಂಬ ಬಾಲಕ ಕುರಿ ಮೇಯಿಸಲು ಹೋದಾಗ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿ ದ್ದಾನೆ. ಈ ಕುಟುಂಬದಲ್ಲಿ ಮಲ್ಲೇಶ್ ಹೊರತು ಪಡಿಸಿ ಉಳಿದೆಲ್ಲ ಸದಸ್ಯರಿಗೂ ದೃಷ್ಟಿದೋಷ ಸಮಸ್ಯೆಇದೆ. ಕುಟುಂಬಕ್ಕೆ ಏಕೈಕ ಆಸರೆಯಾಗಿದ್ದ ಮಲ್ಲೇಶ್‌ನನ್ನು ಕಳೆದುಕೊಂಡ ಕುಟುಂಬವಿಂದು ಅನಾಥವಾಗಿದೆ. ನೊಂದ ಕುಟುಂಬಕ್ಕೆ ಯೋಗ್ಯಮನೆ ಇಲ್ಲ. ಕುಟುಂಬ ದುಸ್ಥಿತಿ ಮನ ಕುಲು ಕುವಂತಿದೆ. ಆದ್ದರಿಂದ ಸರ್ಕಾರ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ,ಹೆಚ್ಚಿನ ಪರಿಹಾರ ನೀಡ ಬೇಕೆಂದು ಒತ್ತಾಯಿಸಿದರು.

    ವೈಯಕ್ತಿಕ ನೆರವು
    ಭಾನುವಾರ ನೊಂದ ಕುಟುಂಬದವರನ್ನು ಭೇಟಿ ಮಾಡಿ ಸ್ವಾಂತನ ಹೇಳಿದ್ದೇನೆ. ಅವರಿಗೆ ವೈಯಕ್ತಿಕವಾಗಿ ಹಣಕಾಸು ನೆರವನ್ನೂ ನೀಡಿದ್ದೇನೆ ಎಂದು ನವೀನ್ ತಿಳಿಸಿದರು. ಪತ್ರಿಕೆಯೊಂದಿಗೆ ಮಾತನಾಡಿದ ಅವರು,ನೊಂದ ಕುಟುಂಬದ ಸಂಕಷ್ಟದ ಕುರಿತು ಸೋಮವಾರ ಪ್ರಕಟ ವಾಗಿರುವ ವಿಜಯವಾಣಿ ವರದಿಯನ್ನೂ ಗಮನಿಸಿರುವೆ. ನಾನು ಭೇಟಿ ನೀಡಿದ ಸಂದರ್ಭದಲ್ಲಿ,ಜನರು ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts