More

    ಕಂಪ್ಲಿಯಲ್ಲಿ ಜ್ಯೋತಿ ರಥಯಾತ್ರೆ ನಾಳೆ

    ಕಂಪ್ಲಿ: ಕನ್ನಡ ರಾಜ್ಯೋತ್ಸವದ 50ರ ಸಂಭ್ರಮದ ಜ್ಯೋತಿ ರಥಯಾತ್ರೆಗೆ ನ.20ರಂದು ಬೆಳಗ್ಗೆ 9ಗಂಟೆಗೆ ಸೋಮಲಾಪುರ ಕ್ರಾಸ್ ಬಳಿ, ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಲಿದ್ದಾರೆ ಎಂದು ತಹಸೀಲ್ದಾರ್ ಶಿವರಾಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರೆ.

    ಇದನ್ನೂ ಓದಿ: ವಿಶ್ವಕಪ್​​ ಫೈನಲ್: ನಿಜವಾಗಿತ್ತು 2011ರ​ಲ್ಲಿ ಈ ಜ್ಯೋತಿಷಿ ನುಡಿದಿದ್ದ ಭವಿಷ್ಯ! ಪ್ರಸ್ತುತ ಭವಿಷ್ಯವಾಣಿ ಏನು?

    ಪೂರ್ವಭಾವಿ ಸಭೆ ನಿರ್ಣಯದಂತೆ ಎಮ್ಮಿಗನೂರಿನಲ್ಲಿ ಜ್ಯೋತಿರಥ ಮೆರವಣಿಗೆ ಆರಂಭಗೊಂಡು ನೆಲ್ಲೂಡಿ, ಕೊಟ್ಟಾಲ್ ಮೂಲಕ ಪಟ್ಟಣಕ್ಕೆ ಬೆಳಗ್ಗೆ 11ಗಂಟೆಗೆ ಆಗಮಿಸಲಿದೆ.

    ನಾನಾ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ, ತಾಲೂಕಿನ ಗ್ರಾಪಂ ಹಾಗೂ ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಾಲಾ ಮಕ್ಕಳು, ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರ, ಶಿಬರದಿನ್ನಿ ಸಮುದಾಯ ಭವನಗಳಲ್ಲಿ ಕಲಾತಂಡದವರಿಗೆ ವಾಸ್ತವ್ಯ ವ್ಯವಸ್ಥೆ ಕಲ್ಪಿಸಿದೆ.

    ನ.21ರಂದು ಬೆಳಗ್ಗೆ 10ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥಯಾತ್ರೆ ಜರುಗಲಿದೆ. ಸಂಜೆ 4ಗಂಟೆಗೆ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದೆ.

    ನ.22ರ ಬೆಳಗ್ಗೆ 10ಗಂಟೆಗೆ ಪಟ್ಟಣದಿಂದ ಜ್ಯೋತಿ ರಥಯಾತ್ರೆ ಸಾಗಿ ಸಣಾಪುರ, ಇಟಗಿ ಗ್ರಾಮಗಳ ಮೂಲಕ ತೆರಳಿ ಗಡಿಭಾಗದಲ್ಲಿ ಬೀಳ್ಕೊಡಲಾಗುವುದು.

    ಈ ವೇಳೆ ಟ್ರಾಫಿಕ್ ಜಾಮ್ ಆಗದಂತೆ, ಸಾರ್ವಜನಿಕರನ್ನು ನಿಯಂತ್ರಿಸಲು ತಾಲೂಕಿನ ವೃತ್ತದ ಆರಕ್ಷಕ ನಿರೀಕ್ಷಕರು ಸೂಕ್ತ ಬಂದೋಬಸ್ತ್ ಒದಗಿಸಲಿದ್ದಾರೆ. ರಥಯಾತ್ರೆಯ ಬೀದಿ ಸ್ವಚ್ಚತೆ, ಕುಡಿವ ನೀರು, ಆಸನ, ವಿದ್ಯುದ್ವೀಪ ಅಲಂಕಾರ ವ್ಯವಸ್ಥೆಗಳನ್ನು ನಿಯೋಜಿತ ಇಲಾಖೆ ಅಧಿಕಾರಿಗಳು ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts