ಕುರುಗೋಡು: ತಾಲೂಕು ವ್ಯಾಪ್ತಿಯ ಹಳ್ಳಿಗಳಲ್ಲಿ ಕಂದಾಯ, ಕನ್ನಡ ಸಂಸ್ಕೃತ ಇಲಾಖೆ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆ ಶನಿವಾರ ಅದ್ದೂರಿಯಾಗಿ ಸಂಚರಿಸಿತು.
ಇದನ್ನೂ ಓದಿ: ಕಂಪ್ಲಿಯಲ್ಲಿ ಜ್ಯೋತಿ ರಥಯಾತ್ರೆ ನಾಳೆ
ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಮಕ್ಕಳು ಜ್ಯೋತಿ ರಥಯಾತ್ರೆಯನ್ನು ಪೂರ್ಣಕುಂಭಗಳೊಂದಿಗೆ ಹಾಗೂ ಜಾನಪದ ಕಲರವದೊಂದಿಗೆ ಬರಮಾಡಿಕೊಂಡರು.
ನಂತರ ಗ್ರಾಮದಿಂದ ಕೋಳೂರು, ಕೋಳೂರು ಕ್ರಾಸ್, ದಮ್ಮೂರು ಗ್ರಾಮ ತಲುಪಿತು. ನ.19ರಂದು ದಮ್ಮೂರು ಗ್ರಾಮದಿಂದ ಸಂಚರಿಸಿ ಕುರುಗೋಡು ಪಟ್ಟಣಕ್ಕೆ ತಲುಪಲಿದೆೆ.
ರಥಯಾತ್ರೆಗೆ ತಹಸೀಲ್ದಾರ್ ಕೆ.ರಾಘವೇಂದ್ರರಾವ್ ಚಾಲನೆ ನೀಡಿ ಮಾತನಾಡಿ, ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷಗಳ ಈ ಸವಿನೆನಪಿಗಾಗಿ ರಾಜ್ಯ ಸರ್ಕಾರವು ಕನ್ನಡ ಭುವನೇಶ್ವರಿ ತಾಯಿಯ ಜ್ಯೋತಿ ರಥಯಾತ್ರೆಯ ಮೂಲಕ ಕನ್ನಡ ನಾಡಿನ ಹಿರಿಮೆಯನ್ನು ಪ್ರತಿ ಹಳ್ಳಿಗೂ ತಲುಪಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಲ, ಬಿಇಒ ಸಿದ್ದಲಿಂಗಮೂರ್ತಿ, ತಾಪಂ ಇಒ ಕೆ.ನಿರ್ಮಲಾ, ವ್ಯವಸ್ಥಾಪಕ ಅನೀಲ್ ಕುಮಾರ್, ಸೋಮಸಮುದ್ರ ಗ್ರಾಪಂ ಆಡಳಿತ ಮಂಡಳಿಯವರು, ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಂಘ-ಸಂಸ್ಥೆಯವರು, ಶಾಲಾ-ಕಾಲೇಜು ಮಕ್ಕಳು ಪಾಲ್ಗೊಂಡಿದ್ದರು.