More

    ಬನ್ನೇರುಘಟ್ಟ ಪಾರ್ಕಲ್ಲಿ ಶವವಾಗಿ ಸಿಕ್ಕ ಆನೆಮರಿ; ತನಿಖೆ ಆರಂಭ

    ಆನೇಕಲ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್​ ವ್ಯಾಪ್ತಿಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ(ಬಿಎನ್​ಪಿ)ದಲ್ಲಿ ಆನೆಮರಿಯೊಂದು ಸಾವಪ್ಪಿದೆ. ಆರು ವರ್ಷದ ಶ್ರೀರಾಮುಲು ಎಂಬ ಮರಿಯಾನೆ ಸೋಮವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿತ್ತು. ಇಂದು ಬನ್ನೇರುಘಟ್ಟದ ಕಾಡಂಚಿನ ಕಲ್ಲುಬಂಡೆ ಕೆಳಗೆ ಶವವಾಗಿ ಪತ್ತೆಯಾಗಿದೆ.

    2016ರಲ್ಲಿ ನಿಸರ್ಗ ಮತ್ತು ವನರಾಜ ಆನೆದಂಪತಿಗೆ ಜನಿಸಿದ ಗಂಡು ಆನೆಯಾಗಿದ್ದ ಶ್ರೀರಾಮುಲು ಸೋಮವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದು, ಪಾರ್ಕ್​ನ ಸಿಬ್ಬಂದಿ ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದರು. ಇಂದು ಶೋಧನಾ ತಂಡವು ಬಿಎನ್‌ಪಿ ಕಾಡಂಚಿನಲ್ಲಿ ಹುಡುಕಾಟ ನಡೆಸುತ್ತಿರುವಾಗ ಬಂಡೆ ಕೆಳಗೆ ಸತ್ತ ಆನೆಮರಿಯನ್ನು ತಂಡ ಪತ್ತೆ ಮಾಡಿತು.

    ಇದನ್ನೂ ಓದಿ: ಉಗ್ರಪ್ಪ ಎಲ್ಲಿ? ಚಪ್ಪಲಿ ತಗೊಂಡು ಹೊಡೀಬೇಕು… ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ಕಾರ್ಯಕರ್ತೆ ಆಕ್ರೋಶ

    ಆನೆಮರಿಯ ದೇಹ ಊದಿಕೊಂಡಿದ್ದು, ಎಡಭಾಗದ ದಂತ ಮುರಿದಿದೆ. ಆದರೆ ಮುರಿದ ದಂತವನ್ನು ಅಲ್ಲಿಯೇ ಪತ್ತೆ ಮಾಡಲಾಗಿದೆ. ಆದ್ದರಿಂದ ಕಾಡಾನೆ ದಾಳಿ ಮಾಡಿ ಶ್ರೀರಾಮುಲು ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಅಥವಾ ಇಳಿಜಾರಿನಲ್ಲಿ ಬಿದ್ದು ಸಾವನ್ನಪ್ಪಿರಬಹುದೆಂದೂ ಶಂಕಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಮೃತ ಆನೆ ಮರಿಯ ಮರಣೋತ್ತರ ಪರೀಕ್ಷೆಯ ಬಳಿಕ ಸತ್ಯಾಂಶ ಹೊರಬೀಳಲಿದೆ.

    ಸರ್ಕಾರಿ ಶಾಲಾ ಶಿಕ್ಷಕರಿಗೇಕೆ ಈ ಕಷ್ಟ? ಸಿಎಂ ಬೊಮ್ಮಾಯಿಗೆ ವಿದ್ಯಾರ್ಥಿನಿ ಪ್ರಶ್ನೆ

    ಚಿಕ್ಕ ವಯಸ್ಸಲ್ಲಿ ರೈತನ ವೇಷ ಧರಿಸಿದ್ದ ಈ ಹುಡುಗ ಯಾರು, ಹೇಳಬಲ್ಲಿರಾ?

    ಬಾಂಬ್​ ಭೀತಿ ಮೂಡಿಸಿದ್ದ ಸೂಟ್​ಕೇಸ್​ಗಳು! ಒಳಗಿದ್ದದ್ದು ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts