More

    ನರೇಗಾ ದುಡಿಯುವ ವರ್ಗಕ್ಕೆ ಅನುಕೂಲ; ನ್ಯಾಯಾಧೀಶ ಸಿದ್ದರಾಜು

    ರಾಣೆಬೆನ್ನೂರ: ನರೇಗಾ ಕಾಯ್ದೆ ಜಾರಿಯಾದ ದಿನದಿಂದ ದುಡಿಯುವ ವರ್ಗಕ್ಕೆ ಅನುಕೂಲವಾಗಿದ್ದು ಕಾರ್ಮಿಕರು ವಲಸೆ ಹೋಗುವುದನ್ನು ತಪ್ಪಿಸಿದಂತಾಗಿದೆ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಸಿದ್ದರಾಜು ಹೇಳಿದರು.
    ಸ್ಥಳೀಯ ಗೌರಿಶಂಕರ ನಗರದ ನಿವೃತ್ತ ನೌಕರರ ಭವನದಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ತಾಪಂ, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಈ ಹಿಂದೆ ಬಂಡವಾಳಶಾಹಿಗಳು ಕಾರ್ಮಿಕರನ್ನು 15 ಗಂಟೆ ದುಡಿಸಿಕೊಳ್ಳುತ್ತಿದ್ದರು ಹಾಗೂ ಅವರಿಗೆ ಸೂಕ್ತ ರಕ್ಷಣೆ ಇರುತ್ತಿರಲಿಲ್ಲ. ಈ ಅನ್ಯಾಯದ ವಿರುದ್ಧ ಹೋರಾಡಲು ದೇಶ ವಿದೇಶಗಳಲ್ಲಿ ಸಂಘಟನೆಗಳು ಹುಟ್ಟಿಕೊಂಡವು. ಕಾರ್ಮಿಕರ ಮೇಲಿನ ಶೋಷಣೆ ತಡೆಯುವ ಉದ್ದೇಶದಿಂದಲೇ ದೇಶದಲ್ಲಿ ಕಾರ್ಮಿಕ ದಿನಾಚರಣೆ ಜಾರಿಗೆ ತರಲಾಯಿತು. ಕಾರ್ಮಿಕರ ಸ್ಥಿತಿಗತಿ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಕಾರ್ಮಿಕ ದಿನಾಚರಣೆಗೆ ನಿಜವಾಥ ಅರ್ಥ ಬರುತ್ತದೆ ಎಂದರು.
    ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಡಿ. ಬಳಿಗಾರ ಅಧ್ಯಕ್ಷತೆ ವಹಿಸಿದ್ದರು. ಅಸಂಘಟಿತ ವಲಯದ ಕಾರ್ಮಿಕರಿಗೆ ನಾಲ್ವಾ ಕಾನೂನು ಸೇವೆಗಳ ಯೋಜನೆ 2015 ಅನುಷ್ಠಾನದ ಕುರಿತು ವಕೀಲ ಕುಮಾರ ಮಡಿವಾಳರ, ನರೇಗಾ ಕುರಿತು ಜಿಲ್ಲಾ ಐಇಸಿ ಸಂಯೋಜಕ ಚನವೀರಸ್ವಾಮಿ ಹಿರೇಮಠ ಹಾಗೂ ಕಾರ್ಮಿಕರಿಗೆ ವಿವಿಧ ಯೋಜನೆಗಳ ಕುರಿತು ತಾಲೂಕು ಐಇಸಿ ಸಂಯೋಜಕ ಡಿ.ವಿ. ಅಂಗೂರ ಉಪನ್ಯಾಸ ನೀಡಿದರು.
    ಹನುಮಂತಪ್ಪ ಮಣ್ಣಮ್ಮನವರ, ಜಿ.ಪಿ. ನದಾಫ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts