More

    ಜೈನಮುನಿ ಹತ್ಯೆ ಖಂಡಿಸಿ ಮೌನ ಮೆರವಣಿಗೆ

    ಹೊಸದುರ್ಗ: ನಂದಿ ಪರ್ವತ ಆಶ್ರಮದ ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಹೊಸದುರ್ಗದಲ್ಲಿ ಜೈನ ಸಮಾಜದವರು ಮಂಗಳವಾರ ಮೌನ ಪ್ರತಿಭಟನೆ ನಡೆಸಿದರು.

    ಜೈನ ದೇವಾಲಯದಿಂದ ಮೆರವಣಿಗೆ ಮೂಲಕ ತಾಲಕು ಕಚೇರಿಗೆ ತೆರಳಿ ಜೈನ ಮುನಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಕುಂಚಿಟಿಗ ಪೀಠದ ಶ್ರೀ ಶಾಂತವೀರ ಸ್ವಾಮೀಜಿ, ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಜೈನ ಸಮುದಾಯದ ನೂರಾರು ಅನುಯಾಯಿಗಳು ಶ್ರಾವಕರು ಭಾಗವಹಿಸಿದ್ದರು.

    ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ಸಂಗತಿ. ಅಹಿಂಸೆಯನ್ನು ಪ್ರತಿಪಾದಿಸುವ ಸಂತರನ್ನು ಹಿಂಸೆಗೆ ಗುರಿಯಾಗಿಸಿರುವುದು ಖಂಡನೀಯ. ಸಮಾಜದ ಪರಿವರ್ತನೆಯ ಕಾರ್ಯದಲ್ಲಿ ತೊಡಗಿರುವ ಸಾಧು ಸಂತರ ಜೀವಕ್ಕೆ ಸರ್ಕಾರ ಭದ್ರತೆ ಒದಗಿಸುವಂತೆ ಒತ್ತಾಯಿಸಿದರು.

    ಶ್ರೀ ಪುರುಷೋತ್ತಮಂದಪುರಿ ಸ್ವಾಮೀಜಿ ಮಾತನಾಡಿ, ಜೈನ ಮುನಿಗಳನ್ನು ಹತ್ಯೆ ಮಾಡಿರುವುದು ಅತ್ಯಂತ ಅಮಾನವೀಯ ಕೃತ್ಯವಾಗಿದೆ. ಇಂತಹ ಘಟನೆಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ. ತಪ್ಪಿತಸ್ಥರಿಗೆ ಶಿಕ್ಷೆಯ ಜೊತೆ ಮನಃ ಪರಿವರ್ತನೆಯ ಶಿಕ್ಷಣ ನೀಡಬೇಕು ಎಂದರು.
    ಮಾಜಿ ಶಾಸಕ ಇಳ್ಕಲ್ ವಿಜಯಕುಮಾರ್, ಜೈನ ಸಮಾಜದ ಮುಖಂಡರಾದ ಇ.ವಿ. ಜಿತೇಂದ್ರ, ಅದಿರಾಜಯ್ಯ ಅಜ್ಜಪ್ಪ, ಶೀತಲ ಕುಮಾರ, ಸುಕೇಶ್ ಜೈನ್, ಸಂಜಯ್, ಭ್ರಮೆಶ್, ಸನ್ಮತಿ, ಆಗ್ರೋ ಶಿವಣ್ಣ, ಗೋಪಾಲ್ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts