More

    ನ್ಯಾಯಾಧೀಶರು ಕೇಸ್ ಇತ್ಯರ್ಥಕ್ಕಿಂತ ಹೆಚ್ಚು ಜಡ್ಜ್​ಗಳ ನೇಮಕದಲ್ಲಿ ಕಾಲ ಕಳೆಯುತ್ತಿದ್ದಾರೆ: ಕಾನೂನು ಸಚಿವ

    ಅಹಮದಾಬಾದ್: ಸರ್ಕಾರದ ಇತರ ಕ್ಷೇತ್ರಗಳಲ್ಲಿನ ನೇಮಕದಲ್ಲಿ ನಡೆಯುವಂಥ ರಾಜಕೀಯ ನ್ಯಾಯಾಂಗ ವ್ಯವಸ್ಥೆಯಲ್ಲೂ ಇದೆ ಎಂಬುದನ್ನು ಕಾನೂನು ಸಚಿವರು ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಇದು ಜನಸಾಮಾನ್ಯರ ಅರಿವಿಗೆ ಬರದಂತೆ ನಡೆಯುತ್ತಿದೆ ಎಂಬುದನ್ನೂ ಹೇಳಿದ್ದಾರೆ.

    ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಕಟಿಸುತ್ತಿರುವ ಪಾಂಚಜನ್ಯ ನಿಯತಕಾಲಿಕೆ ಅಹಮದಾಬಾದ್​ನಲ್ಲಿ ಆಯೋಜಿಸಿದ್ದ ಸಾಬರಮತಿ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಕೊಲಿಜಿಯಂ ವ್ಯವಸ್ಥೆ ಬಗ್ಗೆ ಟೀಕೆ ಮಾಡಿದ್ದು, ನ್ಯಾಯಾಂಗ ವ್ಯವಸ್ಥೆಯಲ್ಲಿ ಅದೂ ನ್ಯಾಯಾಧೀಶರ ನೇಮಕದಲ್ಲಿ ಜನಸಾಮಾನ್ಯರಿಗೆ ನಡೆಯದಂತೆ ರಾಜಕೀಯ ನಡೆಯುತ್ತಿದೆ ಎಂದಿದ್ದಾರೆ. ಮಾತ್ರವಲ್ಲ, ಸಾಂವಿಧಾನಿಕ ನ್ಯಾಯಾಲಯಗಳ ನ್ಯಾಯಾಧೀಶರು ಪ್ರಕರಣಗಳ ಇತ್ಯರ್ಥಕ್ಕೆ ವ್ಯಯಿಸುವುದಕ್ಕಿಂತ ಹೆಚ್ಚಿನ ಸಮಯವನ್ನು ನ್ಯಾಯಾಧೀಶರ ನೇಮಕಕ್ಕೆ ಖರ್ಚು ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

    ನ್ಯಾಯಾಧೀಶರನ್ನು ನೇಮಿಸುವಂಥ ಕೊಲಿಜಿಯಂ ವ್ಯವಸ್ಥೆ ಬಗ್ಗೆ ದೇಶದ ಜನರಿಗೆ ಖುಷಿ ಇಲ್ಲ. ನಾವು ಸಂವಿಧಾನದ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳಬೇಕಿದ್ದರೆ ನ್ಯಾಯಾಧೀಶರನ್ನು ನೇಮಿಸುವ ಕಾರ್ಯ ಕೇಂದ್ರ ಸರ್ಕಾರದ್ದಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

    ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಿಸುವಂಥ ವ್ಯವಸ್ಥೆ ಜಗತ್ತಿನ ಎಲ್ಲೂ ಇಲ್ಲ. ಹೀಗೆ ನ್ಯಾಯಾಧೀಶರನ್ನು ನೇಮಿಸುವಾಗ ನಡೆಯುವ ರಾಜಕೀಯ ಜನರ ಗಮನಕ್ಕೆ ಬರುವುದಿಲ್ಲ ಎಂಬುದಾಗಿ ಸಚಿವರು ಹೇಳಿದ್ದಾರೆ.

    ಮಲಬದ್ಧತೆಯಿಂದ ತೊಂದರೆ ಅನುಭವಿಸುತ್ತಿದ್ದೀರಾ?; ಇಲ್ಲಿದೆ ನೋಡಿ ಪರಿಣಾಮಕಾರಿ ಮನೆಮದ್ದು..

    ದೀಪಾವಳಿಗೆ ಹಸಿರು ಪಟಾಕಿಗಷ್ಟೇ ಅವಕಾಶ; ಮದ್ದು ಸುಡಲಿಕ್ಕೂ ಅವಧಿ ನಿಗದಿ..

    ಈತ ನಿಮ್ಮಲ್ಲಿಗೂ ಬಂದಿರಬಹುದು!; ಗಸ್ತು ಪೊಲೀಸರ ಕೈಗೆ ಸಿಕ್ಕಿಬಿದ್ದ ನಕಲಿ ಆದಾಯ ತೆರಿಗೆ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts